Belagavi News In Kannada | News Belgaum

ವಿವಿಧ ಅರ್ಜಿ ಆಹ್ವಾನ

ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ, ಫೆ.14 : 2023-24ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಇತರೆ ವಸತಿ ಶಾಲೆಗಳ 6ನೇ ತರಗತಿ ದಾಖಲಾತಿಗಾಗಿ ಸಫಾಯಿ ಕರ್ಮಚಾರಿ/ ಪೌರಕಾರ್ಮಿಕ/ ಮ್ಯಾನ್ಯುಯಲ್ ಸ್ಕ್ಯಾವೆಂಜರ್/ ಸ್ಮಶಾನ ಕಾರ್ಮಿಕರ/ ದೇವದಾಸಿ ಸಮುದಾಯದ ಮಕ್ಕಳಿಗೆ ಮೀಸಲಾತಿ ಅಡಿಯಲ್ಲಿ, ಪ್ರಸ್ತುತ 5ನೇ ತರಗತಿಯಲ್ಲಿ ಕಲಿಯುತ್ತಿರುವ ಈ ಮೇಲಿನ ಎಲ್ಲ ಸಮುದಾಯಗಳ ಮಕ್ಕಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೆ ವಸತಿ ಶಾಲೆಗಳಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಕಾರಣ ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದ ಮೀಸಲಾತಿ ಪ್ರಮಾಣ ಪತ್ರ/ಗುರುತಿನ ಚೀಟಿ ಹಾಗೂ ಇತರೆ ಅಗತ್ಯ ದಾಖಲಾತಿಗಳೊಂದಿಗೆ ಸಮೀಪದ ವಸತಿ ಶಾಲೆಗಳಿಗೆ ಖುದ್ದಾಗಿ ಫೆ.28, 2023 ಸಂಜೆ 5. ಗಂಟೆ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ, ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಟೆಂಡರ್ ಆಹ್ವಾನ

ಬೆಳಗಾವಿ, ಫೆ.14   : ರಾಯಬಾಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯ ಅಧೀಕೃತ ಕೆಲಸಕ್ಕಾಗಿ ಮಾಸಿಕ ಬಾಡಿಗೆ ಆಧಾರದ ಮೇಲೆ ಡಾ ಬಿ. ಆರ್. ಅಂಬೇಡ್ಕರ್ ಅಭಿವೃಧ್ಧಿ ನಿಗಮ, ಪರಿಶಿಷ್ಟ ವರ್ಗಗಳ ಅಭಿವೃಧ್ಧಿ ನಿಗಮ, ಸಾರಿಗೆ/ಪ್ರವಾಸೋಧ್ಯಮ ಇಲಾಖೆಗಳಿಂದ ಹಾಗೂ ಇತರೆ ಸರ್ಕಾರಿ ಇಲಾಖಾ/ನಿಗಮಗಳ/ಮಹಾನಗರ ಪಾಲಿಕೆಗಳ ವತಿಯಿಂದ ಪಡೆದ ಸಹಾಯಧನದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಫಲಾನುಭವಿಗಳು ಪಡೆದ ಚಾಲಕ ಸಹಿತ ವಾಹನವನ್ನು ಬಾಡಿಗೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಾಹನಗಳು:
ಟಾಟಾಸುಮೋ, ಬುಲೇರೊ, ಇರಟಿಗಾ, ಸ್ವಿಪ್ಟಡಿಸೈರ್, ಸ್ವಿಪ್ಟ/ಬ್ರಿಜಾ 4 ಚಕ್ರಗಳ ಎಲ್.ಎಮ್.ವಿ ವಾಹನಗಳನ್ನು 12 ತಿಂಗಳ (1 ಮಾರ್ಚ 2023 ರಿಂದ 29 ಫೆಬ್ರುವರಿ 2024) ರ ಕಾಲಮಿತಿಗೆ ಸೇವೆ ಒದಗಿಸಲು ನಿಯಮಾನುಸಾರ ಷರತ್ತು ನಿಭಂದನೆಗಳನ್ನೋಳಪಟ್ಟು ಆಸಕ್ತರಿಂದ ಅಲ್ಪಾವಧಿ ಟೆಂಡರ್‍ನ್ನು ಆಹ್ವಾನಿಸಲಾಗಿದೆ.
ಆಸಕ್ತರು ರಾಯಬಾಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕಛೇರಿಯಲ್ಲಿ ನಿಗದಿತ ಪ್ರತ್ಯೇಕ ಅರ್ಜಿಗಳನ್ನು ಫೆ.6 2023 ರಿಂದ ಫೆ.20 2023ರ ಮಧ್ಯಾಹ್ನ 1 ಗಂಟೆಯ ವರೆಗೆ ಪಡೆಯಬಹುದಾಗಿದೆ.
ಭರ್ತಿ ಮಾಡಿದ ಟೆಂಡರ್ ಅರ್ಜಿಯನ್ನು ದ್ವಿ-ಲಕೋಟೆ, ತಾಂತ್ರಿಕ ಲಕೋಟೆ, ಹಣಕಾಸು ಲಕೋಟೆಗಳಲ್ಲಿ ಫೆ.21 2023 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.
ಫೆ.22 2023 ರಂದು ತಾಂತ್ರಿಕ ಲಕೋಟೆಯನ್ನು ಬೆಳಗ್ಗೆ 11 ಗಂಟೆಗೆ ಹಾಜರಿರಬಹುದಾದ ಅರ್ಜಿದಾರರ ಸಮ್ಮುಖದಲ್ಲಿ ತೆರೆಯಲಾಗುವುದು. ಎಲ್ಲಾ ಷರತ್ತುಗಳನ್ನು ಪೂರೈಸಿದ ಅರ್ಹ ತಾಂತ್ರಿಕ ಲಕೋಟೆ ಇರುವ ಅರ್ಜಿದಾರರ ಎರಡನೇ ಹಣಕಾಸು ಲಕೋಟೆಯನ್ನು ಅದೇ ದಿನ ಮಧ್ಯಾಹ್ನ 12.30 ಗಂಟೆಗೆ ತೆರೆಯಲಾಗುವುದು.
ಕಡಿಮೆ ದರ ಪಟ್ಟಿ ಮತ್ತು ಕೋರಿದ ಎಲ್ಲ ಚಾಲ್ತಿ ದಾಖಲೆಗಳನ್ನು ಸಲ್ಲಿಸಿದ ಅರ್ಜಿದಾರರಿಗೆ ಆದೇಶ ಪತ್ರ ನೀಡಲಾಗುವುದು. ಷರತ್ತು/ನಿಭಂದನೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ಅಥವಾ ಕಛೇರಿ ದೂರವಾಣಿ ಸಂಖ್ಯೆ 08331-200118/9480843070 ಗೆ ಸಂಪರ್ಕಿಸಬಹುದು ಎಂದು ರಾಯಬಾಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಬಹಿರಂಗ ಹರಾಜು ಪ್ರಕ್ರಿಯೆ

ಬೆಳಗಾವಿ, ಫೆ.14  : ಕರ್ನಾಟಕ ರಿಯಲ್ ಎಸ್ಟೇಟ್ ಪ್ರಾಧಿಕಾರ ಬೆಂಳೂರು ಇವರಿಗೆ ಲೋಟಸ್ ಲ್ಯಾಂಡ್ ಮಾರ್ಕ್ ಪ್ರೈ.ಲಿ.ಲೋಟಸ್ ಕೌಂಟಿ ರಿಸನಂ 124/2, ಮಂಡೋಳಿ ರೋಡ್ ಚೌಗಲೆವಾಡಿ ಬೆಳಗಾವಿ ಇವರಿಂದ 20,04,425 ರೂ ಗಳ ಮೊತ್ತವು ಬಾಕಿ ಇರುವುದರಿಂದ ಸದರಿ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ, ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಂದ ಆದೇಶವಾಗಿರುತ್ತದೆ.
ಸದರಿ ಮೊತ್ತದ ವಸೂಲಾತಿಗಾಗಿ ಬಾಕಿದಾರ ಮಾಲಕರು ಬೆಳಗಾವಿ. ರಿಸನಂ 124*/2 ಆಸ್ತಿ ಫೆ.16 2023 ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿ ತಹಸೀಲ್ದಾರ್ ಅವರಿಂದ ಅಧಿಕಾರ ಪಡೆದ ಅಧಿಕಾರಿಯ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವುದರ ಮೂಲಕ ವಸೂಲಾತಿ ಕೈಗೊಳ್ಳಲಾಗುವುದು.
ಆಸಕ್ತಯುಳ್ಳವರು ಹಾರಜು ಪ್ರಕ್ರಿಯೆಯಲ್ಲಿ ಭಾಗಹಿಸಬಹುದು ಎಂದು ಬೆಳಾಗಾವಿಯ ತಹಿಸೀಲ್ದಾರ್ ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.///