Belagavi News In Kannada | News Belgaum

ವಿದ್ಯುತ್‌ ತಂತಿ ತಗುಲಿ ಹತ್ತಿ ತುಂಬಿದ ಲಾರಿ ಸಂಪೂರ್ಣ ಭಸ್ಮ

ಗೋಕಾಕ: ಹತ್ತಿ ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿದ್ದರಿಂದ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ತಾಲೂಕಿನ ಅಂಕಲಗಿ ಮತ್ತು ಅಕ್ಕತಂಗೇರಹಾಳ ನಡುವೆ ಬೆಳಗಾವಿ-ಗೋಕಾಕ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಿತಿ ಮೀರಿ ಹತ್ತಿ ತುಂಬಿದ್ದರಿಂದ ಲಾರಿಗೆ ವಿದ್ಯುತ್ ತಂತಿ ತಾಗಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಓವರ್ ಲೋಡ್ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ.