ರಾಗಿ ಖರೀದಿ ಕೇಂದ್ರದ ಗೋದಾಮಿಗೆ ಬೆಂಕಿ

ರಾಮನಗರ: ಶಾರ್ಟ್ ಸರ್ಕೀಟ್‌ನಿಂದಾಗಿ ರಾಗಿ ಖರೀದಿ ಕೇಂದ್ರದ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಮಾಗಡಿ ತಾಲೂಕಿನ ಸೋಲೂರು ಗದ್ದುಗೆ ಮಠದ ಬಳಿ ಗುರುವಾರ ನಡೆದಿದೆ.
ಗೋದಾಮಿನ ಮುಂಭಾಗ ಇದ್ದ ಟ್ರಾನ್ಸ್ ಫಾರ್ಮರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಗೋದಾಮಿಗೆ ಬೆಂಕಿ ತಗುಲಿದೆ ಎನ್ನಲಾಗಿದ್ದು, ರಾಗಿಯನ್ನು ರೈತರಿಂದ ಖರೀದಿ ಮಾಡಿ ಗೋದಾಮಿನಲ್ಲಿ ಶೇಖರಿಸಿಡಲಾಗಿತ್ತು. ಇದರಿಂದ 200 ರಾಗಿ ಮೂಟೆಗಳು ಹಾಗೂ 2 ಲಕ್ಷಕ್ಕೂ ಹೆಚ್ಚು ಖಾಲಿ ಚೀಲಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. 4 ಅಗ್ನಿ ಶಾಮಕ ವಾಹನಗಳಲ್ಲಿ ಸ್ಥಳ್ಕಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.