Belagavi News In Kannada | News Belgaum

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಸರಣಿ: ಹಲವು ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಸರಣಿ: ಹಲವು ಕಾಮಗಾರಿಗಳಿಗೆ ಚಾಲನೆ

 

ಬೆಳಗಾವಿ: ಚುನಾವಣೆ ಕೇವಲ 3 ತಿಂಗಳಿರುವಾಗಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರಣಿ ಮುಂದುವರಿದಿದೆ. ಗುರುವಾರ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ರಾಜ್ಯದ ವಿವಿಧೆಡೆ ಶಾಸಕರು ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೆ ಲಕ್ಷ್ಮೀ ಹೆಬ್ಬಾಳಕರ್ ಮಾತ್ರ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸಿದ್ದಾರೆ. ಗುರುವಾರ ಮುತ್ನಾಳ, ಕಂಗ್ರಾಳಿ, ವಿರಪನಕೊಪ್ಪ ಮೊದಲಾದ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಚಾಲನೆಗೆ ಪೂಜೆ ನೆರವೇರಿಸಿದರು.

 

ಮುತ್ನಾಳ: 

 50 ಲಕ್ಷ ರೂ,ಗಳ ವೆಚ್ಚದಲ್ಲಿ ಮುತ್ನಾಳ ಗ್ರಾಮದ ರಸ್ತೆಗಳಿಗೆ ಫೇವರ್ಸ್ ಅಳವಡಿಕೆಯ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮದ ಒಳಾಂಗಣ ರಸ್ತೆಗಳ ಅಭಿವೃದ್ಧಿ ಹಾಗೂ ಫೇವರ್ಸ್ ಅಳವಡಿಕೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ 50 ಲಕ್ಷ ರೂ,ಗಳನ್ನು ಮಂಜೂರಿ ಮಾಡಿಸಿ, ರಸ್ತೆಗಳಿಗೆ ಫೇವರ್ಸ್ ಅಳವಡಿಕೆಯ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಕೇದಾರ ಮುತ್ನಾಳ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಗ್ರಾಮದ ಹಿರಿಯರು, ರುದ್ರಗೌಡ ಹುಬ್ಬಳ್ಳಿ, ಅಡಿವೆಪ್ಪಗೌಡ ಪಾಟೀಲ, ಈರನಗೌಡ ಪಾಟೀಲ, ಪಿ ಜಿ ಕೆಂಪಣ್ಣವರ, ಡಿ ಡಿ ಪಾಟೀಲ, ನಾಗಮ್ಮ ಕುರುಬರ, ಪಿ ಜೆ ಪಾರಿಶ್ವಾಡ್, ಆದಿನಾಥ ಯುವಕ ಮಂಡಳ, ಜ್ವಾಲಾಮಾಲಿನಿ ಸಂಘ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಮುತ್ನಾಳ ಗ್ರಾಮದಲ್ಲಿ ನೂತನ ಜೈನ ಭವನ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ನಿಧಿಯ ವತಿಯಿಂದ 50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಜೈನ ಭವನದ ಕಟ್ಟಡ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಕೇದಾರ ಮುತ್ನಾಳ ಶಾಖಾಪೀಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು, ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ರುದ್ರಗೌಡ ಹುಬ್ಬಳ್ಳಿ, ಅಡಿವೆಪ್ಪಗೌಡ ಪಾಟೀಲ, ಈರನಗೌಡ ಪಾಟೀಲ, ಪಿ ಜಿ ಕೆಂಪಣ್ಣವರ, ಡಿ ಡಿ ಪಾಟೀಲ, ನಾಗಮ್ಮ ಕುರುಬರ, ಪಿ ಜೆ ಪಾರಿಶ್ವಾಡ್, ಆದಿನಾಥ ಯುವಕ ಮಂಡಳ, ಜ್ವಾಲಾಮಾಲಿನಿ ಸಂಘ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
 
 ಮುತ್ನಾಳ ಗ್ರಾಮದ ಮುಸ್ಲಿಂ ಸಮಾಜದ ಮಸೀದಿಯ ಅಭಿವೃದ್ಧಿಗಾಗಿ ವೈಯಕ್ತಿಕ ಹಾಗೂ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಸೀದಿಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದೆರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಸಲೀಂ ನದಾಫ್, ನಭೀಸಾಬ್ ನದಾಫ್, ಅಪ್ಪಾಸಾಹೇಬ್ ನದಾಫ್, ಮುನ್ನಾ ನದಾಫ್, ಅಸ್ಲಮ್ ನದಾಫ್, ರುದ್ರಗೌಡ ಹುಬ್ಬಳ್ಳಿ, ಪಾರೀಶ್ ಅಣ್ಣ, ಬಸನಗೌಡ ಪಾಟೀಲ, ಅಡಿವೆಪ್ಪಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
 ಮುತ್ನಾಳ ಗ್ರಾಮದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು  ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಜೀವನಕುಮಾರ ಪಾರಿಶ್ವಾಡ್, ರುದ್ರಗೌಡ ಹುಬ್ಬಳ್ಳಿ, ಅಡಿವೆಪ್ಪಗೌಡ ಪಾಟೀಲ, ಈರನಗೌಡ ಪಾಟೀಲ, ಪಿ ಜಿ ಕೆಂಪಣ್ಣವರ, ಡಿ ಡಿ ಪಾಟೀಲ, ನಾಗಮ್ಮ ಕುರುಬರ, ಪಿ ಜೆ ಪಾರಿಶ್ವಾಡ್, ಆದಿನಾಥ ಯುವಕ ಮಂಡಳ, ಜ್ವಾಲಾಮಾಲಿನಿ ಸಂಘ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

ಕಂಗ್ರಾಳಿ ಕೆಎಚ್: 

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಕೆ ಎಚ್ ಗ್ರಾಮದ ಬೆನ್ನಾಳಕರ್ ರಸ್ತೆಯ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಣ ಬಿಡುಗಡೆ ಮಾಡಿಸಿದ್ದಾರೆ. ಗುರುವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಸೇರಿ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಜ್ಯೋತಿ ಪಾಟೀಲ, ಬಾಳು ಪಾಟೀಲ, ಲತಾ ಪಾಟೀಲ, ಅಲ್ಕಾ ಪಾಟೀಲ, ಮುತಗೇಕರ್ ಮೇಡಂ, ಜಿತೇಶ್ ಮೆನಸೆ, ಮೋಹನ್ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

 ಕಂಗ್ರಾಳಿ ಬಿ ಕೆ:

 ಕಂಗ್ರಾಳಿ ಬಿ ಕೆ ಗ್ರಾಮದ ನ್ಯೂ ವೈಭವ್ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಣ ಮಂಜೂರು ಮಾಡಿಸಲಾಗಿದ್ದು, ಅದರ ಪ್ರಕಾರ ಇವತ್ತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ Mrinal Hebbalkar ಸೇರಿ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಪೂನಂ ಪಾಟೀಲ, ದತ್ತಾ ಪಾಟೀಲ, ಅನಿಲ ಪಾವಸೆ, ಬಂಡೆ ನವಾಜ ಸೈಯದ್, ಅಯೂಬ್ ಪಠಾಣ, ಶರೀಫ್ ಸನದಿ, ರಿಜ್ವಾನ್ ಪಠಾಣ ಸದ್ದಾಂ ಮುಲ್ಲಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವಿರಪನಕೊಪ್ಪ:

 ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿರಪನಕೊಪ್ಪ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 53 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಗುರುವಾರ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
 ಈ ಸಮಯದಲ್ಲಿ ಗ್ರಾಮದ ಹಿರಿಯರು, ಸೂರ್ಯಗೌಡ ಪಾಟೀಲ, ಬಸನಗೌಡ ಪಾಟೀಲ, ಸಂಗನಗೌಡ ಪಾಟೀಲ, ಪ್ರವೀಣಗೌಡ ಪಾಟೀಲ, ಫಕೀರಗೌಡ ಪಾಟೀಲ, ಸಿದ್ದಪ್ಪ ಮಾದಿಗರ, ಬಸವಂತ ಅದೃಷಿ, ಶಂಕರಗೌಡ ಪಾಟೀಲ, ರಾಜು ಹಣಬರ, ವಿಠ್ಠಲ ಅಮೃಪುರ, ರಾಘವೇಂದ್ರ ಮಾದಿಗರ, ಮಹಾಂತೇಶ ಹಿರೇಮಠ, ರಾಜು ಅಮೃಪುರ ಮುಂತಾದವರು ಉಪಸ್ಥಿತರಿದ್ದರು.