ಗೋಕಾಕ ತಾಪಂನಲ್ಲಿಜಮಾಬಂದಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು.

ಬೆಳಗಾವಿ: ಗೋಕಾಕ ನಗರದತಾಪಂಕಚೇರಿಯ ಸಭಾಂಗಣದಲ್ಲಿಜಿಪಂ ಉಪ ಕಾರ್ಯದರ್ಶಿ (ಆಡಳಿತ) ಭೀಮಪ್ಪ ಲಾಳಿ ಅವರಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಜಮಾಬಂದಿ ಪರಿಶೀಲನಾ ಸಭೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಪ್ಪ ಲಾಳಿ ಅವರು, 2022-23ನೇ ಸಾಲಿನ ಮುಂದುವರೆದ ಕಾಮಗಾರಿಗಳು ಹಾಗೂ ಅಂತಿಮ ಹಂತದ ಕಾಮಗಾರಿಗಳನ್ನು ಚುನಾವಣೆ ನೀತಿ ಸಂಹಿತೆಜಾರಿಯಾಗುವ ಒಳಗಾಗಿ ಅನುದಾನ ವ್ಯಪಗತವಾಗದಂತೆ ಸೂಕ್ತ ಕ್ರಮವಹಿಸಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಎಂ.ಬಿ.ಜಗದಾಳ ಅವರುಜಮಾಬಂದಿ ವಿವರ ಮಂಡಿಸಿದರು.
ಗೋಕಾಕ ಇಒ ಮುರಳಿಧರ ದೇಶಪಾಂಡೆ, ಸಹಾಯಕ ನಿರ್ದೇಶಕ (ಪಂರಾ) ವಿನಯಕುಮಾರ, ಜಿಪಂ ಸಿಬ್ಬಂದಿ ಸುನೀಲ ಮಾಳಗೊಂಡ, ಗೊವಿಂದರಾಜ ಶೇಡಬಾಳ ಹಾಗೂ ತಾಪಂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.