ಜಿಮ್ ಮಾಡುತ್ತಿದ್ದಾಗಲೇ ಹೃದಾಯಾಘಾತದಿಂದ ಮೃತಪಟ್ಟ 24 ವರ್ಷದ ಪೊಲೀಸ್ ಪೇದೆ

ಹೈದರಾಬಾದ್: ಜಿಮ್ ಮಾಡುತ್ತಿದ್ದಾಗಲೇ ಹೃದಾಯಾಘಾತದಿಂದ ಮೃತಪಟ್ಟ 24 ವರ್ಷದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದಿದೆ.
ಘಾನ್ಸಿ ಬಜಾರ್‌ನ ನಿವಾಸಿಯಾದ ವಿಶಾಲ್ 2020 ಬ್ಯಾಚ್‌ನ ನೇಮಕಾತಿಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿದ್ದರು ಹಾಗೂ ಅವರನ್ನು ಆಸಿಫ್ ನಗರ ಪೊಲೀಸ್ ಠಾಣೆಗೆ ನಿಯೋಜಿಸಲಾಗಿತ್ತು. ಗುರುವಾರ ಸಂಜೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಉಸಿರುಕಟ್ಟಿದಂತಾಗಿ ಸುಧಾರಿಸಿಕೊಳ್ಳುತ್ತಿದ್ದವರು ನೆಲಕ್ಕೆ ಕುಸಿದಿದ್ದಾರೆ. ಜಿಮ್‌ನಲ್ಲಿ ಕಸರತ್ತಿನಲ್ಲಿ ತೊಡಗಿದ್ದವರು ಗಾಬರಿಯಾಗಿ ಅವರತ್ತ ನಡೆದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಆರೋಗ್ಯ ಪೂರ್ಣ ಬದುಕಿಗೆ ಸದೃಢ ದೇಹ, ಸದೃಢ ಮನಸ್ಸು ಅವಶ್ಯಕ. ನಿತ್ಯದ ಒತ್ತಡಗಳ ಕೆಲಸಗಳ ನಡುವೆಯೂ ಒಂದಷ್ಟು ಸಮಯ ದೈಹಿಕ ಕಸರತ್ತಿಗೆ ಮೀಸಲಿಡುವುದು ಅವಶ್ಯಕ. ಪೊಲೀಸರ ಕೆಲಸವೂ ಸಹ ಹಲವು ರೀತಿ ಒತ್ತಡಗಳನ್ನು ಒಳಗೊಂಡಿರುವುದೆ. ಈ ನಡುವೆಯೂ ದೇಹವನ್ನು ಹುರಿಗೊಳಿಸಿಕೊಳ್ಳಲು ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ವಿಶಾಲ್ ಹೃದಯ ಸ್ತಂಭನಕ್ಕೆ ಒಳಗಾದರು. ಜಿಮ್‌ನಲ್ಲಿದ್ದವರು ಅವರು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಉಸಿರು ನಿಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ./////