Belagavi News In Kannada | News Belgaum

ಅರ್ಜಿ ಆಹ್ವಾನ

ಅರ್ಜಿ ಆಹ್ವಾನ : “ತಂಬಾಕು ಮುಕ್ತ ಯುವಪೀಳಿಗೆ -2025 “ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಪಾತ್ರದ ಕುರಿತು ಬೆಳಗಾವಿ ಪ್ರಾದೇಶಿಕ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ..

“ತಂಬಾಕು ಮುಕ್ತ ಯುವಪೀಳಿಗೆ -2025 “ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಪಾತ್ರದ ಕುರಿತು ಬೆಳಗಾವಿ ಪ್ರಾದೇಶಿಕ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ..

ಬೆಳಗಾವಿ, ಫೆ.10: ಪ್ರತಿ ವರ್ಷ 13 ಲಕ್ಷ ಜನರು ತಂಬಾಕು ಉತ್ಪನ್ನಗಳ ಬಳಕೆಯಿಂದಾಗಿ ಸಾವನ್ನಪುತ್ತಾರೆ. ತಂಬಾಕು ಉದ್ಯಮವು ಮಕ್ಕಳು ಮತ್ತು ಯುವಪೀಳಿಗೆಯನ್ನು ಗುರಿಯಾಗಿಸಿಕೊಂಡಿದೆ. ಮಕ್ಕಳು ಮತ್ತು ಯುವ ಪೀಳಿಗೆಯು ತಂಬಾಕು ಉತ್ಪನ್ನಗಳನ್ನು ಬಳಸಲು ಅಥವಾ ಆಕರ್ಷಿತರಾಗಲು ತಂಬಾಕು ಉದ್ಯಮವು ವಿವಿಧ ವಿನ್ಯಾಸ, ಉತ್ತಮ ಪ್ರಚಾರ ಮತ್ತು ಜಾಹಿರಾತುಗಳ ಮೂಲಕ ತಂಬಾಕು ಉತ್ಪನ್ನಗಳಿಗೆ ಆಕರ್ಷಿತರಾಗುವಂತೆ ಮಾಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಗ್ಲೋಬಲ್ ಅಡಲ್ಟ್ ಟೋಬ್ಯಾಕೋ ಸರ್ವೇ 2016-17 ರಂತೆ, ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಮಾಡುವವರ ಸಂಖ್ಯೆ 22.8 %, (ಸುಮಾರು 3 ಕೋಟಿ ಜನಸಂಖ್ಯೆ) ಅದರಲ್ಲಿ 8.8% ಧೂಮಪಾನಿಗಳು ಮತ್ತು 16.3 % ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಮಾಡುವವರಾಗಿದ್ದಾರೆ ಹಾಗೂ 23.9% ರಷ್ಟು ಜನ ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷವಾಗಿ ಧೂಮಪಾನಕ್ಕೆ ಒಳಗಾಗುತ್ತಿದಾರೆ ಎಂದು ವರದಿಯಲ್ಲಿ ತಿಳಿಸಿರುತ್ತದೆ.
ಇನ್ನೊಂದು ಆಘಾತಕಾರಿ ವಿಷಯವೆನೆಂದರೆ, ರಾಜ್ಯದಲ್ಲಿ ಸುಮಾರು 19 ವರ್ಷಕ್ಕೆ ಯುವಕ/ಯುವತಿಯತಿಯರು ತಂಬಾಕು ಉತ್ಪನ್ನಗಳ ಸೇವೆನೆಯನ್ನು ಪ್ರಾರಂಭಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುತ್ತಾರೆ ಎಂದು ಡಾ.ಬಿ.ಎನ್ ತುಕ್ಕಾರ ಜಿಲ್ಲಾ ಸರ್ವೆಕ್ಷಣಾಧಿಕಾರಿಗಳು/ತಂಬಾಕು ನಿಯಂತ್ರಣಾಧಿಕಾರಿಗಳು ಬೆಳಗಾವಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಹಿನ್ನೆಲೆಯಲ್ಲಿ, “ತಂಬಾಕು ಮುಕ್ತ ಯುವಪೀಳಿಗೆ -2025 ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಪಾತ”್ರ ದ ಕುರಿತು ಬೆಳಗಾವಿ ಪ್ರಾದೇಶಿಕ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಫೆ. 9, 2023 ರಂದು ಸುವರ್ಣ ಸೌಧದಲ್ಲಿ ಸಭಾಂಗಣದಲ್ಲಿ ಹಮ್ಮಿಕೋಳ್ಳಲಾಯಿತು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅತಿಥಿಗಳನ್ನು ಹಾಗೂ ಭಾಗೀದಾರರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ಮಹೇಶ ಕೋಣಿ ಅವರು ಎಲ್ಲ ಅಧಿಕಾರಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಉಧ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಪ್ರಾದೇಶಿಕ ಆಯುಕ್ತರಾದ ಎಮ್.ಜಿ ಹೀರೆಮಠ ಅವರು ವಹಿಸಿದ್ದು, ಯುವ ಪೀಳಿಗೆಯನ್ನು ತಂಬಾಕು ಸೇವನೆಯಿಂದ ಕಾಪಾಡುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಪಾತ್ರ ಬಹು ಮುಖ್ಯವಾಗಿರುತ್ತದೆ. ಈಗಾಗಲೇ ರಾಜ್ಯದಲ್ಲಿ 3 ಕೋಟಿ ಜನರು ತಂಬಾಕು ವ್ಯಸನಿಗಳಾಗಿದ್ದು ಇವರನ್ನು ತಂಬಾಕು ಮುಕ್ತಗೊಳಿಸಿದ್ದು ಬಹಳ ಕಷ್ಟ ಸಾಧ್ಯ.
ತಂಬಾಕು ಕಂಪನಿಗಳು ಯುವಕರನ್ನು ಗುರಿಯಾಗಿಸಿ ಜಾಹಿರಾತುಗಳನ್ನು ಮಾಡುತ್ತಿದ್ದು ಯುವಕರು ಇಂಥಹ ಜಾಹಿರಾತಿಗೆ ಮರುಳಾಗಿ ಶಾಲಾ/ಕಾಲೇಜು sಸಂಧರ್ಬದಲ್ಲಿ ತಂಬಾಕು ಸೇವನೆ ಆರಂಭಿಸುತ್ತಾರೆ ಹಾಗಾಗಿ ಮುಂದಿನ ದಿನದಲ್ಲಿ ತಂಬಾಕು ಉತ್ಪನ್ನಗಳಿಗೆ ಯುವಕ-ಯುವತಿಯರು ತಂಬಾಕು ಸೇವನೆ ಮಾಡದಂತೆ ಅಗತ್ಯ ಕ್ರಮವಹಿಸುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಸಂಜಿವ ಎಮ್. ಪಾಟೀಲ ಇವರು ಮಾತನಾಡುತ್ತಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನುಷ್ಯನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಮತ್ತು ಸಿಗರೇಟ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುವುದಲ್ಲದೆ ಇನ್ನೊಬ್ಬರ ಆರೋಗ್ಯವು ಕೂಡಾ ಹಾಳಾಗುತ್ತದೆ ನಾವೆಲ್ಲರೊ ಪರೋಕ್ಷವಾಗಿ ತಂಬಾಕು ಸೇವನೆಗೆ ಒಳಗಾಗುತ್ತಿದ್ದೆವೆಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಕೆ. ಶಾಂತಲಾ ಬೆಳಗಾವಿ ಹಾಗೂ ಡಾ.ಪುಷ್ಪಾ ದೊಡಮನಿ ವಿಭಾಗೀಯ ಸಹ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ವಿಭಾಗ ಬೆಳಗಾವಿ ಇವರು ಕಾರ್ಯಾಗಾರದಲ್ಲಿ ಉಪಸ್ಥರರಿದ್ದರು.
ಬೆಳಗಾವಿ ವಿಭಾಗದ ಎಳು ಜಿಲ್ಲೆಯ ವಿವಿಧ ಇಲಾಖೆಗಳಾದ ಆರೋಗ್ಯ ಪೋಲಿಸ್ ಶಿಕ್ಷಣ, ಕಾರ್ಮಿಕ, ನಗರಾಭಿವೃಧ್ದಿ, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸುಮಾರು 80 ಅಧಿಕಾರಿಗಳು ಭಾಗವಹಿಸಿದ್ದರು.
ಡಾ: ಗೌತಮ್ ಎಸ್,  ಬೆಳಗಾವಿ ಇವರು ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಧುಮಪಾನದಿಂದ ಉಂಟಾಗಬಹುದಾದ ಶ್ವಾಸಕೋಶದ ಬಗ್ಗೆ ಪಿಪಿಟಿ ಮೂಲಕ ಉಪನ್ಯಾಸ ನೀಡಿದರು.
ಇನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪ್ರಭಾಕರ, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರು,ರಾಜ್ಯ ತಂಬಾಕು ನಿಯಂತ್ರಣ ಕೋಶ ಬೆಂಗಳೂರು ಇವರು “ತಂಬಾಕು ಮುಕ್ತ ಯುವಪೀಳಿಗೆ -2025 “ಅನುಷ್ಟಾನದಲ್ಲಿ ವಿವಿಧ ಇಲಾಖೆಗಳ ಪಾತ್ರದ ಕುರಿತು” ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ. ಮಹಾಂತೇಶ ಬಿ. ಉಳ್ಳಾಗಡ್ಡಿ ರಾಜ್ಯ ತಂಬಾಕು ನಿಯಂಯ್ರಣ ಕೋಶ ಬೆಂಗಳೂರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

 

ಶ್ರವಣ ದೋಷವುಳ್ಳ ವಿಕಲಚೇತನರಿಗೆ ಹೊಲಿಗೆ ಯಂತ್ರಗಳ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ, ಫೆ.10: 2022-23 ನೇ ಸಾಲಿನ ಇಲಾಖೆಯ ಹೊಲಿಗೆ ಯಂತ್ರ ಯೋಜನೆಯಡಿ ಅಕ್ಷರಸ್ಥರಾಗಿರುವ ಶ್ರವಣ ದೋಷವುಳ್ಳ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಹೊಲಿಗೆ ಯಂತ್ರಗಳ ಸೌಲಭ್ಯಕ್ಕಾಗಿ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್:-www.dwdsc.kar.nic.in ಇ-ಸೇವೆಗಳ ಆನ್‍ಲೈನ್ ನಲ್ಲಿ ಪಡೆಯಬಹುದಾಗಿದೆ, ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ದ್ವಿ ಪ್ರತಿಯಲ್ಲಿ ಮ್ಯಾನುವಲ್ ಅರ್ಜಿಗಳನ್ನು ಕೊನೆಯ ದಿನಾಂಕ ಫೆ.28, 2023 ಸಂಜೆ 5 ಗಂಟೆ ವರೆಗೆ ಆಯಾ ತಾಲೂಕುಗಳ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.) ಗೆ ಸಲ್ಲಿಸಬಹುದಾಗಿದೆ, ತಡವಾಗಿ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ದಾಖಲಾತಿಗಳು:
ವಿಕಲಚೇತನರ ಯು.ಡಿ.ಐ.ಡಿ. ಕಾರ್ಡ (ಕನಿಷ್ಠ ಶೇ.40 ರಷ್ಟು ಅಂಗವಿಕಲತೆ), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ವಿದ್ಯಾರ್ಹತೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರ (ಟಿ.ಸಿ), ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ವೃತ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರ, ಯಾವುದೇ ಮೂಲದಿಂದ ಈ ಸೌಲಭ್ಯ ಪಡೆದಿರುವುದಿಲ್ಲವೆಂಬ ಬಗ್ಗೆ ನೋಟರಿಯಿಂದ ದೃಢೀಕರಿಸಿದ ರೂ. 100/-ಗಳ ಬಾಂಡ್ ದಾಖಲಾತಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣಿ ಸಂಖ್ಯೆ:0831-2476096/97 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಲೋಕೋಪಯೋಗಿ ಇಲಾಖೆ: ರಸ್ತೆ ವಾಹನ ಸಂಚಾರಿ ಗಣತಿ ಫೆ.22 ರಿಂದ

 

ಬೆಳಗಾವಿ, ಫೆ.10 : ಕರ್ನಾಟಕ ರಾಜ್ಯದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2022-23 ನೇ ಸಾಲಿನ ರಸ್ತೆ ವಾಹನ ಸಂಚಾರಿ ಗಣತಿ ಕಾರ್ಯ ಫೆ.22, 2023 ಬೆಳಿಗ್ಗೆ 6 ಗಂಟೆಯಿಂದ ಫೆ.24, ಬೆಳಿಗ್ಗೆ 6 ಗಂಟೆಯ ವರೆಗೆ 2 ದಿನಗಳ ಕಾಲ ನಡೆಯಲಿದೆ.
ಈ ಗಣತಿ ಕಾರ್ಯವು ಲೋಕೋಪಯೋಗಿ ಇಲಾಖೆಯ ಎಲ್ಲಾ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ಗಣತಿ ಕಾರ್ಯ ಕೈಕೊಳ್ಳಲಾಗುತ್ತಿದ್ದು, ರಸ್ತೆಗಳ ಬದಿಯಲ್ಲಿ ತಾತ್ಕಾಲಿಕ ಗಣತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಗಣತಿ ಕೇಂದ್ರಗಳಿದ್ದಲ್ಲಿ “ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರ ಇರಲಿದೆ. ವಾಹನ ಸವಾರರು ವಾಹನಗಳನ್ನು ನಿಧಾನವಾಗಿ ಚಲಿಸಿ” ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿರುತ್ತದೆ.
ಆದ್ದರಿಂದ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರು ಈ ವಾಹನ ಗಣತಿ ಕೇಂದ್ರಗಳ ಮುಂದೆ ತಮ್ಮ ವಾಹನಗಳನ್ನು ನಿಧಾನವಾಗಿ ಚಲಾಯಿಸಿಕೊಂಡು ಮುಂದೆ ಸಾಗಬೇಕು, ಸದರಿ ವಾಹನ ಕಾರ್ಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಫೆ. 12 ರಂದು ಬೆಳಗಾವಿಯ ವಿವಿಧ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

 

ಬೆಳಗಾವಿ, ಫೆ.10 : ಬೆಳಗಾವಿಯ 110 ಕೆ.ವ್ಹಿ ವಡಗಾಂವ ಉಪಕೇಂದದ್ರ ನಾಲ್ಕನೇಯ ತ್ರೈಮಾಸಿಕ ನಿರ್ವಹಣೆ ಕಾರ್ಯದ ಪ್ರಯುಕ್ತ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ರವಿವಾರ ಫೆ.12 2022 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು:
ಎಫ್-04 ಬಜಾರ ಗಲ್ಲಿಯ ವ್ಯಾಪ್ತಿಯ ಭಾರತ ನಗರ, ಲಕ್ಷ್ಮಿ ನಗರ, ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ ರೋಡ, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ, ಸರ್ವೊದಯ ಕಾಲನಿ, ನಝರಕ್ಯಾಂಪ, ರಾಮದೇವ್‍ಗಲ್ಲಿ, ವಿಷ್ಣು ಗಲ್ಲಿ,ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್ ವಿದ್ಯುತ್ ವ್ಯತ್ಯಯ ಆಗಲಿದೆ.
ಅದೇ ರೀತಿಯಲ್ಲಿ ಎಫ್-5 ವಡಗಾಂವಿ ವ್ಯಾಪ್ತಿಯ ನೇಕಾರ ಕಾಲನಿ, ನಿಜಾಮಿಯಾ ನಗರ,ರಾಯತ್ ಗಲ್ಲಿ,ವಿಷ್ಣುಗಲ್ಲಿ ಹಾಗೂ ಎಫ್-6 ಹಳೆ ಬೆಳಗಾವಿಯ ಗಣೇಶ ಪೇಠ, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ ನಗರ, ಬಸ್ತಿ ಗಲ್ಲಿ, ಎಫ್-7 ಹೊಸೂರಿನ ವ್ಯಾಪ್ತಿಯ ಮಾದವ ರಸ್ತೆ, ಕಪಲೇಶ್ವರ ಕಾಲೋನಿ, ಮಾಹಾವೀರ ಕಾಲೋನಿ, ಸಮರ್ಥ ನಗರ, ಓ ನಗರ, ಪಾಟೀಲ ಗಲ್ಲಿ, ಎಫ್-11 ಸುಭಾಷ ಮಾರ್ಕೇಟಿನ ಹಿಂದವಾಡಿ,ರಾನಡೆ ಕಾಲನಿ,ಗೋವಾ ವೇಸ್, ಹಾಗೂ ಎಫ್-12 ವಿದ್ಯಾನಗರದ ವ್ಯಾಪ್ತಿಯ ಅನಗೋಳ, ವಿದ್ಯಾನಗರ, ಅಂಬೇಡ್ಕರ ನಗರ, ರಾಜಹಂಸಗಲ್ಲಿ, ಮಹಾವೀರ ನಗರ, ಬಾಂಧುರಗಲ್ಲಿ,ಸಂತ ಮೀರಾ ಶಾಲೆ ರಸ್ತೆ, ಅನಗೋಳ ವಡಗಾಂವರಸ್ತೆ, ಗುಲಮೋಹರ ಕಾಲೋನಿ, ಸಮೃದ್ಧಿ ಕಾಲೋನಿ, ಪಾರಿಜಾತ ಕಾಲೋನಿ, ಓಂಕಾರ ನಗರ ಆಗಲಿದೆ.
ನಗರದ ಎಫ್-13 ಭಾಗ್ಯನಗರ ವ್ಯಾಪ್ತಿಯ ಭಾಗ್ಯ ನಗರ 1ನೇ ಕ್ರಾಸ್ ದಿಂದ 10ನೇ ಕ್ರಾಸ್ ವರೆಗೆ, ಎಫ್-14 ಯಳ್ಳೂರ ರೋಡಿನ ವ್ಯಾಪ್ತಿಯ ಆನಂದ ನಗರ, ಸಂಭಾಜಿ ನಗರ, ಕೆ.ಎಲ್.ಇ ಯಳ್ಳೂರ ರಸ್ತೆ, ಆದರ್ಶನಗರ, ಹಿಂದವಾಡಿ, ಜೈಲ ಶಾಲೆ,ಫುಲೆ ಗಲ್ಲಿ, ಅನ್ನಪೂರ್ಣೆಶ್ವರಿ ನಗರ, ಗಣೇಶನಗರ, ಹಾಗೂ ಎಫ್-02 ಸುವರ್ಣಸೌಧದ ಸುವರ್ಣಸೌಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಗಾರ

ಬೆಳಗಾವಿ, ಫೆ.10   : ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೆ.ಎಚ್.ಪಿ.ಟಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ತರಬೇತಿದಾರರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಭೀಮಪ್ಪಾ ಲಾಳಿ ಅವರು ಕಾರ್ಯಕ್ರಮವನ್ನು ಉದ್ಘಾಟಸಿ ಅದರೊಂದಿಗೆ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು, ಮತ್ತು ತರಬೇತಿಯನ್ನು ಎಲ್ಲರೂ ಉತ್ತಮವಾಗಿ ಪಡೆದುಕೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ (ಆಡಳಿತ) ಭೀಮಪ್ಪಾ ಲಾಳಿ ಅವರು ಪ್ರಸ್ತಾವಿಕ ಭಾಷಣದಲ್ಲಿ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಯೋಜನೆ ಕುರಿತು ಮಾತನಾಡಿದರು.
ಕಾರ್ಯಾಗಾರದಲ್ಲಿ ಬೆಳಗಾವಿ ಜಿಲ್ಲೆಯ 14 ತಾಲೂಕಿನ ತಾಲೂಕ ಪಂಚಾಯತ ಎ.ಡಿ.ಪಿ.ಆರ್, ತಾಲೂಕ ಆಸ್ಪತ್ರೆಯ ಬಿ.ಹೆಚ್.ಇ.ಓ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್ ವೈಸರ್, ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದ ವಲಯ ಮುಖ್ಯಸ್ಥರಾದ ಭಾರತಿ, ಬಿಜಾಪುರ ಜಿಲ್ಲಾ ಸಂಯೋಜಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಹೇಶ ಕೋಣಿ, ಜಿಲ್ಲೆಯ ಎಲ್ಲ ತಾಲೂಕ ಸಂಯೋಜಕರು ಉಪಸ್ಥಿತರಿದ್ದರು.//