Belagavi News In Kannada | News Belgaum

ರಾಷ್ಟ್ರೀಯ ವಿಚಾರಧಾರೆಗಳನ್ನು ದೇಶದ ಜನತೆಯಲ್ಲಿ ಬಿತ್ತುವದರೊಂದಿಗೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಿಸಿದ ಕಿರ್ತಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ಸಲ್ಲುತ್ತದೆ: ಮಾಜಿ ಶಾಸಕ ಸಂಜಯ ಪಾಟೀಲ

ರಾಷ್ಟ್ರೀಯ ವಿಚಾರಧಾರೆಗಳನ್ನು ದೇಶದ ಜನತೆಯಲ್ಲಿ ಬಿತ್ತುವದರೊಂದಿಗೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಿಸಿದ ಕಿರ್ತಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ನಗರದ ಅರ್ ಪಿ ಡಿ ವೃತ್ತದಲ್ಲಿರುವ ಪಕ್ಷದ ಕಛೇರಿಯಲ್ಲಿ ಪಂ.ದಿನದಯಾಳರು ಮರಣ ಹೊಂದಿದ 55ನೇ ವರ್ಷದ ಸಮರ್ಪಣಾ ದಿನದಲ್ಲಿ ಮಾತನಾಡಿ,
ಉಪಾಧ್ಯಾಯ ಅವರನ್ನು ಹುಟ್ಟಿದಾಗಿನಿಂದ ಎಲ್ಲರು ಪ್ರೀತಿಯಿಂದ ದೀನ ಎಂದೆ ಸಂಬೋಧಿಸುತಿದ್ದರು ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿ, ಅಜ್ಜ ಹಾಗೂ ಅವರನ್ನು ನೋಡಿಕೊಳ್ಳುತಿದ್ದ ಅವರ ಅತ್ತಿಯನ್ನು ಕಳೆದುಕೊಂಡು ಬಾಲ್ಯದ ಕಷ್ಟಕರ ಜೀವನವೆ ದೇಶದಲ್ಲಿಯ ದಿನ ದಲಿತರಿಗೆ ಆಸರೆಯಾಗುವ ಭದ್ರ ಬುನಾದಿಯನ್ನೆ ಅವರಿಗೆ ಜೀವನ ಕಲಿಸಿತು. ಶಾಲಾ ದಿನಗಳಲ್ಲಿ ಅದ್ಭುತ ವಿದ್ವಾಂಸರಾಗಿದ್ದ ಇವರ ಅರ್ಹತೆಯನ್ನು ಗುರುತಿಸಿ ವಿದ್ಯಾರ್ಥಿ ಜೀವನದಲ್ಲಿ ಚಿನ್ನದ ಪದಕ, ಮಾಸಿಕ ರೂ.10 ಮತ್ತು ಅವರ ಪುಸ್ತಕಗಳಿಗೆ ರೂ.250 ವಿದ್ಯಾರ್ಥಿವೇತನವನ್ನು ಪಡೆದು ಶುಕ್ಷಣ ಪಡೆದ ಮೇದಾವಿ ಇವರಾಗಿದ್ದರು ಎಂದರು.
ಜಿಲ್ಲಾ ಮಾಧ್ಯಮ ಸಂಚಾಲಕ ‌ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಪಂ.ದಿನದಯಾಳರು 1937 ರಲ್ಲಿ ಆರ್‌ಎಸ್‌ಎಸ್‌ಗೆ ಸೇರಿದ ಇವರು ನಾನಾ ಜಿ ದೇಶಮುಖ್ ಮತ್ತು ಭಾವು ಜುಗಾಡೆ ಅವರ ಪ್ರಭಾವಕ್ಕೆ ಒಳಗಾಗಿ ಸಂಘದ ಆಜೀವ ಪ್ರಚಾರಕರಾದರು. ನಂತರ ಸಂಘದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿ, ಭಾರತೀಯ ಜನಸಂಘದ ಪ್ರಾರಂಭದಿಂದ 1967 ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಜನಸಂಘದ ಅಧ್ಯಕ್ಷರಾದರು. 52 ನೇ ವಯಸ್ಸಿನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ 11 ಫೆಬ್ರವರಿ 1968 ರಂದು ಮೊಘಲ್ ಸರಾಯನ್‌ನಲ್ಲಿ ರೈಲ್ವೆ ಹಳಿಯ ಮೇಲೆ ಅವರ ಪಾರ್ಥಿವ ಶರೀರ ಖಂಡು ದೇಶವೆ ಮಮ್ಮಲ‌ ಮರಗಿತ್ತು. ಜೀವನೂದ್ದಕ್ಕು ದೇಶ ದೇಶದ ಭದ್ರತೆ ದೇಶದ ದುರ್ಬಲರ ಅಸರೆಗೆ ಸದಾ ಮೀಡಿಯುವ ಹೃದಯವಂತನ ಸಾವಿನ ದಿನವನ್ನು‌ ಸಮರ್ಪನಾ ದಿನವನ್ನಾಗಿ ಆಚರಿಸಲಾಗಿತ್ತಿದೆ.
ಇವರು ಸೃಜನಶೀಲ ಲೇಖಕರಾಗಿ ‘ರಾಷ್ಟ್ರ ಧರ್ಮ ಮತ್ತು ಪಾಂಚಜನ್ಯ’ ಸಂಪಾದಕರಾಗಿ ಕೆಲಸ ಮಾಡಿದರು. ಪತ್ರಿಕೋದ್ಯಮದಲ್ಲಿ‌‘ಸುದ್ದಿಯನ್ನು ತಿರುಚಬೇಡಿ ಎಂಬುದು ಅವರ ಮಂತ್ರವಾಗಿತ್ತು. ಮಾನವತಾವಾದ, ಏಕಾತ್ಮಮಾತವಾದ ಪುಸ್ತಕ ಬರೆದರು. ಸಾಮರಸ್ಯ, ಸಾಂಸ್ಕೃತಿಕ-ರಾಷ್ಟ್ರೀಯ ಮೌಲ್ಯಗಳ ಪ್ರಾಮುಖ್ಯತೆ ಮತ್ತು ಶಿಸ್ತಿನಮೌಲ್ಯದ ಬಗ್ಗೆ ಸದಾ ಬೋದಿಸಿದ ಇವರ ವಿಚಾರಗಳನ್ನು ಭಾರತೀಯತೆ, ಧರ್ಮ, ಧರ್ಮರಾಜ್ಯ ಮತ್ತು ಅಂತೋದಯ ಪರಿಕಲ್ಪನೆಗಳಲ್ಲಿ ಕಾಣಬಹುದು. ಅಂತ್ಯೋದಯ ಪರಿಕಲ್ಪನೆ ನೀಡಿದ
ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಂದೇಶವೆಂದರೆ ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ಬಲವಾದ ಮತ್ತು ಸಮೃದ್ಧ ಭಾರತೀಯ ರಾಷ್ಟ್ರವನ್ನು ನಿರ್ಮಿಸುವ ಗುರಿ ಹೊಂದಿದ್ದರು ಅದು ಮೋದಿಜಿಯವರ ನೇತೃತ್ವದಲ್ಲಿ ಸಕಾರಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ, ಸಂತೋಷ ದೇಶನೂರ, ವೀರಭದ್ರಯ್ಯ ಪೂಜಾರ, ಅಕ್ಷಯ ಪಾಟೀಲ, ರಾಜೇಶ ಪಾಟೀಲ, ಗಂಗಾಧರ ಗಸಾರೆ, ಯಲ್ಲೇಶ ಕೊಲಕಾರ, ಬಾಪು ಪಾಟೀಲ ಮುಂತಾದವರು ಇದ್ದರು.