Belagavi News In Kannada | News Belgaum

ಶಿವರಾತ್ರಿ ನಿಮಿತ್ತ ವಿವಿಧೆಡೆ ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಮಹಾ ಶಿವರಾತ್ರಿಯ ಪ್ರಯುಕ್ತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಕುಟುಂಬ ಸಮೇತ ವಿವಿಧ ಶಿವದೇವಾಲ್ಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. 
 ಬೆಳಗಾವಿಯ ಶ್ರೀ ಕಪಿಲೇಶ್ವರ ದೇವಸ್ಥಾನ ಹಾಗೂ ರಾಜಹಂಸಗಡದ ಸಿದ್ದೇಶ್ವರ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಕಪಿಲೇಶ್ವರ ಮಂದಿರಕ್ಕೆ ಕುಟುಂಬ ಸಮೇತ ತೆರಳಿದ ಲಕ್ಷ್ಮೀ ಹೆಬ್ಬಾಳಕರ್,  ಕ್ಷೇತ್ರದ ಹಾಗೂ ನಾಡಿನ ಏಳಿಗೆಗಾಗಿ ಪ್ರಾರ್ಥಿಸಿ ಅನ್ನಪ್ರಸಾದಕ್ಕೆ ವಯಕ್ತಿಕ ದೇಣಿಗೆಯನ್ನು ನೀಡಿದರು.
ನ್ನರಾಜ ಹಟ್ಟಿಹೊಳಿ ಹಾಗೂ ಮೃಣಾಲ ಹೆಬ್ಬಾಳಕರ್  ರಾಜಹಂಸಗಡ ಕೋಟೆಯಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ, ಪೂಜೆಯನ್ನು ಕೈಗೊಂಡರು. ಕೋಟೆಯ ಅಭಿವೃದ್ಧಿಯ ಕಾರ್ಯಗಳ ಪ್ರಗತಿಯನ್ನು ಸಹ ಪರಿಶೀಲನೆ ನಡೆಸಿ, ಅಲ್ಲಿನ ನಿವಾಸಿಗಳ ಹಾಗೂ ಕ್ಷೇತ್ರದ ಮುಖಂಡರೊಂದಿಗೆ, ಛತ್ರಪತಿ ಶಿವಾಜಿ ಮಹಾರಾಜರ ಬೃಹದಾಕಾರದ ‌ಮೂರ್ತಿಯ ಲೋಕಾರ್ಪಣೆಯ ಕಾರ್ಯಕ್ರಮದ ಬಗ್ಗೆ ಸುಧೀರ್ಘ ಕಾಲ ಚರ್ಚೆ ನಡೆಸಿದರು./////