Belagavi News In Kannada | News Belgaum

ಗಾಂಜಾ ಕೇಸ್ ಆರೋಪಿಗಳ ಜತೆ ಬೆಳಗಾವಿ ಸಿಪಿಐ ಸಾಹೇಬರ ಡೀಲ್; ಕಮಿಷನರ್ ಗೆ ದೂರು

ಬೆಳಗಾವಿ: ಗಾಂಜಾ ಕೇಸ್ ಆರೋಪಿಗಳ ಜೊತೆ ಸಿಪಿಐ ಡೀಲ್ ಮಾಡಿಕೊಂಡಿದ್ದು, ಸಿಪಿಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ರಮಾಕಾಂತ ಕೊಂಡುಸ್ಕರ್ ಮನವಿ ಮಾಡಿದ್ದಾರೆ.

ಜನವರಿ 23ರ ಮಧ್ಯರಾತ್ರಿ 12.30ರ ಸುಮಾರಿಗೆ ಆರ್ ಪಿಡಿ ವೃತ್ತದ ಬಳಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಹಿಡಿದು ಟಿಳಕವಾಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಬಳಿಕ ಹಣ ಪಡೆದು ಬಿಟ್ಟು ಕಳಿಸಿದ್ದಾರೆ ಎಂದು ಶ್ರೀರಾಮಸೇನೆ ಹಿಂದೂಸ್ಥಾನ್ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಆರೋಪಿದ್ದಾರೆ.

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಹಿಡಿದು ಹಣ ಪಡೆದು ಬಿಟ್ಟು ಕಳಿಸಿದ ಆರೋಪ ಟಿಳಕವಾಡಿ ಸಿಪಿಐ ದಯಾನಂದ ಶೇಗುಣಸಿ ಮೇಲಿದ್ದು ಜನವರಿ 23ರ ಮಧ್ಯರಾತ್ರಿ 12.30ರ ಸುಮಾರಿಗೆ ಆರ್‍ಪಿಡಿ ವೃತ್ತದ ಬಳಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ವೇಳೆ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದು ಹಣ ಪಡೆದು ಬಿಟ್ಟು ಕಳಿಸಿದ್ದಾರೆ.

ಆರೋಪಿಗಳು ಹಾಗೂ ಜಪ್ತಿ ಮಾಡಿದ ಗಾಂಜಾ ಫೋಟೋ ತೆಗೆದು ಬಳಿಕ ಕೇಸ್ ದಾಖಲಿಸದೇ ಹಣ ಪಡೆದು ಬಿಟ್ಟು ಕಳಿಸಿದ್ದಾರೆ.

ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಆರೋಪಿಗಳ ಹೆಸರು, ಫೋಟೋ ಸಮೇತ ಸಿಪಿಐ ವಿರುದ್ಧ ದೂರು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತರ ಭರವಸೆ ನೀಡಿದ್ದಾರೆ.