Belagavi News In Kannada | News Belgaum

ರಾಣಿ ಚೆನ್ನಮ್ಮಾಜಿಯ ಜೀವನ ಚರಿತ್ರೆ ನಾಟಕ ನೋಡಲು ಇದೆ ತಿಂಗಳು 23-24 ರಂದು ಬನ್ನಿ :ಡಾಕ್ಟರ್ ರವಿ ಪಾಟೀಲ್

ಬೆಳಗಾವಿ : ಸೋಮವಾರ ನಗರದ ವಿಜಯಾ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ರವಿ ಪಾಟೀಲ ಅವರು ಮಾತನಾಡುತ್ತಾ ಬೆಳಗಾವಿಯಲ್ಲಿ ಐತಿಹಾಸಿಕ ನಾಟಕ ಪ್ರದರ್ಶನದ ಆಯೋಜನೆಯ ಬಗ್ಗೆ ಮಾತನಾಡಿದರು
ಇದೆ ತಿಂಗಳ ದಿನಾಂಕ 23 ಹಾಗೂ 24 ರ ಶನಿವಾರ ಹಾಗೂ ರವಿವಾರದಂದು ನಗರದ ಸಿಪಿಎಡ್ ಮೈದಾನದಲ್ಲಿ, ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಜೀವನ ಚರಿತ್ರೆ ಕುರಿತಾದ ಬ್ರಹತ್ ನಾಟಕ ಪ್ರದರ್ಶನ ನಡೆಯಲಿದೆ ಎಂಬ ಮಾಹಿತಿ ನೀಡಿದರು

ಧಾರವಾಡದ ರಂಗಾಯಣ ನಾಟಕ ತಂಡ ಈ ನಾಟಕ ಪ್ರದರ್ಶನ ಮಾಡುತ್ತಿದ್ದು, ವೀರಮಾತೆ ಕಿತ್ತೂರು ಚೆನ್ನಮ್ಮ ಇಡೀ ಭಾರತಕ್ಕೆ ಹೆಮ್ಮೆ ತರುವಂಥ ಕಾರ್ಯ ಮಾಡಿದ್ದಾರೆ, ಅವರ ನೆಲದಲ್ಲಿ ನಾವು ಜನಿಸಿದ್ದು ಅದು ನಮ್ಮ ಭಾಗ್ಯ, ಈ ಮಾತೆಯ ಕಾರ್ಯವನ್ನು ಜಗತ್ತಿಗೆ ತಿಳಿಸಲು ಕರ್ನಾಟಕ ಸರ್ಕಾರ ಹಾಗೂ ರಂಗಾಯಣ ಧಾರವಾಡದವರು ಈ ಬ್ರಹತ್ ನಾಟಕ ಪ್ರದರ್ಶನ ಮಾಡುತ್ತಿದ್ದು ಬೇಳಗಾವಿಗರು ಇದರ ಸದುಪಯೋಗ ಪಡೆಯಬೇಕು ಎಂದರು

ಈ ನಾಟಕದಲ್ಲಿ ಜೀವಂತ ಆನೆ, ಕುದುರೆ, ಒಂಟೆಗಳು ಅಭಿನಯ ಮಾಡುವವು ಎಂದ ಅವರು, ಈ ಹಿಂದೆ ಹಲವಾರು ನಾಟಕ ಸಿನಿಮಾಗಳಲ್ಲಿ ನೋಡೋದು ಬೇರೆ, ಆದರೆ ಈ ನಾಟಕ ಬಹಳ ವಿಶೇಷ ಎಂದರು

ಸುಮಾರು 25ಸಾವಿರ ಜನ ಕುಳಿತು ವೀಕ್ಷಣೆ ಮಾಡಬಹುದಾದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚು ಜನರು ಬಂದು, ಇಂತಾ ನಾಟಕ ನೋಡಿ, ಕಿತ್ತೂರು ಚೆನ್ನಮ್ಮಾಜಿಯ ಧೈರ್ಯ, ಸಾಹಸ, ಮಾನವೀಯ ಮೌಲ್ಯಗಳನ್ನು ಕಲಿಯಬೇಕು ಎಂದರು
ಉಚಿತ ಪ್ರವೇಶವಿದ್ದು, ಟಿಕೇಟಿಗಾಗಿ ನಮ್ಮ ಆಸ್ಪತ್ರೆಯಲ್ಲಿ ಸಂಪರ್ಕಿಸಬಹುದು ಎಂದರು,
ಪ್ರಮುಖವಾಗಿ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕಲಾವಿದರೇ ನಾಟಕ ಪ್ರದರ್ಶನ ಮಾಡುತ್ತಾರೆ, ಈಗಾಗಲೇ ಅವರು ಚಿಕ್ಕೋಡಿ, ರಾಯಭಾಗ, ಸೌದತ್ತಿ, ಹಾಗೂ ಬೈಲಹೊಂಗಲದಲ್ಲಿ ಪ್ರದರ್ಶನ ಕಂಡಿದ್ದು ಯಶಸ್ವಿಯಾಗಿವೆ ಎಂದರು

ಹುಕ್ಕೇರಿ ಮಠದ ಶ್ರೀಗಳು ಪ್ರದರ್ಶನಕ್ಕೆ ಅತಿಥಿಗಳಾಗಿ ಆಗಮಿಸಲಿದ್ದು, ಇನ್ನೂ ಅನೇಕ ಪ್ರಮುಖರು ಆ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎಂದರು

ನಂತರ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಬಸವರಾಜ್ ರೊಟ್ಟಿ ಅವರು ಮಾತನಾಡಿ, ಇಂತಹ ಐತಿಹಾಸಿಕ ನಾಟಕವನ್ನು ಎಲ್ಲಾ ಬೆಳಗಾವಿಗರು ನೋಡುವ ಹಾಗೆ ಉಚಿತವಾಗಿ ಹಾಗೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ನಮ್ಮ ಹೆಮ್ಮೆಯ ಹಾಗೂ ಸಾಮಾಜಿಕ ಕಳಕಳಿಯುಳ್ಳ ಡಾಕ್ಟರ ರವಿ ಪಾಟೀಲ ಅವರು, ಆದಕಾರಣ ಎಲ್ಲಾ ಜನರು ಬಂದು ಈ ನಾಟಕ ವೀಕ್ಷಣೆ ಮಾಡಿ, ಚೆನ್ನಮ್ಮಾಜಿಯ ಶೌರ್ಯ ಹಾಗೂ ದೇಶಭಕ್ತಿ ತಿಳಿಯಬೇಕು ಎಂದರು

ಈ ಸುದ್ದಿಗೋಷ್ಟಿಯಲ್ಲಿ ಡಾ ರವಿ ಪಾಟೀಲ, ಡಾ ಸೋಮಶೇಖರ, ನ್ಯಾಯವಾದಿ ಬಸವರಾಜ ರೊಟ್ಟಿ ಹಾಗೂ ವಿಜಯಾ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿದ್ದರು.