ಸುಷ್ಮಾ ಸ್ವರಾಜ್ ಭವನದಲ್ಲಿ ಯೂಥ್ ಫಾರ್ ಲೈಫ್ ಮಾದರಿ ಜಿ20 ಚರ್ಚೆ

ಬೆಳಗಾವಿ: ಭಾರತದ ಜಿ20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ಮತ್ತು ಯುನೈಟೆಡ್ ನೇಷನ್ಸ್ ಇಂಡಿಯಾ ರೆಸಿಡೆಂಟ್ ಕೋಆರ್ಡಿನೇಟರ್ ಶ್ರೀ ಶೊಂಬಿ ಶಾರ್ಪ್ ಶುಕ್ರವಾರ `ಮಾಡೆಲ್ ಜಿ20 ಡಿಸ್ಕಷನ್-ಯೂಥ್ ಫಾರ್ ಲೈಫ್’ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಯುನೈಟೆಡ್ ನೇಷನ್ಸ್ ಇಂಡಿಯಾ ರೆಸಿಡೆಂಟ್ ಕೋಆರ್ಡಿನೇಟರ್ ಶ್ರೀ ಶೊಂಬಿ ಶಾರ್ಪ್, “ವಾತಾವರಣ ಕುರಿತಾದ ಕ್ರಮದಲ್ಲಿ ಭಾರತವು ಜಾಗತಿಕ ನಾಯಕನಾಗಿದೆ” ಎಂದರು. ಅವರು ವಿಭಿನ್ನ ದೇಶಗಳನ್ನು ಒಟ್ಟಿಗೆ ತರುವಲ್ಲಿ ಸೂಕ್ತ ಸ್ಥಾನದಲ್ಲಿದೆ ಎಂದರು ಮತ್ತು ಅಭಿವೃದ್ಧಿಯೊಂದಿಗೆ ವಾತಾವರಣ ಬದಲಾವಣೆಯ ಪ್ರಮುಖ ಸಮಸ್ಯೆಗಳ ಕುರಿತು ಗಮನ ಸೆಳೆಯುವ ಮರು ಗಮನ ನೀಡುವ ಅಗತ್ಯವಿದೆ. ಈ ಸಭೆಯು ಜಿ20 ಸಭೆಯ ಸಿಮುಲೇಷನ್ ಪ್ರಕ್ರಿಯೆಯಾಗಿದ್ದು ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಜಿ20 ಪ್ರತಿನಿಧಿಗಳ ಪಾತ್ರ ವಹಿಸಿದರು ಮತ್ತು ಯೂಥ್ ಫಾರ್ ಲೈಫ್ ಕುರಿತಾಗಿ ಚರ್ಚೆ ನಡೆಸಿದರು(ಲೈಫ್‍ಸ್ಟೈಲ್ ಫಾರ್ ಎನ್ವಿರಾನ್‍ಮೆಂಟ್).
ಈ ಕಾರ್ಯಕ್ರಮದಲ್ಲಿ ಶೊಮಿ ಶಾರ್ಪ್, “ಭಾರತವು ವಿವಿಧ ದೇಶಗಳ ನಡುವೆ ವ್ಯತ್ಯಾಸಗಳನ್ನು ಪರಿಹರಿಸುವಲ್ಲಿ ವಿಶಿಷ್ಟ ಸ್ಥಾನದಲ್ಲಿದೆ ಮತ್ತು ವಾತಾವರಣ ಬದಲಾವಣೆ ಮತ್ತು ಇತರೆ ಅಭಿವೃದ್ಧಿಯ ಸವಾಲುಗಳ ಕುರಿತು ಗಮನ ಮರು ಕೇಂದ್ರೀಕರಿಸುವ ಅಗತ್ಯವಿದೆ” ಎಂದರು. ಈ ಗ್ರಹವು ವಾತಾವರಣ ಬದಲಾವಣೆ, ಜೀವ ವೈವಿಧ್ಯತೆಯ ಅವನತಿ ಮತ್ತು ಮಾಲಿನ್ಯ ಮತ್ತಿತರೆ ಅಭಿವೃದ್ಧಿ ಸವಾಲುಗಳನ್ನು ಎದುರಿಸುತ್ತಿದೆ. ಇಂದು ಯುವ ನಾಯಕರು ಪರಸ್ಪರರ ಸ್ಥಾನವನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಮತ್ತು ಒಮ್ಮತಕ್ಕೆ ಬರಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾರತದ ಜಿ20 ಶೆರ್ಪಾ ಅಮಿತಾಭ್ ಕಾಂತ್ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನರ ಚಳವಳಿಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಿ20 ಅಧ್ಯಕ್ಷತೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಅವರ ತವರು ದೇಶಗಳಲ್ಲಿ ಈ ನಿಟ್ಟಿನಲ್ಲಿ ವಿಶ್ವದ ಇತರರನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧರಾಗಿದ್ದಾರೆ. ಅಮಿತಾಭ್ ಕಾಂತ್ ಭವಿಷ್ಯವನ್ನು ರೂಪಿಸುವಲ್ಲಿ ಯುವ ವಿದ್ಯಾರ್ಥಿಗಳು ವಹಿಸಿದ ಪಾತ್ರದ ಕುರಿತು ಒತ್ತು ನೀಡಿದರು. ಶೆರ್ಪಾ ಅಮಿತಾಭ್ ಕಾಂತ್, “ಜಿ20 ಅಧ್ಯಕ್ಷತೆಯ ಸಂದರ್ಭದಲ್ಲಿ ಭಾರತಕ್ಕೆ ನೀಲಿ ಅರ್ಥವ್ಯವಸ್ಥೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ” ಎಂದರು. ಎಲ್ಲರಿಗೂ ಕಡಿಮೆ ಇಂಗಾಲದ ಸುಸ್ಥಿರತೆಯ ಅಭಿವೃದ್ಧಿ ಆದ್ಯತೆಯಾಗಬೇಕು ಎಂದರು. ಈ ಕಾರ್ಯಕ್ರಮದಲ್ಲಿ ದೆಹಲಿ-ಎನ್‍ಸಿಆರ್ನ ಎಂಟು ಶಾಲೆಗಳು ಇಂಟರ್‍ನ್ಯಾಷನಲ್ ಸ್ಕೂಲ್ಗಳು, ಖಾಸಗಿ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಭಾಗವಹಿಸಿದ್ದವು, ಅವುಗಳಲ್ಲಿ ವಾತಾವರಣಕ್ಕೆ ಲೈಫ್ ಅನ್ನು ಸಾಮೂಹಿಕ ಚಳವಳಿಯಾಗಿಸುವಲ್ಲಿ ಯುವಜನರ ಪಾತ್ರ ಕುರಿತು ಆದ್ಯತೆ ನೀಡುವ ಕುರಿತು ಚರ್ಚೆಗಳು ಹಾಗೂ ಆಲೋಚನೆಗಳ ವಿನಿಮಯ ನಡೆದವು