2022-23 ನೇ ಸಾಲಿನ ಎಸ್.ಎಫ್.ಸಿ ಅನುದಾನ ಕಾಗವಾಡ ಪಟ್ಟಣ ಪಂಚಾಯತಿಯಿಂದ

ಬೆಳಗಾವಿ, ಫೆ.24: ಫೆ.27 2023 ರಂದು ಬೆಳಗಾವಿ ಕಾಗವಾಡ ಪಟ್ಟಣ ಪಂಚಾಯತಿಯಿಂದ 2022-23ನೇ ಸಾಲಿನಲ್ಲಿ ಎಸ್.ಎಫ.ಸಿ.ಅನುದಾನದ ಶೇ. 22% ಪ.ಜಾತಿ (SಅSP), ಶೇ.7 ಪ.ಪಂಗಡ(ಖಿSP),ಇತರೆ ಬಡಜನರು ಶೇ.7.25 ಹಾಗೂ ಅಂಗವಿಕಲರ ಶೇ.5%ರ್ ಕಾಯ್ದಿರಿಸಿದ ಅನುದಾನದಲ್ಲಿ ಪಟ್ಣಣ ಪಂಚಾಯತಿಯಿಂದ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು.
ಈ ಕೆಳಕಂಡ ವ್ಯಕ್ತಿಗತ ಸೌಲಭ್ಯಗಳನ್ನು ಪಡೆಯಲು ಫೆ.24 2023 ರಂದು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಬರುವಂತಹ ಅರ್ಹರು ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ.08 2023 ರ ಒಳಗೆ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದ್ದಾಗಿದೆ. ಅಪೂರ್ಣ ಅರ್ಜಿಗಳನ್ನು ಪರಿಣಿಸಲಾಗುವುದಿಲ್ಲ.
2022-23 ನೇ ಸಾಲಿನ ಎಸ್.ಎಫ್.ಸಿ ಅನುದಾನ :
ಪ.ಜಾತಿ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ.22% ಕಾರ್ಯಕ್ರಮದ ವ್ಯಕ್ತಿ ಸಂಬಂಧಿತ ಅನುಕೂಲತೆಗಳು.
ಕಾಗವಾಡ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಜನರಿಗೆ ವಯಕ್ತಿಕ ಶೌಚಾಲಯ ನಿರ್ಮಾಣ
ಮಾಡುವುದು,
ಪ.ಪಂಗಡ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ.7% ಕಾರ್ಯಕ್ರಮದ ವ್ಯಕ್ತಿ ಸಂಬಂಧಿತ ಅನುಕೂಲತೆಗಳು. ಕಾಗವಾಡ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ.ಪಂಗಡ ಜನರಿಗೆ 14500 ರೂ.ಗಳಂತೆ ವಯಕ್ತಿಕ
ಶೌಚಾಲಯ ನಿರ್ಮಾಣ ಮಾಡುವುದು
ಇತರೆ ಬಡಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ. 7.25%ಕಾರ್ಯಕ್ರಮದ ವ್ಯಕ್ತಿ ಸಂಬಂಧಿತ ಅನುಕೂಲತೆಗಳು.
ಕಾಗವಾಡ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಡಜನರಿಗೆ ತಲಾ 14 ಸಾವಿರ ರೂ.ಗಳಂತೆ ವಯಕ್ತಿಕ
ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ನೀಡುವುದು.
ಅಂಗವಿಕಲ ಅಭಿವೃದ್ಧಿಗಾಗಿ ಮೀಸಲಿಟ್ಟ 5% ಅನುದಾನದ ಕಾರ್ಯಕ್ರಮಗಳ ವ್ಯಕ್ತಿ ಸಂಬಂಧಿತ ಅನುಕೂಲತೆಗಳು.
ಕಾಗವಾಡ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಗವಿಕಲ ಜನರಿಗೆ ವಯಕ್ತಿಕ ಮನೆ ದುರಸ್ತಿಗೆ ಸಹಾಯಧನ ನೀಡಲಾಗುವುದು