Belagavi News In Kannada | News Belgaum

ಗುಡ್ಡಾಪೂರ ದಾನಮ್ಮಳ ಸಾಮಾಜಿಕ ಸೇವೆ ಅನನ್ಯ : ಕಾರಂಜಿ ಶ್ರೀಗಳು

ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ ೩೮ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ೪ : ತನ್ನ ರಚನಾತ್ಮಕವಾದ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಬೆಳಗಾವಿಯ ಶಹಾಪೂರದ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ ಬಹುಮೌಲಿಕವಾದ ಸೇವೆಯನ್ನು ಸಲ್ಲಿಸುತ್ತಿದೆ. ಮಹಾ ಶರಣೆ ದಾನಮ್ಮಳ ಧ್ಯೇಯದಂತೆ ಬಡವರ ಅನಾಥರ ಸೇವೆಯನ್ನು ಮಾಡುತ್ತಿದೆ ಎಂದು ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು.
ಅವರು ಶಹಾಪೂರದಲ್ಲಿ ಜರುಗಿದ ದಾನಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ ೩೮ನೇ ವಾರ್ಷಿಕೋತ್ಸವದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಪೂಜ್ಯರು ಆಶೀರ್ವಚನ ನೀಡಿದರು. ೧೨ನೇ ಶತಮಾನದ ಮಹಾಶರಣೆ ದಾನಮ್ಮ ದೀನದಲಿತರ, ನಿರ್ಗತಿಕರ, ಅನಾಥರ ಸೇವೆಯನ್ನು ಮಾಡುವ ಮೂಲಕ ಸಮಾಜಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಿದ್ದಳು. ದಾನ-ದಾಸೋಹದ ಸಿರಿಯಾಗಿ ಬೆಳಗಿದ ದಾನಮ್ಮಳ ಆದರ್ಶಪಥ ಇಂದಿಗೂ ಸಮಾಜದಲ್ಲಿ ಜೀವಂತವಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಶಹಾಪೂರದ ಬಸವೇಶ್ವರ ಟ್ರಸ್ಟ್ ಸಮಾಜದಲ್ಲಿ ನೊಂದವರ ಸೇವೆಯನ್ನು ಮಾಡುತ್ತಿರುವುದು ಅಭಿನಂದನಾರ್ಹವೆನಿಸಿದೆ. ೩೮ ವರ್ಷಗಳ ಹಿಂದೆ ಈ ಭಾಗದ ಸಮಾಜಮುಖಿ ಸೇವಕರಾಗಿದ್ದ ಮಹಾದೇವಪ್ಪಣ್ಣಾ ಕಿತ್ತೂರು, ಸಿದ್ರಾಮಪ್ಪಣ್ಣಾ ಬೆಂಬಳಗಿ, ಉಮದಿ, ಎಸ್.ವ್ಹಿ.ಬಾಗಿ ಅಂತಹ ಅನೇಕರು ಈ ಟ್ರಸ್ಟ್ನ್ನು ಕಟ್ಟಿ ಬೆಳೆಸಿದರು. ಅಂದಿನಿAದ ಟ್ರಸ್ಟ್ ಅನೇಕ ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜಕ್ಕೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗೆ ತನ್ನ ಜನಪರವಾದ ಕಾರ್ಯಗಳನ್ನು ಮುಂದುವರೆಸಲಿ ಎಂದು ಶುಭಕೋರಿದರು.
ಟ್ರಸ್ಟ್ನ ಅಧ್ಯಕ್ಷರಾದ ಚಂದ್ರಶೇಖರ ಬೆಂಬಳಗಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ದೂರದ ಗುಡ್ಡಾಪುರಕ್ಕೆ ಸಮಾನಾಂತರವಾಗಿ ದಾನಮ್ಮದೇವಿ ಮಂದಿರವು ಇಲ್ಲಿ ರೂಪಗೊಂಡಿದೆ. ಭಕ್ತರ ಆರಾಧ್ಯಕೇಂದ್ರವೆನಿಸಿದೆ. ಅದರೊಂದಿಗೆ ದಾನಮ್ಮದೇವಿಯ ಆದರ್ಶಪಥದಂತ ಹತ್ತುಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು, ಜಿಲ್ಲೆಯ ಅಂಗವಿಕಲ, ಅನಾಥಾಶ್ರಮ, ವೃದ್ಧಾಶ್ರಮ, ಬುದ್ಧಿಮಾಂಧ್ಯ, ಅಂಧ ಶಾಲಾ ಮಕ್ಕಳು ಮೊಲ್ಗೊಂಡು ಹಲವಾರು ಕೇಂದ್ರಗಳಿಗೆ ಲಕ್ಷಾಂತರ ರೂಪಾಯಿಗಳ ಸಾಮಗ್ರಿಯನ್ನು ಪ್ರತಿವರ್ಷ ವಿತರಿಸುತ್ತಾ ಬಂದಿದೆ. ಇದೊಂದು ಭಕ್ತಿಯ ಸೇವೆಯಾಗಿದ್ದು ಅನೇಕರು ಸಹಾಯ ಸಹಕಾರಗಳನ್ನು ನೀಡುತ್ತಿದ್ದಾರೆ. ಈ ಪವಿತ್ರವಾದ ಸೇವಾಕಾರ್ಯಕ್ಕೆ ಸಮಾಜವು ಸದಾಕೈಜೋಡಿಸಲೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಕ್ಷೇತ್ರದಲ್ಲಿ ಅದ್ವಿತೀಯ ಕೊಡುಗೆ ನೀಡಿದ ಶ್ರೀಮತಿ ಸುನೀತಾ ಬಸವರಾಜ ದೇಸಾಯಿಯವರಿಗೆ ಟ್ರಸ್ಟ್ ಗೌರವಿಸಿ ಸತ್ಕರಿಸಿತು. ಪೂಜ್ಯರು ಹಾಗು ಪದಾಧಿಕಾರಿಗಳು ಜಿಲ್ಲೆಯ ಸುಮಾರು ೨೨ ವಿವಿಧ ಸಂಘಸAಸ್ಥೆಗಳಿಗೆ ಸಾಮಗ್ರಿಯನ್ನು ವಿತರಿಸಿದರು. ವೇದಿಕೆಯ ಮೇಲೆ ಗುರುಬಸಪ್ಪಣ್ಣಾ ಚೊಣ್ಣದ, ಶ್ರೀಮತಿ ಅರುಣಾ ಬೆಂಬಳಗಿ, ವಿಜಯಲಕ್ಷಿö್ಮ ಉಮದಿ, ಅನೀಲ ಪಾಟೀಲ, ವಿ.ಸಿ.ಬೆಂಬಳಗಿ ವಿವೇಕ ಭೋಜ ಹಾಗೂ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಹೇಶ್ವರ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಚನ ಪ್ರಾರ್ಥನೆಯನ್ನು ಸಲ್ಲಿಸಿದರು. ಕಾರ್ಯದರ್ಶಿಗಳಾದ ಬಾಬಣ್ಣಾ ಕಿತ್ತೂರ ವಂದಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು.