Belagavi News In Kannada | News Belgaum

ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ ತಹಶೀಲ್ದಾರ, ಇಒ ಅವರೊಂದಿಗೆ ಸಭೆ ನಡೆಸಿ ಉಡಿಕೇರಿ ಗ್ರಾಪಂ ಪಿಡಿಒ ಹಗರಣ ಕುರಿತು ನೋಟಿಸ್ ನೀಡಿದರು.

 

ಬೈಲಹೊಂಗಲ- ಕೃಷಿ ಭೂಮಿಯನ್ನು ಭೂ ಪರಿವರ್ತನೆಗೊಳಿಸದೆ ಪ್ಲಾಟುಗಳನ್ನಾಗಿ ಅಳವಡಿಸಿ ನಿಯಮ ಬಾಹಿರ ಇ-ಸ್ವತ್ತು ಉತಾರ ಪೂರೈಸಿದ ತಾಲ್ಲೂಕಿನ ಉಡಿಕೇರಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಮದ್ಯವರ್ತಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು ಉಪವಿಭಾಗಾಧಿಕಾರಿ ಶಶಿಧರ ಬಗಲಿ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಉಡಿಕೇರಿ ಗ್ರಾಮ ಪಂಚಾಯ್ತಿ ಪಿಡಿಒ ನಿಯಮ ಬಾಹಿರ ಇ-ಸ್ವತ್ತು ಉತಾರ ಪೂರೈಸಿದರ ಕುರಿತು ಮಂಗಳವಾರ ನಡೆದ ತಹಶೀಲ್ದಾರ, ತಾಲ್ಲೂಕು ಪಂಚಾಯ್ತಿ ಕಾರ್ಯನಿವಾರ್ಹಕ ಅಧಿಕಾರಿ, ಸಬ್ ರಜಿಸ್ಟಾರ್ ಸಭೆಯಲ್ಲಿ ಅವರು ಮಾತನಾಡಿದರು.
ಉಡಿಕೇರಿ ಗ್ರಾಮದಲ್ಲಿ ಭೂ ಪರಿವರ್ತನೆ ಆಗದೆ ಜಾಗೆಗಳನ್ನು ಪಂಚಾಯ್ತಿ ಆಸ್ತಿಯಲ್ಲಿ ದಾಖಲಾತಿ ಇರದವರ ಹೆಸರಿನಲ್ಲಿ ಪಿಡಿಒ ನಕಲಿ ಉತಾರಗಳನ್ನು ಪೂರೈಸಿದ್ದಾರೆ. ಈ ಕುರಿತು ಪರಿಶೀಲಿಸಿ ಕ್ರಮವಹಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಸಂಬಂಧಿಸಿದ ಇಒ ಅವರ ಗಮನಕ್ಕೂ ತಂದಿದ್ದರು. ಈ ಬಗ್ಗೆ ವರದಿ ಸಲ್ಲಿಸುವಂತೆ ಇಒ ಅವರಿಗೆ ಸೂಚಿಸಲಾಗಿತ್ತು. ತನಿಖಾ ತಂಡ ವರದಿ ಒಪ್ಪಿಸಿದ್ದು, ಪಿಡಿಒ ನಿಯಮ ಬಾಹಿರ ಇ-ಸ್ವತ್ತು ಉತಾರ ಪೂರೈಸಿರುವದು ಕಂಡು ಬಂದಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು’ ಎಂದರು.
‘32ಕ್ಕೂ ಹೆಚ್ಚಿನ ಜನರ ಹೆಸರಿನಲ್ಲಿ ಇ-ಸ್ವತ್ತು ನಕಲಿ ಕಂಪ್ಯೂಟರ್ ಉತಾರ ತೆಗೆದು ಒಂದು ಉತಾರಗೆ 10 ಸಾವಿರ ತೆಗೆದುಕಂಡು ಜನರನ್ನು ವಂಚಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೂಗಬಸಪ್ಪ ಬನವನ್ನವರ, ಉಮೇಶ ಹಿತ್ತಲಮನಿ ಆರೋಪಿಸಿದ್ದಾರೆ.
ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಕೆಲಸಗಳು ನಡೆಯುತ್ತಿದ್ದರೂ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ತಹಶೀಲ್ದಾರ, ತಾಪಂ. ಸಹಾಯಕ ನಿರ್ದೇಶಕರನ್ನು ತೀವೃವಾಗಿ ತರಾಟೆ ತೆಗೆದುಕೊಂಡರು.