Belagavi News In Kannada | News Belgaum

ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ನೊಂದ ಮಹಿಳೆ ಒತ್ತಾಯ

ಅಥಣಿ: ಜಮೀನಿನ ವ್ಯಾಜ್ಯದ ಸಲುವಾಗಿ ಸಂಬಂಧಿಕರೇ ಅರೆಬೆತ್ತಲಾಗಿ ಥಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ  ದೂರು ನೀಡಿದರೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೆ ಅವರ ಬೆಂಬಲವಾಗಿ ನಿಂತಿದೆ ಎಂದು ನೊಂದ ವಿಧವೆ ಶಾಂತವ್ವ ನಾಗಪ್ಪ ಮಾಂಗ ಎಂಬ ಮಹಿಳೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಶಾಂತವ್ವ ನಾಗಪ್ಪ ಮಾಂಗ ಎಂಬ ವಿಧವೆಯ ಜಮೀನು ವಶಪಡಿಸಿಕೊಳ್ಳಲು ಗಂಡನ ಅಣ್ಣತಮ್ಮಂದಿರಾದ ಲಕ್ಕಪ್ಪ ಬಾಬು ಮಾಂಗ, ಭೀಮಪ್ಪ ಲಕ್ಕಪ್ಪ ಮಾಂಗ, ಹಣಮಂತ ಲಕ್ಕಪ್ಪ ಮಾಂಗ ಎಂಬುವವರು ಸಂತ್ರಸ್ತೆ ಶಾಂತವ್ವ ಹಾಗೂ ಅವಳ ಅಪ್ರಾಪ್ತ ಮಗಳ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ಅಪ್ರಾಪ್ತ ಯುವತಿ ಹಾಗೂ ಸಂತ್ರಸ್ತೆಯ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ದಿನಗಳಾದರೂ ಆರೋಪಿತರನ್ನು ಬಂಧನ ಮಾಡದೆ ಅವರನ್ನು ಪರಾರಿಯಾಗಲು ಬಿಟ್ಟಿದ್ದಾರೆ. ಶೀಘ್ರವೇ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳು ಮುಂದಾಗಬೇಕು ಎಂದು ಸಂತ್ರಸ್ತ ಮಹಿಳೆ ಮನವಿ ಮಾಡಿದ್ದಾರೆ.////