Belagavi News In Kannada | News Belgaum

ನೇಮಕಾತಿ ಅಕ್ರಮ ಪ್ರಕರಣ: 53 ಅಭ್ಯರ್ಥಿಗಳು ಶಾಶ್ವತ ಡಿಬಾರ್ ಮಾಡಿ ಪೊಲೀಸ್ ಇಲಾಖೆ ಆದೇಶ

ಬೆಂಗಳೂರು: 545 ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಂಧಿತ 53 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಿ ಪೊಲೀಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ 53 ಅಭ್ಯರ್ಥಿಗಳು ಮುಂದಿನ ಯಾವುದೇ ಪೊಲೀಸ್ ನೇಮಕಾತಿಗೂ ಅರ್ಜಿ ಹಾಕದಂತೆ ನಿರ್ಬಂಧಿಸಲಾಗಿದ್ದು, ಅಭ್ಯರ್ಥಿಗಳ ಆಧಾರ್ ಸಂಖ್ಯೆನ್ನು ನೇಮಕಾತಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾರೆ.

ಹೀಗಾಗಿ ಅರ್ಜಿ ಸಲ್ಲಿಸಲು ಅಥವಾ ಪರೀಕ್ಷೆ ಬರೆಯಲು ಇವರಿಗೆ ಅವಕಾಶ ಇರುವುದಿಲ್ಲ. ಅಕ್ರಮ ನೇಮಕಾತಿಯಲ್ಲಿ ಭಾಗಿಯಾದವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗಿದ್ದು, ಇದೀಗ ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೆ ಸ್ವೀಕೃತವಾಗದಂತೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.