Belagavi News In Kannada | News Belgaum

ವಿವಿಧ ಪ್ರಕಟಣೆ

ವಿವಿಧ ತರಬೇತಿ ಸಂಸ್ಥೆಗಳ ಮಾನ್ಯತೆ ನವಿಕರಣ

ಬೆಳಗಾವಿ, ಫೆ.21-: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಶ್ರೀರಾಮ ವಾಣಿಜ್ಯ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಬಂಡಿ ಬಜಾರ, ಅಂಕೋಲಾ ಈ ಸಂಸ್ಥೆಗೆ ಇಲಾಖೆಯಿಂದ ಅನುಮತಿ ಪಡೆದು ಮಾನ್ಯತೆ ನವಿಕರಣವನ್ನು ನವೀಕರಿಸುತ್ತಿದ್ದು, ಈ ಸಂಸ್ಥೆಯನ್ನು ಹೊರತುಪಡಿಸಿ ಅಂಕೋಲಾ ತಾಲೂಕಿನಲ್ಲಿ ಬೇರೆ ಯಾವುದೇ ಕಂಪ್ಯೂಟರ್, ಟೈಪರೈಟಿಂಗ್, ಶೀಘ್ರಲಿಪಿ ತರಬೇತಿ ಸಂಸ್ಥೆಗಳು ಇಲಾಖಾ ಅನುಮತಿಯನ್ನು ಪಡೆದಿರುವುದಿಲ್ಲ.
ಸದರಿ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾವುದೇ ಅನಧೀಕೃತ ಸಂಸ್ಥೆಗಳಲ್ಲಿ ಅಭ್ಯರ್ಥಿಗಳು/ವಿದ್ಯಾರ್ಥಿಗಳು ತರಬೇತಿ ಪಡೆದಲ್ಲಿ ಮುಂದೆ ಉದ್ಭವವಾಗುವ ಸಮಸ್ಯೆಗಳಿಗೆ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿಭಾಗೀಯ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗದ ಪದನಿಮಿತ್ತ ಸಹನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//

ವಿವಿಧ ತಾಲೂಕುಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ: ಫೆ.22 ರಿಂದ

 

ಬೆಳಗಾವಿ, ಫೆ.21-: ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ಲೋಕಾಯುಕ್ತ ಅಧಿಕಾರಿಗಳು ಫೆಬ್ರುವರಿ 22 ರಿಂದ 28 ರವರೆಗೆ ಭೇಟಿ ನೀಡಲಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಸದರಿ ಸರ್ಕಾರಿ ಕೆಲಸ ನಿರ್ವಹಿಸಲು ಹಣ, ಲಂಚ, ವಸ್ತುಗಳ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದು.

ಲೋಕಾಯುಕ್ತ ಅಧಿಕಾರಿಗಳ ತಾಲ್ಲೂಕುವಾರು ಭೇಟಿ ವಿವರ:
ಕರ್ನಾಟಕ ಲೋಕಾಯುಕ್ತ ಡಿ.ಎಸ್.ಪಿ. ಬಿ.ಎಸ್ ಪಾಟೀಲ, ಫೆ.22 ರಂದು ಮುಂಜಾನೆ 11 ಗಂಟೆಯಿಂದ 2 ವರೆಗೆ ಕ. ಲೋ. ಕಛೇರಿ ಬೆಳಗಾವಿ, ಡಿ.ಎಸ್.ಪಿ. ಭರತ ಎಸ್.ಆರ್ ಇವರು ಫೆ.22 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಸವದತ್ತಿ, ಪಿಐ ಅನ್ನಪೂರ್ಣ ಎಮ್. ಹುಲಗೂರ ಫೆ.22 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಕಿತ್ತೂರು, ಯು.ಎಸ್.ಅವಟಿ ಇವರು ಫೆ.22 ರಂದು ಮುಂಜಾನೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ರಾಮದುರ್ಗ ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ.
ಡಿ.ಎಸ್.ಪಿ.ಭರತ ಎಸ್ ಆರ್ ಇವರು ಫೆ.23 ರಂದು 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಬೈಲಹೊಂಗಲ, ಅನ್ನಪೂರ್ಣ ಎಮ್. ಹುಲಗೂರ ಇವರು ಫೆ.23 ರಂದು 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಖಾನಾಪೂರ, ಪಿಐ ಯು.ಎಸ್. ಅವಟಿ ಇವರು ಫೆ.23 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಹುಕ್ಕೇರಿ, ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಪಿಐ ಪಿ.ರವಿಕುಮಾರ ಧರ್ಮಟ್ಟಿ ಇವರು ಫೆ. 24 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ಕಾಗವಾಡ ಭೇಟಿ ನೀಡಲಿದ್ದಾರೆ.
ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಫೆ.27 ರಂದು ಮುಂಜಾನೆ 10:30 ರಿಂದ 1 ಗಂಟೆವರೆಗೆ ಪ್ರವಾಸಿ ಮಂದಿರ ಗೋಕಾಕ, ಲೋಕಾಯುಕ್ತ ಡಿ.ಎಸ್.ಪಿ. ಜೆ.ರಘು ಫೆ.27 ರಂದು ಮಧ್ಯಾಹ್ನ 02 ರಿಂದ 4.30 ಗಂಟೆಯವರೆಗೆ ತಹಶೀಲ್ದಾರ ಕಛೇರಿ ಮೂಡಲಗಿ. ಪಿಐ ಪಿ.ಆರ್.ಧಬಾಲಿ ಫೆ.27 ರಂದು ಮುಂಜಾನೆ 11 ರಿಂದ 2 ಗಂಟೆ ವರೆಗೆ ಪ್ರವಾಸಿ ಮಂದಿರ ನಿಪ್ಪಾಣಿ, ಕರ್ನಾಟಕ ಲೋಕಾಯುಕ್ತ ಪಿಐ ಪಿ.ನಿರಂಜನ ಎಮ್. ಪಾಟೀಲ ಫೆ.27 ರಂದು ಮುಂಜಾನೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ಚಿಕ್ಕೋಡಿ. ಕರ್ನಾಟಕ ಲೋಕಾಯುಕ್ತ ಪಿಐ ಪಿ.ನಿರಂಜನ ಎಮ್. ಪಾಟೀಲ ಫೆ.28 ರಂದು ಮುಂಜಾನೆ 11 ರಿಂದ 2 ಗಂಟೆಯವರೆಗೆ ಪ್ರವಾಸಿ ಮಂದಿರ ರಾಯಬಾಗ. ಇಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಎಂದು ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಗ್ರಾಮ ಪಂಚಾಯತ ಉಪ-ಚುನಾವಣೆ-2023: ಮದ್ಯ ಮಾರಾಟ ನಿಷೇಧ

ಬೆಳಗಾವಿ, ಫೆ.21-: ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯತ ಉಪ-ಚುನಾವಣೆ-2023 ರ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ (ಫೆ.23 2023 ರ ಸಂಜೆ 5 ಗಂಟೆಯಿಂದ ಫೆ.25 2023 ರ ಮಧ್ಯರಾತ್ರಿ 12 ಗಂಟೆಯವರೆಗೆ) ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯತ ಪ್ರದೇಶಗಳಾದ ರಾಮದುರ್ಗ ತಾಲೂಕಿನ ನರಸಾಪೂರ, ಬೆಳಗಾವಿ ತಾಲೂಕಿನ ಬೆಳಗುಂದಿ ಹಾಗೂ ಹೀರೇಬಾಗೇವಾಡಿ, ಖಾನಾಪೂರ ತಾಲೂಕಿನ ಗಂದಿಗವಾಡ, ಕಾಗವಾಡ ತಾಲೂಕಿನ ಉಗಾರ ಬುದ್ರುಕ, ಹಾಗೂ ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾ.ಪಂ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ವಿಷೇಧಿಸಿ ಮದ್ಯ/ಬಾರ ಅಂಗಡಿಗಳನ್ನು ಬಂದ್ ಇಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್.ಕೆ.ಪಾಟೀಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.////

ವಿದ್ಯುತ್ ವ್ಯತ್ಯಯ ಫೆ.27 ರಂದು

 

ಬೆಳಗಾವಿ, ಫೆ.21 : ಬೆಳಗಾವಿಯ 110 ಕೆ.ವ್ಹಿ ವಡಗಾಂವ ಉಪಕೇಂದ್ರ ವಿದ್ಯುತ ಸರಬರಾಜು ಆಗುವ ಬೆಳಗಾವಿ ನಗರದ ಈ ಕೆಳಗೆ ತಿಳಿಸಿದ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಸೋಮವಾರ ಫೆ. 27 2023 ಮುಂಜಾನೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು ಎಫ್-04 ಬಜಾರ ಗಲ್ಲಿ ವ್ಯಾಪ್ತಿಯ ಭಾರತ ನಗರ,ಲಕ್ಷ್ಮಿ ನಗರ,ಗಣೇಶಪೂರಗಲ್ಲಿ, ಜೇಡಗಲ್ಲಿ, ಅಳ್ವ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲ ಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ ರೋಡ, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ, ಸರ್ವೊದಯ ಕಾಲನಿ, ನಝರಕ್ಯಾಂಪ, ರಾಮದೇವ್‍ಗಲ್ಲಿ, ವಿಷ್ಣು ಗಲ್ಲಿ,ಶಹಾಪೂರಗಲ್ಲಿ, ಮೇಘದೋತ ಸೊಸೈಟಿ, ನಾತ್ ಪೈ ಸರ್ಕಲ್.
ಎಫ್-5 ವಡಗಾಂವ ವ್ಯಾಪ್ತಿಯ ನೇಕಾರ ಕಾಲನಿ, ನಿಜಾಮಿಯಾ ನಗರ,ರಾಯತ್ ಗಲ್ಲಿ,ವಿಷ್ಣುಗಲ್ಲಿ, ಎಫ್-6 ಹಳೆಬೆಳಗಾವಿ ವ್ಯಾಪ್ತಿಯ ಗಣೇಶ ಪೇಠ, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ ನಗರ, ಬಸ್ತಿ ಗಲ್ಲಿ, ಎಫ್-7 ಹೊಸೂರ ವ್ಯಾಪ್ತಿಯ ಮಾದವ ರಸ್ತೆ, ಕಪಲೇಶ್ವರ ಕಾಲೋನಿ, ಮಾಹಾವೀರ ಕಾಲೋನಿ, ಸಮರ್ಥ ನಗರ, ಓ ನಗರ, ಪಾಟೀಲ ಗಲ್ಲಿ, ಎಫ್-11 ಸುಭಾಷ ಮಾರ್ಕೇಟ್ ವ್ಯಾಪ್ತಿಯ ಹಿಂದವಾಡಿ,ರಾನಡೆ ಕಾಲನಿ,ಗೋವಾ ವೇಸ್.
ಎಫ್-12 ವಿದ್ಯಾನಗರ ವ್ಯಾಪ್ತಿಯ ಅನಗೋಳ, ವಿದ್ಯಾನಗರ, ಅಂಬೇಡ್ಕರ ನಗರ, ರಾಜಹಂಸಗಲ್ಲಿ, ಮಹಾವೀರ ನಗರ, ಬಾಂಧುರಗಲ್ಲಿ,ಸಂತ ಮೀರಾ ಶಾಲೆ ರಸ್ತೆ, ಅನಗೋಳ ವಡಗಾಂವರಸ್ತೆ, ಗುಲಮೋಹರ ಕಾಲೋನಿ, ಸಮೃದ್ಧಿ ಕಾಲೋನಿ, ಪಾರಿಜಾತ ಕಾಲೋನಿ, ಓಂಕಾರ ನಗರ, ಎಫ್-13 ಭಾಗ್ಯನಗರ ವ್ಯಾಪ್ತಿಯ ಭಾಗ್ಯ ನಗರ 1ನೇ ಕ್ರಾಸ್ ದಿಂದ 10ನೇ ಕ್ರಾಸ್ ವರೆಗೆ, ಎಫ್-14 ಯಳ್ಳೂರ ರೋಡ್ ಆನಂದ ನಗರ, ಸಂಭಾಜಿ ನಗರ, ಕೆ.ಎಲ್.ಇ ಯಳ್ಳೂರ ರಸ್ತೆ, ಆದರ್ಶನಗರ, ಹಿಂದವಾಡಿ, ಜೈಲ ಶಾಲೆ,ಫುಲೆ ಗಲ್ಲಿ, ಅನ್ನಪೂರ್ಣೆಶ್ವರಿ ನಗರ, ಗಣೇಶನಗರ. ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಎಂದು ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////