ಡಿಕೆಶಿ ಕಿವಿಯಿಂದ ಹೂ ತೆಗೆದ ಯಡಿಯೂರಪ್ಪ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿವಿ ಮೇಲಿದ್ದ ಹೂವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆಗೆದ ಪ್ರಸಂಗ ಇಂದು ನಡೆಯಿತು.
ಬಜೆಟ್ ಭಾಷಣದ ಬಳಿಕ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಬರುತ್ತಿದ್ದಾಗ ಯಡಿಯೂರಪ್ಪ ಎದುರು ಸಿಕ್ಕಿದರು. ಈ ವೇಳೆ ಡಿಕೆ ಶಿವಕುಮಾರ್ ಅವರನ್ನು ನಕ್ಕು ಎಡ ಕಿವಿ ಮೇಲಿದ್ದ ಚೆಂಡು ಹೂವನ್ನು ತೆಗೆದು ಅಲ್ಲಿದ್ದ ಒಬ್ಬರ ಕೈಗೆ ಕೊಟ್ಟು ನಕ್ಕರು.
ಯಡಿಯೂರಪ್ಪ ಅವರು ಹೂವು ತೆಗೆದಿದ್ದನ್ನು ನೋಡಿ ನಕ್ಕ ಡಿಕೆಶಿ ಬಳಿಕ ಮತ್ತೆ ಹೂವನ್ನು ಕಿವಿಗೆ ಹಾಕಿ ತೆರಳಿದರು. ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆಯ ದಿನ ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಸದನ ಪ್ರವೇಶಿಸಿದ್ದು ವಿಶೇಷವಾಗಿತ್ತು. ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು ಯಾವುದು ಕಾರ್ಯ ರೂಪಕ್ಕೆ ಬರುವುದಿಲ್ಲ. ಜನರ ಮೇಲೆ ಹೂ ಇಡುತ್ತಿದೆ ಎಂದು ಹೇಳಿದ ಕೈ ನಾಯಕರು ಸಿಎಂ ಬಜೆಟ್ ಭಾಷಣವನ್ನು ಹೂ ಮುಡಿದುಕೊಂಡೇ ಕೇಳಿದ್ದರು./////