Belagavi News In Kannada | News Belgaum

ದ್ರಾಕ್ಷಿ ಬೆಳೆ ಹಾನಿ; ರೈತ ಆತ್ಮಹತ್ಯೆಗೆ ಶರಣು

ವಿಜಯಪುರ: ದ್ರಾಕ್ಷಿ ಬೆಳೆ ಹಾಳಾಗಿದ್ದಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾದ ರೈತರಾಗಿದ್ದಾರೆ. ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಘಟನೆ ನಡೆದಿದೆ. ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪರಣೆ ಮಾಡಿದ್ದರಿಂದ ಫಸಲಿಗೆ ಬಂದಿದ್ದ ದ್ರಾಕ್ಷಿ ಒಣಗಿ ಹೋಗಿತ್ತು.

ಫಸಲು ಒಣಗಿ ಹೋಗಿದ್ದ ಕಾರಣ ಮನೋಹರ ಅವರು ನೊಂದಿದ್ದರು. ದ್ರಾಕ್ಷಿ ಬೆಳೆಗಾಗಿ ಐದು ಲಕ್ಷ ರೂ.ಗೆ ಹೆಚ್ಚು ಹಣ ಖರ್ಚು ಮಾಡಿದ್ದರು. ಮಾಡಿದ ಖರ್ಚು ಬಾರದಂತಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.