Belagavi News In Kannada | News Belgaum

5.42 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

 
ಬೆಳಗಾವಿ :  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಪೂಜೆ ಸರಣಿ  ಮುಂದುವರಿದಿದ್ದು, ಸೋಮವಾರವೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹತ್ತಾರು ಕಾಮಗಾರಿಗಳಿಗೆ ಚಾಲನೆ ನೀಡಿದರು. ಭಾನುವಾರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಪೂಜೆ ಮೂಲಕ ಚಾಲನೆ ನೀಡಿದ್ದರು. ಸೋಮವಾರ ಸಹ ಬೆಳಗ್ಗೆಯಿಂದಲೇ ವಿವಿಧ ಗ್ರಾಮಗಳಿಗೆ ತೆರಳಿ ಸುಮಾರು 5.42 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
  ಅಂಬೇವಾಡಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದೃಷ್ಟಿಯಿಂದ ಜಲಜೀವನ್ ಮಿಷನ್ ಯೋಜನೆಡಿಯಲ್ಲಿ 2.26 ಕೋಟಿ ರೂ, ಬಿಡುಗಡೆಯಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಅಮೂಲ್ ಭಾತ್ಕಂಡೆ, ಪುಂಡಲೀಕ್ ಬಾಂದುರ್ಗೆ, ವಿಕ್ರಂ ತೆರಳೆ, ಸಂಗೀತಾ ಅಂಬೇಕರ್, ಯಲ್ಲಪ್ಪ ಲೋಹಾರ್, ರಾಜು ಕೋಚೇರಿ, ಪ್ರಸಾದ ತೆರಳೆ, ಮನೋಹರ್ ಸಾವಂತ್, ಸುಭಾಷ ನಾಯ್ಕ್, ಜ್ಯೋತಿಬಾ ಶಹಾಪೂರಕರ್, ದತ್ತು ಚೌಗುಲೆ, ರಾಮಣ್ಣ ತೆರಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.
 ಬೆನಕನಹಳ್ಳಿ ಮುಖ್ಯ ರಸ್ತೆಯ ಸೇತುವೆ ನಿರ್ಮಣಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೋಮವಾರ ಸೇತುವೆ ನಿರ್ಮಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಮಯದಲ್ಲಿ ಮಹೇಶ ಕೋಲಕಾರ, ಬಾಳು ದೇಸೂರಕರ್, ಕಲ್ಲಪ್ಪ ದೇಸೂರಕರ್, ಮಲ್ಲೇಶ ಕುರಂಗಿ, ಮೋಹನ ಸಾಂಬ್ರೇಕರ್, ಬಾಗಣ್ಣ, ರಾಜೇಶ್ ನಾಯ್ಕ್, ಯಲ್ಲಾನಿ ನಾಯ್ಕ್, ಕಲಾವತಿ ದೇಸೂರಕರ್, ಮೀನಾಕ್ಷಿ ಪಾಟೀಲ, ಶಿಲ್ಪಾ ಮುಂಗಳೇಕರ್, ಅಂಜನಾ ನಾಯ್ಕ್, ರಾಹುಲ್ ಕನಗುಟ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
 ಬಿಜಗರಣಿಯ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 49 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮನೋಹರ ಪಾಟೀಲ, ಮನು ಬೆಳಗಾಂವ್ಕರ್, ಮೆಹಬೂಬ ನಾವಗೇಕರ್, ಚಂದ್ರಭಾಗ ಜಾಧವ್, ಶೀತಲ್ ತಾರಿಹಾಳ್ಕರ್, ರೇಖಾ ನಾಯ್ಕ, ಸಂದೀಪ ಅಷ್ಟೇಕರ್, ಮೋಹನ ಸಾವಿ, ಜ್ಯೋತಿಬಾ ಮೊರೆ, ವಿಜಯ ಸವಿ, ಯಲ್ಲಪ್ಪ ಬೆಳಗಾಂವ್ಕರ್, ಪರುಶರಾಮ ಬಾಸ್ಕಳ, ಶಂಕರ ಮೊರೆ, ಪುಂಡಲೀಕ್ ಜಾಧವ್, ಸಂತೋಷ ಕಾಂಬಳೆ, ಮಹಾದೇವ ಕಾಂಬಳೆ, ಅಶೋಕ ಕಾಂಬಳೆ, ಶಿವಾಜಿ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.
 ಕವಳೇವಾಡಿ ಗ್ರಾಮದ ಒಳಾಂಗಣ ರಸ್ತೆಯ ಅಭಿವೃದ್ಧಿಗಾಗಿ 52 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಲಾಗಿದ್ದು,  ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಲಕ್ಷ್ಮೀ ಹೆಬ್ಬಾಳಕರ್ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ನಾಮದೇವ ಮೋರೆ, ಜ್ಯೋತಿಬಾ ಮೋರೆ, ಮೊನಪ್ಪ ಯಳ್ಳೂರಕರ್, ರಘುನಾಥ ಮೋರೆ, ಆನಂದ ಬಾಚಿಕರ್, ದೇವೆಂದ್ರ ಗಾವಡೆ, ಮೊನಪ್ಪ ಮೊರೆ, ಗೌತಮ ಕಣಬರ್ಕರ್, ಮನಿಷಾ ಸುತಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.
  ಎಳೇಬೈಲ್ ಗ್ರಾಮದ ಒಳಾಂಗಣ ರಸ್ತೆಯ ಅಭಿವೃದ್ಧಿಗಾಗಿ 15 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಲಾಗಿದ್ದು,  ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಹೆಬ್ಬಾಳಕರ್ ಪೂಜೆಯನ್ನು ಕೈಗೊಂಡು ಚಾಲನೆಯನ್ನು ನೀಡಿದರು. 
ಈ ಸಮಯದಲ್ಲಿ ಗ್ರಾಮದ ಹಿರಿಯರು, ಮಹೇಶ ಪಾಟೀಲ, ಗುಂಡು ಪಾಟೀಲ, ಶಿವಾಜಿ ಕೇಸರಕರ್, ನಾಮದೇವ ಮರಗಾಳೆ, ಪರಶು ಕೇಸರಕರ, ನಿಂಗಪ್ಪ ಪಾಟೀಲ, ಕಲ್ಲಪ್ಪ ಪಾಟೀಲ, ಓಮನಿ ಯಳ್ಳೂರಕರ್, ಪರುಶರಾಮ ಪಾಟೀಲ, ಮೋನಪ್ಪ ಮರಗಾಳೆ, ಮಲ್ಲಪ್ಪ ಪಾಟೀಲ, ಜ್ಯೋತಿಬಾ ಪಾಟೀಲ, ರಾಜು ಯಳ್ಳೂರಕರ್, ಧಾನಾಜಿ ಮೊರೆ ಮೊದಲಾದವರಿದ್ದರು.
 ತುರಮರಿ ಗ್ರಾಮದಲ್ಲಿ ಮುಕ್ತಾಯಗೊಂಡ ತುರಮರಿ ಪ್ರಿಮಿಯರ್ ಲೀಗ್ ಪಂದ್ಯಾವಳಿಗಳಲ್ಲಿ ಗೆದ್ದ ತಂಡಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮೃಣಾಲ ಹೆಬ್ಬಾಳಕರ್ ಭಾನುವಾರ ರಾತ್ರಿ ಬಹುಮಾನಗಳನ್ನು ವಿತರಿಸಿದರು.ಈ ಸಮಯದಲ್ಲಿ ಗ್ರಾಮದ ಹಿರಿಯರು, ಕ್ರಿಕೆಟ್ ಪಟುಗಳು, ಚಾಂಗದೇವ ಬೆಳಗಾಂವ್ಕರ್, ರಾಜು ಜಾಧವ್, ವೈಶಾಲಿತಾಯಿ ಖಂಡೇಕರ್, ನಾಗರಾಜ ಜಾಧವ್, ಮಾರುತಿ ಖಂಡೇಕರ್, ಬಾಳಾಸಾಹೇಬ್ ಅಷ್ಟೇಕರ್, ಈರಪ್ಪ ಖಂಡೇಕರ್, ವೈ ಟಿ ತಳವಾರ, ರಘುನಾಥ್ ಖಂಡೇಕರ್, ಜ್ಞಾನೇಶ್ವರ ಕೋರಡೆ, ಸುಹಾಸ ಜಾಧವ್ ಮುಂತಾದವರು ಉಪಸ್ಥಿತರಿದ್ದರು.