ದಿ.ಸಚಿವ ಉಮೇಶ ಕತ್ತಿ ಅವರ 62 ನೇ ಜನುಮದಿನದ ಪ್ರಯುಕ್ತ ಮಾರ್ಚ8 ರಿಂದ 10ರವರೆಗೆ 3 ದಿನಗಳಕಾಲ ಉಚಿತ ಕಣ್ಣಿನತಪಾಸಣೆ

ಹುಕ್ಕೇರಿ – ದಿ.ಸಚಿವ ಉಮೇಶ ಕತ್ತಿ ಅವರ 62 ನೇ ಜನುಮದಿನದ ಪ್ರಯುಕ್ತ ಮಾರ್ಚ8 ರಿಂದ 10ರವರೆಗೆ 3 ದಿನಗಳಕಾಲ ಉಚಿತ ಕಣ್ಣಿನತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ ಎಂದು ಹೀರಾ ಶುಗರ ಸಕ್ಕರೆ ಖಾರಕಾನೆಯ ಅದ್ಯಕ್ಷ ನಿಖಿಲ ಕತ್ತಿ ಹೇಳಿದರು.
ಅವರು ಇಂದು ಪಟ್ಟಣದ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಶ್ವನಾಥ ಕತ್ತಿ ಟ್ರಸ್ಟ ಮತ್ತು ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ಸಹಯೋಗದಲ್ಲಿ ಎರ್ಪಡಿಸಲಾಗಿದೆ ತಾಲೂಕಿನ ಜನತೆ ಸದುಪಯೋಗಪಡೆದುಕೊಳ್ಳಬೇಕು ಸಂರ್ಪೂಣ ಉಚಿತವಾಗಿದೆ.ಹಾಗೂ ನುರಿತ ವೈದ್ಯರ ತಂಡ ನಡೆಸಿಕೋಡುತ್ತದೆ.ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೋಂದಣಿ ಮಾಡಿ ಕೊಳ್ಳಲಾಗುವದು ಎಂದರು.
ಬೆಲ್ಲದ ಬಾಗೆವಾಡಿಯ ಅರ್ಬನ ಬ್ಯಾಂಕಿನ ಅದ್ಯಕ್ಷ ಪವನಕತ್ತಿ ಮಾತನಾಡಿ ಕನ್ನೆರಿ ಮಠ ಕ್ಕೆ 4 ಲಕ್ಷ ರೋಟ್ಟಿ ಮಾಡಿ ಕೊಟ್ಟು ಕ್ಷೇತ್ರದ ತಾಯಂದಿರಿಗೆ ಧನ್ಯವಾದಗಳು ಹೇಳಿದರು.
ಉಧ್ಯಮಿ ಪೃಥ್ವಿ ಕತ್ತಿ ಮಾತನಾಡಿ ಮಾರ್ಚ 1 ,2 ರಂದು ಜರಗುವ ರಂಗಾಯನ ದಾರವಾಡ ಅವರಿಂದ ವೀರ ರಾಣಿ ಕಿತ್ತೂರು ಚೆನ್ನಮ್ಮಾ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದು ಅದಕ್ಕೆ ಸಕಲ ಸಿದ್ದತೆ ಮಾಡಿಕೋಂಡಿದ್ದು ಎಲ್ಲರೂ ಕೂಡಿಕೋಂಡು ಯಶಸ್ವಿ ಮಾಡೋನವೇಂದರು.
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಎ.ಕೆ.ಪಾಟೀಲ, ವಿದ್ಯುತ್ಸಹಕಾರಿ ಸಂಘದ ಅದ್ಯಕ್ಷ ಕಲಗೌಡಾ ಪಾಟೀಲ, ರಾಜೇಂದ್ರ ಪಾಟೀಲ, ರಮೇಶ ಕುಲರ್ಣಿ.ಮಹಾವಿರ ನಿಲಜಗಿ ರಾಯಪ್ಪ ಡೂಗ.ರಾಜು ಮುನ್ನೋಳ್ಳಿ.ಬಸವರಾಜ ಮರಡಿ ಶಿತಲ ಬ್ಯಾಳಿ. ಡಾ.ಉದಯ ಕುಡಚಿ. ಮತ್ತಿರರು ಉಪಸ್ತಿತರಿದ್ದರು.