Belagavi News In Kannada | News Belgaum

ಮೆದುಳು ನಿಷ್ಕ್ರೀಯ: ಅಂಗಾಂಗ ದಾನಗೈದ ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ ನೆರವು

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡ ಕಾರಣದಿಂದಾಗಿ ಮಗನ ಅಂಗಾಂಗ ದಾನಕ್ಕೆ ಮುಂದಾಗಿರುವ ಕುಟುಂಬಕ್ಕೆ ನಟ ಧ್ರುವ ಸರ್ಜಾ ನೆರವಾಗಿದ್ದಾರೆ.

ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿಯಾಗಿದ್ದ ಶಿಡ್ಲಘಟ್ಟದ ಪೃಥ್ವಿರಾಜ್ ನಾಲ್ಕು ದಿನಗಳ ಹಿಂದೆಯಷ್ಟೇ ಬೈಕ್ ಮೇಲಿಂದ ಬಿದ್ದು ತಲೆಗೆ ತೀವ್ರಪೆಟ್ಟು ಮಾಡಿಕೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗನ ಆಸ್ಪತ್ರೆ ಖರ್ಚಿಗೆ ಸಾಲ ಮಾಡಿದ ಪೃಥ್ವಿ ತಂದೆ ಜಗದೀಶ್ ಅವರಿಗೆ ಧ್ರುವ 5 ಲಕ್ಷ ರೂಪಾಯಿ ನೀಡಿದ್ದಾರೆ.

ನಟ ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ ಪೃಥ್ವಿರಾಜ್ ಫೆಬ್ರವರಿ 14 ರಂದು ಬೈಕ್ ನಿಂದ ಬಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ. ಹೆ‍ಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪರಿಣಾಮ, ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಈವರೆಗೂ ಅವರು ಕೋಮಾದಿಂದ ಆಚೆ ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪೂರದ ಶಿಡ್ಲಘಟ್ಟ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪೃಥ್ವಿರಾಜ್ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೆ ಪೃಥ್ವಿರಾಜ್ ಸಹಜ ಸ್ಥಿತಿಗೆ ಬರುವುದು ಅನುಮಾನ ಎಂದು ವೈದ್ಯರು ತಿಳಿಸಿದ್ದರಿಂದ ಆತನ ಅಂಗಾಂಗ ದಾನಕ್ಕೆ ಕುಟುಂಬ ಮುಂದಾಗಿದೆ.

ಮಗನ ಕೊನೆಯಾಸೆ ಧ್ರುವ ಸರ್ಜಾರನ್ನು ನೋಡುವುದಾಗಿತ್ತಂತೆ. ಹಾಗಾಗಿ ಧ್ರುವ ಸರ್ಜಾ ಅವರಿಗೆ ಈ ವಿಷಯ ತಿಳಿಸಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಅಭಿಮಾನಿಯನ್ನು ಭೇಟಿ ಮಾಡಲು ಧ್ರುವ ಆಸ್ಪತ್ರೆಗೆ ಆಗಮಿಸಿದ್ದರು. ಆ ಹುಡುಗನ ತಂದೆ ತಾಯಿಯ ನೋವಿಗೆ ಸ್ಪಂದಿಸಿದರು. ಅವರ ಕಣ್ಣುಗಳು ಕೂಡ ತುಂಬಿಕೊಂಡಿದ್ದವು. ಅಲ್ಲದೇ, ಹೆಲ್ಮೆಟ್ ಹಾಕಿಕೊಂಡು ಬೈಕ್ ಓಡಿಸುವಂತೆ ಅಭಿಮಾನಿಗಳಿಗೆ ಧ್ರುವ ಕರೆಕೊಟ್ಟಿದ್ದಾರೆ.//////