Belagavi News In Kannada | News Belgaum

ಕ್ರೂಸರ್‌-ಕ್ಯಾಂಟರ್ ನಡುವೆ ಅಪಘಾತ: ಓರ್ವ ಮಹಿಳೆ ಸಾವು

ಅಥಣಿ: ಸವದತ್ತಿ ದೇವಿ ದರ್ಶನ ಪಡೆದು ಮರಳಿ ತಮ್ಮ ಊರಿನತ್ತ ಸಂಚರಿಸುವಾಗ ಕ್ರೂಸರ್‌ಗೆ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿ 14 ಪ್ರಯಾಣಿಕರ ಪೈಕಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಅಥಣಿ ತಾಲೂಕಿನ ಘಟನೆಟ್ಟಿ ಕ್ರಾಸ್ ಹತ್ತಿರ ನಡೆದಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ ಗ್ರಾಮದ ಜನರು ಸವದತ್ತಿ ದೇವಿ ದರ್ಶನ ಪಡೆದು ಕ್ರೂಸರ್‌ ಮೂಲಕ ಮರಳಿ ತಮ್ಮ ಊರಿನತ್ತ ಸಂಚರಿಸುವಾಗ ಎದುರಿನಿಂದ ಬಂದ ಕ್ಯಾಂಟರ್‌ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕ್ರೂಸರ್‌ ದಲ್ಲಿದ್ದ 14 ಪ್ರಯಾಣಿಕರ ಪೈಕಿ ಓರ್ವ ಮಹಿಳೆ ಮೃತ ಪಟ್ಟಿದ್ದಾಳೆ. ಬಾಕಿ 10 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಇವರನ್ನು ಬಿಜಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.