Belagavi News In Kannada | News Belgaum

ಸಿದ್ದರಾಮಯ್ಯರನ್ನ ಕೆಣಕಲ್ಲ, ಡಿಕೆಶಿ ಸಿಂಗಲ್ ಟಾರ್ಗೆಟ್: ಶಾಸಕ ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿದ್ದರಾಮಯ್ಯ ಮೇಲೆ ಮೆತ್ತ.. ಡಿಕೆಶಿ ವಿರುದ್ಧ ಕೆಂಡ.. ಇದು ರಮೇಶ್ ಜಾರಕಿಹೊಳಿ ತಂತ್ರ. ಸಿದ್ದರಾಮಯ್ಯ ಕೆಣಕುವುದಿಲ್ಲ… ನನ್ನ ಯುದ್ಧ ಡಿಕೆಶಿ ಜೊತೆ ಮಾತ್ರ ಅಂತಾ ರಮೇಶ್ ಜಾರಕಿಹೊಳಿ ಸಿಂಗಲ್ ಟಾರ್ಗೆಟ್ ಶಪಥ ಮಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯರದ್ದು ಸ್ಟ್ಯಾಂಡರ್ಡ್ ರಾಜಕೀಯ. ಅವರ ವಿರುದ್ಧ ಮಾತಾಡಲ್ಲ. ಡಿಕೆಶಿ ಕೆಣಕಿದ್ರೆ ಉತ್ತರ ಕರ್ನಾಟಕದಲ್ಲಿ ನಮ್ ಪಾರ್ಟಿಗೆ ಲಾಸ್ ಇಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‍ ನಲ್ಲಿ ಮಾಸ್ ಲೀಡರ್. ಅವರ ತಂಟೆಗೆ ನಾನು ಹೋಗಲ್ಲ. ನನ್ನ ತಂಟೆಗೂ ಜಾಸ್ತಿ ಬಂದಿಲ್ಲ. ಇಲ್ಲಿ ತನಕ ಅವರ ರಾಜಕೀಯ ಆರೋಪ ಅಷ್ಟೇ ಮಾಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಬಗ್ಗೆ ನಾನು ಹಗುರವಾಗಿ ಮಾತನಾಡುವುದಿಲ್ಲ, ರಿಯಾಕ್ಟ್ ಮಾಡಲ್ಲ. ಹೀಗೆ ರಮೇಶ್ ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ವೇಳೆ ಮಾತನಾಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಮೇಲೆ ರಮೇಶ್ ಜಾರಕಿಹೊಳಿ ಸಾಫ್ಟ್ ಸಂದೇಶ ರವಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಹಾಗಾದ್ರೆ ಚುನಾವಣೆ ಮುಗಿಯುವ ತನಕ ಸಿದ್ದರಾಮಯ್ಯ ಮೇಲೆ ರಮೇಶ್ ಜಾರಕಿಹೊಳಿ `ಸಾಫ್ಟ್’ ಗೇಮ್ ಮುಂದುವರಿಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಹಾಗಾದ್ರೆ ಡಿಕೆಶಿ ವಿರುದ್ಧ ಸೇಡು ತೀರಿಸಿಕೊಳ್ಳುವ ತನಕ ನಿತ್ಯ ಸಮರ ಸಾರುತ್ತಾರಾ ರಮೇಶ್ ಜಾರಕಿಹೊಳಿ? ಆ ಸಿಡಿ ಸೇಡು ಹೇಗೆ ತೀರುತ್ತೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.