Belagavi News In Kannada | News Belgaum

ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲ ಅಮಾನತು

ಕಲಬುರಗಿ: ಶಾಲೆಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪದಲ್ಲಿ ಉರ್ದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಂಶುಪಾಲರ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಾಚಾರ್ಯರನ್ನು ಅಮಾನತು ಮಾಡಲಾಗಿದೆ.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಸತ್ತಾರ ಸಾಬ್ ಮತ್ತು ಪ್ರಾಂಶುಪಾಲರಾದ ರೋಷನ್ ಝಮೀರ್ ಇಬ್ಬರು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಾಹಿಸುತ್ತಿದ ತನ್ನ ಸಹೋದ್ಯೋಗಿಗೆ ನಾಲ್ಕು ವರ್ಷಗಳಿಂದ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.

 

‘ಸಂಸ್ಥೆಯ ಸಭೆಗಳಲ್ಲಿ ಮತ್ತು ಅನಗತ್ಯವಾಗಿ ಕಚೇರಿಗೆ ಕರೆದು ಕಿರುಕುಳ ನೀಡಲಾಗುತ್ತಿತ್ತು ಎಂದು ಶಿಕ್ಷಕಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದರು.
ಸದ್ಯ ಆರೋಪಿಗಳು ನ್ಯಾಯಲದಿಂದ ಜಾಮೀನು ಪಡೆದಿದ್ದು, ಪ್ರಾಂಶುಪಾಲ ರೋಷನ್ ಝಮೀರ್ ನನ್ನು ಅಮಾನತುಗೊಳಿಸಿ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ.