6 ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

6 ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬೆಳಗಾವಿ, ಫೆ.15 : ರಾಮದುರ್ಗ ತಾಲೂಕಿನ ಕಟಕೋಳ ಸರಕಾರಿ ಆದರ್ಶ ಪ್ರೌಢ ಶಾಲೆ ಹಾಗೂ ಸವದತ್ತಿ ತಾಲೂಕಿನ ಯಡ್ರಾವಿ ಸರಕಾರಿ ಆದರ್ಶ ಪ್ರೌಢ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯಾ ತಾಲೂಕಿನಲ್ಲಿ 5 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಫೆ.18 2023 ರಿಂದ ಮಾ.4 2023 ರ ವರೆಗೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಟಕೋಳ ಸರಕಾರಿ ಆದರ್ಶ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ 9980789428, ಅಥವಾ ಯಡ್ರಾವಿ ಸರಕಾರಿ ಆದರ್ಶ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರ ದೂರವಾಣಿ ಸಂಖ್ಯೆ 9449624312 ಗೆ ಸಂಪರ್ಕಿಸಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು ರಾಮದುರ್ಗ ಮತ್ತು ಸವದತ್ತಿ ಇಲ್ಲಿಯೂ ಸಹ ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕರಾದ ಎಸ್.ಡಿ. ಗಾಂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬೆಳಗಾವಿ, ಫೆ.15 : ಬೆಳಗಾವಿ ರೇಲ್ವೆ ಪೊಲೀಸ್ ಠಾಣೆಯ ದೇಸೂರ ನಿಲ್ದಾಣ ಮಧ್ಯೆ ಮಜಗಾಂವ 4ನೇ ಗೇಟ್ ಹತ್ತಿರ ಅಪರಚಿತ ವ್ಯಕ್ತಿ(45) ಮೇ. 13, 2021 ರಂದು ಚಲಿಸುವ ರೈಲು ಗಾಡಿಗೆ ಸಿಕ್ಕು ಮೃತಪಟ್ಟಿರುತ್ತಾನೆ. ಸದರಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಮೃತನ ಚಹರೆ ಪಟ್ಟಿಯ ವಿವರ:
ಎತ್ತರ 5.2 ಪುಟ್, ಗೋಧಿ ಮೈ ಬಣ್ಣ, ದುಂಡು ಮುಖ, ದಪ್ಪ ಮೂಗು, ಮತ್ತು ಸಾಧಾರಣ ಶರೀರ ಹೊಂದಿರುತ್ತಾನೆ.
ಈ ರೀತಿ ಚಹರೆಯುಳ್ಳ ಅಪರಿಚಿತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಬೆಳಗಾವಿ ರೈಲ್ವೆ ಪೆÇೀಲಿಸ್ ಠಾಣೆ ದೂರವಾಣಿ ಸಂಖ್ಯೆ: (0831) 2405273 ಪಿ.ಎಸ್.ಐ ಮೊಬೈಲ ನಂ :9480802127 ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (080) 22871291 ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ರೈಲ್ವೆ ಪೆÇೀಲಿಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ವ್ಯಕ್ತಿ ನಾಪತ್ತೆ
ಬೆಳಗಾವಿ, ಫೆ.15 : ಬೈಲಹೊಂಗಲ ತಾಲೂಕಿನ ಹನ್ನಿಕೇರಿ ಗ್ರಾಮದ ಅಂಬೇಡ್ಕರ ಗಲ್ಲಿ ಮೋದಗಾ ಇಲ್ಲಿನ ನಿವಾಸಿಯಾದ ಸುರೇಶ ಬಸಪ್ಪಾ ತಳಗೇರಿ ವಯಸ್ಸು(27) ಇವರು ಡಿಸೆಂಬರ್.7 2022 ರಂದು ಸಂಜೆ 4 ಗಂಟೆಗೆ ಮುತಗಾ ಗ್ರಾಮದಲ್ಲಿ ದೇಶಿ ತಡ್ಕಾ ದಾಬಾದಿಂದ ಮನೆಗೆ ಹೊಗುತ್ತೇನೆ ಎಂದು ಹೇಳಿ ಹೋದವನು ಮನೆಗೆ ಬರದೇ ಕಾಣೆಯಾಗಿದ್ದಾನೆ ಎಂದು ಇವರ ಸಹೋದರ ಅಡಿವೆಪ್ಪಾ ಬಸಪ್ಪಾ ತಳಗೇರಿ ಅವರು ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿ ವಿವರ:
ಕಾಣೆಯಾದ ವ್ಯಕ್ತಿಯು ಸುಮಾರು 5.2 ಫುಟ ಎತ್ತರವಿದ್ದು, ಸಾದಾ ಗಪ್ಪು ಮೈಬಣ್ಣ, ಉದ್ದ ಮುಖ, ಅಗಲ ಮೂಗು ಹೊಂದಿರುತ್ತಾನೆ. ಬಲಗೈ ಮುಂಗೈ ಹತ್ತಿರ ಹಳೆ ನೋವಿನ ಕಲೆ ಇರುತ್ತದೆ. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆಕಿದಲ್ಲಿ ಮಾರೀಹಾಳ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0831-2405239 ಅಥವಾ ಮೋ.ಸಂಖ್ಯೆ 9480804111 ಗೆ ಸಂಪರ್ಕಿಸಬಹುದು ಎಂದು ಮಾರಿಹಾಳ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////
ಸಹಕಾರ ಸಂಘಗಳಿಂದ ಮಾಹಿತಿ ಸಲ್ಲಿಸಲು ಸೂಚನೆ
ಬೆಳಗಾವಿ, ಫೆ.15 : ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ನಿಯಮ 1960 ರನ್ವಯ ಜ.1 2023 ರಿಂದ ಡಿ.31 2023 ರವರೆಗೆ ಆಡಳಿತ ಮಂಡಳಿಯ ಅವಧಿಯು ಮುಕ್ತಾಯವಾಗುವ ಸಹಕಾರ ಸಂಘಗಳ/ಸೌಹಾರ್ದ ಸಹಕಾರಿಗಳ ಮಾಹಿತಿಯನ್ನು ಸಹಕಾರ ಇಲಾಖೆಗೆ ನಿಗದಿತ ನಮೂನೆಯಲ್ಲಿ ಆರು ತಿಂಗಳು ಮುಂಚೆ ಮಾಹಿತಿ ಸಲ್ಲಿಸುವುದು ಅವಶ್ಯಕವಾಗಿರುತ್ತದೆ.
ಕಾರಣ ಬೆಳಗಾವಿ ಉಪವಿಭಾಗದಲ್ಲಿನ ಬೆಳಗಾವಿ, ಖಾನಾಪೂರ ಹಾಗೂ ಹುಕ್ಕೇರಿ ತಾಲೂಕಿನಲ್ಲಿರುವ ಸಹಕಾರ ಸಂಘಗಳ/ ಸೌಹಾರ್ದ ಸಹಕಾರಿಗಳ ಕಾರ್ಯದರ್ಶಿಗಳು ಆಡಳಿತ ಮಂಡಳಿ ಅವಧಿ ಮುಕ್ತಾಯವಾಗುವ 6 ತಿಂಗಳ ಮುಂಚಿತವಾಗಿ ಮಾಹಿತಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೆಳಗಾವಿ ಉಪವಿಭಾಗ, ಜಕ್ಕೇರಿಹೊಂಡ, ಗೋವಾವೇಶ ಹತ್ತಿರ ಬೆಳಗಾವಿ ಈ ಕಚೇರಿಗೆ ಸಲ್ಲಿಸಬೇಕು ಎಂದು ಬೆಳಗಾವಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///
ಸಾರಿಗೆ ಅದಾಲತ್ ಫೆ.17 ರಂದು
ಬೆಳಗಾವಿ, ಫೆ.15: ಸಾರ್ವಜನಿಕರಿಗೆ, ವಾಹನ ಮಾಲೀಕರಿಗೆ, ವಾಹನ ವಿತರಕರಿಗೆ ಹಾಗೂ ಚಾಲನಾ ಆನುಜ್ಞಾಪತ್ರ ಹೊಂದಿದ/ಹೊಂದುವ ಸಾರ್ವಜನಿಕರಿಗೆ ಬೆಳಗಾವಿಯ ಪ್ರಾದೇಶಿಕ ಸಾರಿಗೆ ಕಛೇರಿಯ ಆವರಣದಲ್ಲಿ ಫೆ.17, 2023 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಸಾರಿಗೆ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಸಾರ್ವಜನಿಕರು ಸಾರಿಗೆ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಈ ಕಛೇರಿಯಲ್ಲಿ ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ಅರ್ಜಿಯನ್ನು ವಿಲೇವಾರಿಗೊಳಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////