ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನ್ ರೆಡಿ: ಶಾಸಕ ರಮೇಶ್ ಜಾರಕಿಹೊಳಿ

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನ್ ರೆಡಿ: ಶಾಸಕ ರಮೇಶ್ ಜಾರಕಿಹೊಳಿ
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಾನು ಸಿದ್ಧ, ಅವರೇನು ನಮ್ಮ ವೈರಿನಾ? ಅವರು ನಮ್ಮ ಶಾಸಕರು ಎಂದು ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಎಂದು ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.27ರಂದು ಪ್ರಧಾನಿ ಮೋದಿ ಬರುತ್ತಾರೆ. ಮಾ. 2ರಂದು ರಾಜಹಂಸಗಢ ಪ್ರತಿಮೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಮೇಲೆ ರಾಜಕೀಯವಾಗಿ ಮಾತನಾಡೋಣ. ಮಾರ್ಚ್ 2ರಂದು ಸಣ್ಣ ಪ್ರಮಾಣದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ ಸರ್ಕಾರಿ ಕಾರ್ಯಕ್ರಮವಾಗಿದೆ. ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲಸ ಆಗುತ್ತದೆ. ಆ ಶಾಸಕರಿಗೆ ಸಿಗುವಂತಹ ಮರ್ಯಾದೆ ಸಿಗಬೇಕು. ಒಳ್ಳೆಯ ರೀತಿ ಕಾರ್ಯಕ್ರಮ ಆಗಬೇಕು ಎಂದರು.
ಕಾರ್ಯಕ್ರಮಕ್ಕೆ ನೀವು ಬರ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾರ್ಯಕ್ರಮಕ್ಕೆ ಬರ್ತೀನಿ, ಇಡೀ ಜಿಲ್ಲೆಯ ಶಾಸಕರಿಗೆ ಆಹ್ವಾನ ಮಾಡಬೇಕಾಗಿದೆ. ನಾನು ಆ ದಿನ ಸಿಎಂ ಜೊತೆ ಬೆಂಗಳೂರಿನಿಂದ ಬರ್ತೇನೆ ಎಂದರು.
ಕೀಳುಮಟ್ಟದ ರಾಜಕಾರಣ ಮಾಡಿಲ್ಲ: ಸಿ.ಪಿ.ಯೋಗೇಶ್ವರ ಪ್ರವಾಸೋದ್ಯಮ ಸಚಿವರಿದ್ದಾಗ ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಅನುದಾನ ತರಲು ರಮೇಶ್ ಜಾರಕಿಹೊಳಿ ಅಡ್ಡಿ ಎಂಬ ಚನ್ನರಾಜ ಹಟ್ಟಿಹೊಳಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಷ್ಟು ಕೀಳುಮಟ್ಟದ ರಾಜಕಾರಣ ರಮೇಶ್ ಜಾರಕಿಹೊಳಿ ಜೀವನದಲ್ಲಿ ಮಾಡಿಲ್ಲ, ಮಾಡೋದು ಇಲ್ಲ ಎಂದು ಹೇಳಿದ್ದಾರೆ.