ಮಹದಾಯಿ ಯೋಜನೆ : ಕಾನೂನು ಹೋರಾಟದ ಬಳಿಕವೇ ಡಿಪಿಆರ್ ದೊರಕಿದೆ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನನಗೆ ಗೊತ್ತಿಲ್ಲ. ಕಾನೂನು ಹೋರಾಟದ ಬಳಿಕವೇ ಡಿಪಿಆರ್ ದೊರಕಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಿದರೇ ಕಾನೂನು ಹೋರಾಟ ಮಾಡುತ್ತೇವೆ ಎಂಬ ಗೋವಾ ಸಚಿವರ ಹೇಳಿಕೆಗೆ ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು.
ಮಹದಾಯಿ ಅನುಷ್ಠಾನ ವಿಚಾರವಾಗಿ ಈಗಾಗಲೇ ಕಾನೂನು ಹೋಟರಾವಾಗಿ ಸುಪ್ರೀಂ ಕೋರ್ಟ್ ಆದೇಶ ಮೇಲೆ ಟ್ರಿಮಿನಲ್ ರಚನೆಯಾಗಿದೆ. 10 ವರ್ಷಗಳ ಕಾಲ ಈ ಕರಿತು ಎಲ್ಲ ಆಯಾಮಗಳ ಪರಿಶೀಲನೆ ಸಹ ನಡೆದಿದೆ. ಸುಪ್ರೀಂ ಆದೇಶದ ಅನ್ವಯ ಕೇಂದ್ರ ಸರ್ಕಾರ ಡಿಪಿಆರ್ ಗೆ ಅನುಮತಿ ನೀಡಿದೆ ಎಂದರು.