ಮದ್ಯ ಮಾರಾಟದಿಂದ ಭರ್ಜರಿ ಆದಾಯ

ಬೆಂಗಳೂರು: ಅಬಕಾರಿ ಇಲಾಖೆ ಮದ್ಯ ಮಾರಾಟದಿಂದ ಭರ್ಜರಿ ಆದಾಯಗಳಿಸಿದೆ. ಕಳೆದ 5 ವರ್ಷಗಳಲ್ಲಿ ಅಬಕಾರಿ ಇಲಾಖೆಯಿಂದ ಸರ್ಕಾರಕ್ಕೆ ಹಣದ ಹೊಳೆ ಹರಿದು ಬಂದಿದೆ.
ಮದ್ಯ ಮಾರಾಟದ ಬಗ್ಗೆ ಸರ್ಕಾರ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಕಳೆದ 5 ವರ್ಷಗಳಲ್ಲಿ ಸುಮಾರು 1 ಲಕ್ಷ ಕೋಟಿ ಆದಾಯ ಸಂಗ್ರಹ ಮಾಡಿದೆ.
ಜೆಡಿಎಸ್ ಸದಸ್ಯ ಗೋವಿಂದ್ ರಾಜ್ ಪ್ರಶ್ನೆಗೆ ಸಚಿವ ಕೆ. ಗೋಪಾಲಯ್ಯ ಉತ್ತರ ನೀಡಿದ್ದಾರೆ. ಜನವರಿ ಅಂತ್ಯದ ವೇಳೆಗೆ 2017-2023ರ ನಡುವಿನ ಮದ್ಯ ಮಾರಾಟದ ಅಂಕಿ ಅಂಶ ಪ್ರಕಟ ಮಾಡಿದೆ.
ಒಟ್ಟು 3,494 ಲಕ್ಷ ಬಾಕ್ಸ್‌ಗಳಷ್ಟು ಮದ್ಯ ಮಾರಾಟ ಮಾಡಿದ್ದು, ಇದರಿಂದ 93,391 ಕೋಟಿ ಆದಾಯ ಬಂದಿದೆ. ಬಿಯರ್ ವ್ಯಾಪಾರದಲ್ಲಿ 1,399 ಲಕ್ಷ ಬಾಕ್ಸ್ ವ್ಯಾಪಾರ ಮಾಡಿ 16,297 ಕೋಟಿ ಆದಾಯ ಬಂದಿದೆ. ಮದ್ಯ, ಬಿಯರ್ ನಿಂದ 4,893 ಲಕ್ಷ ಬಾಕ್ಸ್ ಮಾರಾಟವಾಗಿದ್ದು ಒಟ್ಟು 1,09,688 ಕೋಟಿ ರಾಜಸ್ವ ಸಂಗ್ರಹವನ್ನು ಸರ್ಕಾರ ಮಾಡಿದೆ ಎಂದು ಅಂಕಿ-ಅಂಶದಲ್ಲಿ ತಿಳಿಸಿದೆ.