Belagavi News In Kannada | News Belgaum

ವಿದ್ಯಾರ್ಥಿಗಳಆಕರ್ಷಿಸಿದಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನ

ಬೆಂಗಳೂರು: ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆ ಆಯೋಗವು, ಭಾರತದ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನ ಆಯೋಜಿಸಿತ್ತು.ಈ ಪ್ರದರ್ಶನವು 2023ರ ಫೆಬ್ರುವರಿ 17 ರಂದು ಬೆಂಗಳೂರಿನ ರೇವಾ (ಖಇಗಿಂ)ವಿಶ್ವವಿದ್ಯಾಲಯದೊಂದಿಗೆ ಪ್ರಾರಂಭವಾಯಿತು. ಪ್ರದರ್ಶನದಲ್ಲಿ ಆಯೋಗದ ಅಧಿಕಾರಿಗಳು ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತದ ವಿದ್ಯಾರ್ಥಿಗಳಿಗೆ ನೆರವಾಗಲು ಆಸ್ಟ್ರೇಲಿಯಾ ಸರ್ಕಾರಪರಿಚಯಿಸಿರುವ ವಿವಿಧ ಉಪಕ್ರಮಗಳನ್ನು ವಿವರಿಸಿದರು.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ವಿವಿಧ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೋಡ್‌ಷೋದಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾದ 13 ಉನ್ನತ ವಿಶ್ವವಿದ್ಯಾಲಯಗಳು ರೋಡ್‌ಷೋದಲ್ಲಿ ತಮ್ಮ ಕೊಡುಗೆಗಳನ್ನು ಪ್ರದರ್ಶಿಸಿದವು. ಆಸ್ಟ್ರೇಲಿಯಾವು ವಿಶ್ವದ ಕೆಲವು ಅತ್ಯುತ್ತಮ ವಿಶ್ವವಿದ್ಯಾನಿಲಯಗಳಿಗೆ ನೆಲೆಯಾಗಿದೆ. ಇತ್ತೀಚೆಗೆ ಪ್ರಕಟವಾದ ಕ್ಯುಎಸ್‌ ವಿಶ್ವವಿದ್ಯಾಲಯ ಶ್ರೇಯಾಂಕಗಳಲ್ಲಿ ಆಸ್ಟ್ರೇಲಿಯಾದ 41 ವಿಶ್ವವಿದ್ಯಾನಿಲಯಗಳ ಪೈಕಿ 36 ವಿಶ್ವವಿದ್ಯಾಲಯಗಳು ವಿಶ್ವದ ಅಗ್ರ 1000 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ. ಮುಂಚೂಣಿ 100 ವಿವಿಗಳಲ್ಲಿ 7 ವಿವಿಗಳು ಸ್ಥಾನ ಪಡೆದಿದೆ.

ಭಾರತದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಹೊಸ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾದ ವ್ಯಾಪಾರ ಮತ್ತು ಹೂಡಿಕೆಯ ಬೆಂಗಳೂರು ಆಯುಕ್ತೆ ಡೆನಿಸ್ ಈಟನ್ ಅವರು ವಿವರಗಳನ್ನು ನೀಡಿದರು. ‘ಸ್ಟಡಿ ಆಸ್ಟ್ರೇಲಿಯಾ ಪ್ರದರ್ಶನವು, ಆಸ್ಟ್ರೇಲಿಯಾ ಮತ್ತು ಭಾರತದ ನಡುವಣ ಗಟ್ಟಿ ಸಂಬಂಧ ತೋರಿಸುವ ಮತ್ತೊಂದು ಹೆಜ್ಜೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಭಾರತದ ವಿದ್ಯಾರ್ಥಿಗಳ ಜೊತೆ ನಿಕಟವಾಗಿ ಕೆಲಸ ಮಾಡುತ್ತೇವೆಎಂದು ಈಟನ್ ಹೇಳಿದರು.

ಡಿಪ್ಲೊಮಾ ಅಥವಾ ವ್ಯಾಪಾರ ಅರ್ಹತೆಯೊಂದಿಗೆ ಪದವಿ ಪಡೆಯುವ ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾದಲ್ಲಿ 18 ತಿಂಗಳವರೆಗೆ ಉಳಿಯಲು ಮತ್ತು ಕೆಲಸ ಮಾಡುವುದಕ್ಕೆ ಇತ್ತೀಚೆಗೆ ಸಹಿ ಮಾಡಿರುವ ಆಸ್ಟ್ರೇಲಿಯಾ –ಭಾರತ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವು (ಎಐಇಸಿಟಿಎ) ಅವಕಾಶ ಒದಗಿಸುತ್ತದೆ. ಬ್ಯಾಚಲರ್ಸ್‌ ಮತ್ತು ಮಾಸ್ಟರ್ಸ್‌ ಡಿಗ್ರಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಕ್ರಮವಾಗಿ 2 ಹಾಗೂ 3 ವರ್ಷಗಳವರೆಗೆ ಆಸ್ಟ್ರೇಲಿಯಾದಲ್ಲಿ ಉಳಿಯಲು ಅವಕಾಶ ಕಲ್ಪಿಸಿಕೊಡುತ್ತದೆ. ಡಾಕ್ಟರೇಟ್ ಪದವಿ ಪಡೆಯುವ ಭಾರತದ ವಿದ್ಯಾರ್ಥಿಗಳಿಗೆ ಅಧ್ಯಯನ ಪೂರ್ಣಗೊಂಡ ನಂತರ ನಾಲ್ಕು ವರ್ಷಗಳ ಕೆಲಸದ ಹಕ್ಕು ನೀಡಲಾಗುವುದು.

ಭಾರತದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಒಟ್ಟು 1,000 ವೀಸಾಗಳನ್ನು ಕಾಯ್ದಿರಿಸಲಾಗಿರುತ್ತದೆ. ವೀಸಾ ಪಡೆದವರಿಗೆ ಆಸ್ಟ್ರೇಲಿಯಾದಲ್ಲಿ ನಾಲ್ಕು ತಿಂಗಳವರೆಗೆ ಅಧ್ಯಯನ ಮಾಡಲು ಅಥವಾ ತರಬೇತಿ ಪಡೆಯಲು ಅವಕಾಶ ಇರಲಿದೆ.2022ರಲ್ಲಿ ಭಾರತದಿಂದ 70,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡುವ ಭಾರತ ವಿದ್ಯಾರ್ಥಿಗಳ ಸಂಖ್ಯೆಯು ಈಗ ಕೋವಿಡ್‌ ಪಿಡುಗಿನ ಮುಂಚಿನ ಪ್ರಮಾಣಕ್ಕೆ ತಲುಪಿದೆ. ಹೆಚ್ಚಿನ ಮಾಹಿತಿಯು hಣಣಠಿs://ತಿತಿತಿ.sಣuಜಥಿಚಿusಣಡಿಚಿಟiಚಿ.gov.ಚಿu/iಟಿಜiಚಿತಾಣದಲ್ಲಿ ಲಭ್ಯ ಇದೆ.