ಫೆ. 05 ರಿಂದ ಜಾತ್ರಾ ಮಹೋತ್ಸವ ವೈಭವ ಪ್ರಾರಂಭ ಪವಾಡ ಪುರುಷ ನೇಸರಗಿ-ಮಲ್ಲಾಪೂರದ ಪೂಜ್ಯ ಗಾಳೇಶ್ವರರು
( ಫೆ. 05 ರಿಂದ 09 ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ನಿಮಿತ್ಯ ಲೇಖನ)

ಬೈಲಹೊಂಗಲ (ಜಿ. ಬೆಳಗಾವಿ)-ಈ ಭರತ ಭೂಮಿಯಲ್ಲಿ ಹಲವಾರು ಪುಣ್ಯ ಪುರುಷರು ಹಾಗೂ ಸಾಧು ಸಂತರು ಮಹಾತ್ಮರು ಪವಾಡ ಪುರುಷರು ನೆಲೆಸಿ ತಮ್ಮ ದಿವ್ಯಶಕ್ತಿಯಿಂದ ನಾಡನ್ನು ಸಮೃದಗೊಳಿಸಿದ್ದಾರೆ.ಅಂತಹ ಸಾಧಕರಲ್ಲಿ ದಿವ್ಯಚೈತನ್ಯ ಹೊಂದಿದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ-ಮಲ್ಲಾಪೂರಗ್ರಾಮದ ಪೂಜ್ಯಅವಧೂತ ಗಾಳೇಶ್ವರರು ಒಬ್ಬರಾಗಿದ್ದು ಈ ಭಾಗವನ್ನುತಮ್ಮತಪೋಶಕ್ತಿಯಿಂದಪಾವನಗೊಳಿಸಿದ್ದಾರೆ.
ನೇಸರಗಿಯ ಹತ್ತಿರದ ಮಲ್ಲಾಪುರವೆಂಬ ಚಿಕ್ಕಗ್ರಾಮದ ದಂಪತಿಗಳಾದ ಘಟಿಗೆಯ್ಯ ಹಾಗೂ ಗಂಗಮ್ಮರ ಪೂಣ್ಯ ಉದರದಲ್ಲಿ ಜನಿಸಿದ ಪೂಜ್ಯ ಗಾಳೇಶ್ವರರ ಮನೆತನಈ ಭಾಗದಲ್ಲಿ ಸಂಂಸ್ಕøತಿ-ಸಂಸ್ಕಾರಕ್ಕೆಹೆಸರುವಾಸಿಯಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಪೂಜೆ, ಪ್ರಾರ್ಥನೆ ಪುನಸ್ಕಾರಕ್ಕೆಪೂಜ್ಯಶ್ರೀಗಳು ಧಾರ್ಮಿಕ ಗ್ರಂಥಗಳನ್ನು ಓದಿ ಮುಂದೆ ಬೈಲಹೊಂಗಲದ ನಿರ್ವಾಣ ಶಿವಯೋಗಿಗಳ ದರ್ಶನ ಪಡೆದುಅವರಿಂದ ಗಾಳೇಶ್ವರರು ಎಂಬ ಹೆಸರನ್ನು ಪಡೆದುಕೊಂಡರು.
ಸಮಾಜಕ್ಕೆ ನನ್ನಿಂದ ಏನಾದರೂ ಸದುಪಯೋಗವಾಗಬೇಕೆಂಬ ತಮ್ಮ ಇಚ್ಚೆಯಂತೆ ಮಲ್ಲಾಪೂರದ ಹತ್ತಿರದಸುಕ್ಷೇತ್ರಶ್ರೀ ರಾಮಲಿಂಗೇಶ್ವರ ಕೊಳ್ಳದಲ್ಲಿ ಸುಮಾರು ವರ್ಷಗಳ ಕಾಲ ಕಠಿಣತಪಸ್ಸುಗೈದು ಲೋಕ ಕಲ್ಯಾಣಕ್ಕೆ ಅಗಿಯಾಗುತ್ತಿರುಲಾಗಲೇ ಆ ಸ್ಥಳದಲ್ಲಿ ಅಶರೀರÀÀವಾಣಿಯೊಂದು ಮಗು ನಿನ್ನಿಂದ ಲೋಕುಉದ್ದಾರವಾಗಬೇಕಾಗಿದೆಮುಮೂಕ್ಸಗಳ ಉದ್ದಾರಕ್ಕಾಗಿಇನ್ನು ಮೇಲೆ ನೀನು ಸದಾ ಲೋಕಸಂಚಾರ ಮಾಡು ಎಂಬ ನುಡಿಅಧೃಶವಾಗಿದರಿಂದ ಪೂಜ್ಯ ಗಾಳೇಶ್ವರರು ತಮ್ಮಕಾಲಾವಧಿಯಲ್ಲಿಧರ್ಮ ಪ್ರಚಾರದೊಂದಿಗೆ ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಹಲವಾರುಪವಾಡಗಳನ್ನು ಇಲ್ಲಿಸೃಷ್ಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹಡಗಿನಾಳ ಗ್ರಾಮದಲ್ಲಿ ವಿಶೇಷ ಪವಾಡಗೈದ ಶ್ರೀಗಳನ್ನು ಇಂದಿಗೂ ಅಲ್ಲಿನ ಭಕ್ತರುಅವರನ್ನು ಸದಾಕಾಲ ಸ್ಮರಿಸುತ್ತಿರುವುದು ವಿಶೇಷವಾಗಿದೆ. ಹೀಗೆ ಹಲವಾರು ನಗರ, ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಮಠ ಮಂದಿರಗಳಲ್ಲಿ ಭಾವೈಕತೆಗೆಯನ್ನು ಸೃಷ್ಟಿಸಿಜನಾನುರಾಗಿಯಾಗಿದ್ದಾರೆ.ಈ ಪ್ರಯುಕ್ತಆಯಾ ಸ್ಥಳಗಳಲ್ಲಿ ಪ್ರತಿ ವರ್ಷಜಾತ್ರೆಉತ್ಸವ ಸಂಸ್ಮರಣೆ, ಜಾಗರಣೆ ಮುಂತಾದ ವಿಧಾಯಕ ಕಾರ್ಯಾಗಳು ಇಂದಿಗೂ ನಡೆದುಕೊಂಡು ಬರುತ್ತಿದ್ದು ಸಮಾಜದ ಹಿಂತಚಿಂತನೆಗೆಅವರ ಶ್ರಮ, ಸಾಧನೆಹಿಡಿದಕೈಗನ್ನಡಿಯಾಗಿದೆ.
ಅಂತಿಮಘಟದಲ್ಲಿ ಮಲ್ಲಾಪೂರ ಗ್ರಾಮಕ್ಕೆ ಆಗಮಿಸಿದ ಗಾಳೇಶ್ವರರು ಈ ಭೂಮಿ ಸದಾಕಾಲ ಸಿರಿ ಸಮೃದ್ದಿಯಿಂದಕೂಡಿರಲ್ಲಿಜೊತೆಗೆಜನರು ಭಾವೈಕತೆಯಿಂದ ಬಾಳಲ್ಲಿ ಎಂದು ಹರಿಸಿ 1905 ರಲ್ಲಿತಮ್ಮ ಭೌತಿಕ ಶರೀರ ಬಿಟ್ಟು ಶಿವನಲ್ಲಿ ಲಿಂಗೈಕ್ಕರಾದರು.ತರುವಾಯ ಈ ಪೀಠಕ್ಕೆ ಪೂಜ್ಯ ಬಸವಂತಯ್ಯ ಶ್ರೀಗಳು ನಂತರರೇವಯ್ಯ ಸ್ವಾಮೀಜಿ ಹಾಗೂ ಸಿದ್ದರಾಮ ಶ್ರೀಗಳು ಭಕ್ತರನ್ನು ಉದ್ದರಿಸಿ ಶಿವನಲ್ಲಿ ಲಿಂಗೈಕ್ಕರಾದರು. ಪ್ರಸ್ತುತಘಟದಿಂದ ಮಠ ಬೆಳಗಬೇಕೇ ವಿನಃ ಮಠದಿಂದಘಟ ಬೆಳಗಬಾರದು ಎಂಬುದನ್ನುಘಾಡವಾಗಿಅರಿತು ಸುಮಾರು 1988 ರಲ್ಲಿ ಶ್ರೀಮಠಕ್ಕೆ ಪಾದಾರ್ಪಣೆಗೈದ ಪೂಜ್ಯ ಚಿದಾನಂದ ಸ್ವಾಮೀಜಿಯವರು ಸುಮಾರು 33 ವರ್ಷಗಳಿಂದ ಪೀಠಕ್ಕಂಟಿಕ್ಕೊಳ್ಳದೇ ಮಠದ ಮೂಲಕ ಧರ್ಮ ಪ್ರಚಾರದ ಕಂಕರ್ಯ ತೊಟ್ಟು ಸಮಾಜ ಸೇವೆಗಾಗಿ ತಮ್ಮನೇ ತಾವು ಅರ್ಪಿಸಿಕೊಂಡು ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳ ಮಾರ್ಗದರ್ಶನದಲ್ಲಿ ಪೀಠದ ಕಾರ್ಯಗಳನ್ನು ಮಾಡುತ್ತಾ ಸಮಾಜ ಮುಖಿಯಾಗಿ ಇಲ್ಲಿನ ಕಾರ್ಯಗಳನ್ನು ಇಮ್ಮಡಿಗೊಳಿಸಿದ್ದಾರೆ.
ಮಲ್ಲಾಪೂರದ ಗಾಳೇಶ್ವರ ಮಠದ ಜೊತೆಗೆ ಇನ್ನಿತರ ಶಾಖಾ ಮಠಗಳ ನೇತೃತ್ವ ವಹಿಸಿರುವ ಪೂಜ್ಯ ಚಿದಾನಂದ ಸ್ವಾಮೀಜಿ ಮಠದಲ್ಲಿ ಕಾಲಹರಣ ಮಾಡದೆ ಇತರರಿಗೆ ಮಾದರಿಯಾಗಬೇಕೆಂಬ ಸದಿಚ್ಚೆಯ ಹೊಂದಿ ಮಠಕ್ಕೆ ಮಾಣಕ್ಯವೆಂಬಂತೆ ಗೋಚರಿಸಿದ್ದಾರೆ.
ಮಲ್ಲಾಪೂರಗ್ರಾಮದ ಮಾಳನಗೌಡ ಗೌಡರ ಎಂಬ ಶರಣಜೀವಿ ತಮ್ಮಜಮೀನನ್ನು ಮಠದ ಕಾರ್ಯಗಳಿಗೆ ದಾನವಾಗಿ ನೀಡಿದ್ದರ ಪ್ರಯುಕ್ತ ಅಲ್ಲಿ ಇಂದೂ ಜನಕಲ್ಯಾಣವಾಗುವಂತಹ ಹಲವಾರು ಮಹತ್ವದ ಕಾರ್ಯಗಳು ನಡೆಯುತ್ತಿರುವುದು ವಿಶೇಷವಾಗಿದೆ.
ಚಿಕ್ಕಮಠವಾದರೂ ಬಹುದೊಡ್ಡ ಕಾರ್ಯಗಳು ಇಲ್ಲಿನಿರಂತರ ನೆರವೇರುತ್ತಿದ್ದು ನಿರ್ಗತಿಕರಿಗೆಆಶ್ರಯ, ಬಡ ಮಕ್ಕಳಿಗೆ ವಸತಿ ಶಿಕ್ಷಣ, ಅಕ್ಷರದಾಸೋಹ, ಸಾಮೂಹಿಕ ವಿವಾಹ, ಅನ್ನದಾಸೋಹ, ಜೊತೆಗೆ ಪುರಾಣ, ಪ್ರವಚಣ, ಕೀರ್ತನ, ಉತ್ಸವ, ಜಾತ್ರೆ ಹಾಗೂ ನಾಡಿನ ಮೆರಗನ್ನು ಹೆಚ್ಚಿಸುವ ಸಾಂಸ್ಕ್ರತಿಕ, ಸಂಗೀತಇಂತಹ ಹಲವಾರು ವೈವಿದ್ಯಮಯ ಕಾರ್ಯಕ್ರಮಗಳು ಪ್ರತಿ ವರ್ಷ ಈ ಮಠದಿಂದಜರುಗುತಲ್ಲಿದ್ದುಧಾರ್ಮಿಕ ಪರಿಸರದ ಪರಿಮಳ ಸೂಸಿ, ಆಧ್ಯಾತ್ಮದಕೊಂಡಿಯನ್ನುಇಲ್ಲಿ ನಿರಂತರವಾಗಿಜೋಡಿಸಲಾಗುತ್ತಿದೆ. 1 ರಿಂದ 10ನೇ ತರಗತಿಯವರಿಗೆ ವಸತಿ ಶಾಲೆ ನಿರ್ಮಿಸಿ ಆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ-ಸಂಸ್ಕ್ರತಿಯನ್ನು ಈ ಮಠದಲ್ಲಿ ನೀಡಲಾಗುತ್ತಿದೆ.ಈ ಮಠದಿಂದಇನ್ನೂ ಹಲವಾರು ಕಾರ್ಯಗಳು ನೆರವೇರಲಿದ್ದು ಈ ಪ್ರಯುಕ್ತ ಪ್ರತಿ ವರ್ಷ ಪೂಜ್ಯ ಶಿವಾನಂದ ಶ್ರೀಗಳ ನೇತೃತ್ವದಲ್ಲಿ ವೇಧಾಂತ ಪರೀಷತ್ತ ಏರ್ಪಡಿಸಿ ಘಣಕಾರ್ಯ ಮಾಡುತ್ತಿರುವುದು ಶ್ಲಾಂಘನೀಯವಾಗಿದೆ.
ಪ್ರತಿದಿನ ಕರ್ತುಗದ್ದುಗೆಗೆ ಮಹಾಪೂಜೆ, ಪೂಜ್ಯ ಶ್ರೀಗಳ ಕೀರಿಟ ಪೂಜೆ, ಪ್ರಾರ್ಥನೆ, ನಾಟಕ, ಭಜನೆ, ಗಿಗೀಪದ, ವಿವಿಧ ಸ್ಪರ್ಧೆಗಳು, ವಚನ ವೈಭವ, ಸಾಮೂಹಿಕ ವಿವಾಹ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ದನಗಳ ಪ್ರದರ್ಶನ ನೆರವೇರಲಿದೆ. ನಾಡಿನ ಹಲವಾರು ಪೂಜ್ಯ ಶ್ರೀಗಳು ಜಾತ್ರೆಯ ಅಂಗವಾಗಿ ಸಾನ್ನಿದ್ಯ ವಹಿಸಿ ಪ್ರತಿದಿನ ಆಶೀರ್ವಚನ ನೀಡಲಿದ್ದಾರೆ. ಅದೇ ಪ್ರಕಾರ ಅವಧೂತ ಗಾಳೇಶ್ವರರ ಮಠದ 49 ನೇ ಜಾತಾ ್ರಮಹೋತ್ಸವವು ಫೆ. 05 ರಿಂದ 09 ರವರೆಗೆ ವಿಜೃಂಭಣೆಯಿಂದ ಭಕ್ತಿ, ಭಾವಗಳಿಂದ ನಡೆಯಲಿವೆ.
ದಿ.05 ರಂದು ಮುಂಜಾ, 5 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿμÉೀಕ , 7 ಕ್ಕೆ ಅಗ್ನಿಪೂಜೆ, ಸಂಜೆ 6 ಕ್ಕೆ ಕಳಸಾರೊಹಣ ನಂತರ ಪ್ರವಚನ ನಡೆಯಲಿದೆ. ದಿ. 06 ರಂದು ಮಧ್ಯಾಹ್ನ 3 ಕ್ಕೆ ಬೈಲುಗಣದ ಕುಸ್ತಿಗಳು, ಸಂಜೆ 7-00 ಕ್ಕೆ ಪ್ರವಚನ ನಡೆಯಲಿವೆ. ದಿ. 07 ಹಾಗೂ 08 ರಂದು ರಾತ್ರಿ ವಿವಿಧ ಶ್ರೀಗಳಿಂದ ಪ್ರವಚನ, ದಿ. 09 ರಂದು ಮುಂ. 9 ಕ್ಕೆ ಪಲ್ಲಕ್ಕಿ ಉತ್ಸವ, ಮದ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ, ಸಂಜೆ 5 ಕ್ಕೆ ಪೂಜ್ಯ ಗಾಳೇಶ್ವರರ ಮಹಾರಥೋತ್ಸವ ಜರುಗಲಿದೆ. ಪ್ರತಿದಿನ ನಡೆಯಲಿರುವ ಪ್ರವಚನ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮಠಾಧೀಶರು ಆಗಮಿಸಿ ಪ್ರವಚನ ನೀಡಲಿದ್ದಾರೆಂದು ಜಾತ್ರಾ ಮಹೋತ್ಸವದ ಮಠದ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.