ಮಠ ಮಂದಿರಗಳು ಯೋಗ, ಧ್ಯಾನ, ಸಂತ್ಸಂಗ ಆಧ್ಯಾತ್ಮಗಳನ್ನು ಮುಂದುವರೆಸಿಕೊಂಡು ಹೋಗಬೇಕು: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅಭಿಮತ

ಮಠ ಮಂದಿರಗಳು ಯೋಗ, ಧ್ಯಾನ, ಸಂತ್ಸಂಗ ಆಧ್ಯಾತ್ಮಗಳನ್ನು ಮುಂದುವರೆಸಿಕೊಂಡು ಹೋಗಬೇಕು: ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅಭಿಮತ
ಜೀವನವೆಂಬುದು ಗಾಳಿಗಿಟ್ಟ ದೀಪವಿದ್ದಂತೆ ಇರುವವರೆಗೆ ಬೆಳಗುತ್ತದೆ. ಹಾಗೆಯೇ ನಮ್ಮ ಬದುಕು ಇರುವವರೆಗೂ ಎಷ್ಟು ಅರ್ಥಗರ್ಭಿತವಾಗಿ ಬದುಕುತ್ತೇವೆ ಎಂಬುದು ಮುಖ್ಯ. ಜಗತ್ತಿನ ಯಾವುದೇ ಆಸ್ತಿ ಐಶ್ವರ್ಯ ನೀಡದಂತಹ ವಸ್ತುಗಳು ಸಮಾಧಾನ, ಸಹನೆ, ತಾಳ್ಮೆ, ಅಧ್ಯಾತ್ಮಿಕ ಚಿಂತನೆ, ಆಚಾರ-ವಿಚಾರಗಳಿಂದ ದೊರೆಯುತ್ತದೆ. ಆದುದರಿಂದ ಮಠ ಮಂದಿರಗಳು ಯೋಗ, ಧ್ಯಾನ, ಸಂತ್ಸಂಗ ಆಧ್ಯಾತ್ಮ ಸತ್ಸಂಗಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕರ್ನಾಟಕ ಹೈಕೋರ್ಟನ ವಿಶ್ರಾಂತ ನ್ಯಾಯಮೂರ್ತಿ ಎನ್.ಕೆ. ಪಾಟೀಲರವರು ತಿಳಿಸಿದರು.
ಎಂದಿಗೂ ಮಾಲಿಕರಾಗಿರುವುದಿಲ್ಲ, ಸಮಾಜದ ನಿಜವಾದ ಸೇವಕರಾಗಿರುತ್ತಾರೆ. ನಿತ್ಯ ಕಾಯಕ , ಧರ್ಮೋಪದೇಶ, ಭಕ್ತರಿಗೆ ಅನ್ನ, ಆಶ್ರಯ, ಜ್ಞಾನ, ಶಿಕ್ಷಣ, ನೀತಿ ಮಾರ್ಗದ ಸಂದೇಶಗಳನ್ನು ನೀಡುವುದರ ಜೊತೆಗೆ ಸಮಾಜದ ಕೆಲವೊಂದು ಮೂಲೆಯಲ್ಲಿ ಉಳಿದುಕೊಂಡಿರುವ ಸ್ಪೃಶ್ಯ ಮತ್ತು ಅಸ್ಪೃಷ್ಯತೆಯ ಭಾವವನ್ನು ದೂರಾಗಿಸಿ ಸಮ ಸಮಾಜವನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿಯನ್ನು ಶ್ರೀಗಳವರು ನಿಭಾಯಿಸಬೇಕಿದೆ. ತಮ್ಮ ಮಠಗಳ ಮೂಲಕ ಋಷಿ ಪರಂಪರೆ, ಗುರುಕುಲ ಶಿಕ್ಷಣ, ಆಧ್ಯಾತ್ಮದ ಕಡೆ ಹೆಚ್ಚಿನ ಭಕ್ತರನ್ನು ಕರೆದುಕೊಂಡು ಹೋಗುವ ಕಾರ್ಯಗಳಾಗಬೇಕು. ಇಂತಹ ಕಾರ್ಯಗಳಲ್ಲಿ ಷಟಸ್ಥಳ ಬ್ರಹ್ಮಿ ಡಾ. ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯರು ಮುಂದುವರೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸವಿದೆ. ಪೀಠಾಧೀಪತಿಗಳ ಗುರುತರ ಜವಾಬ್ದಾರಿಗಳು ಇರುತ್ತವೆ. ಇವುಗಳನ್ನು ನಡೆಸಿಕೊಂಡು ಹೋಗಲು ಭಕ್ತ ಸಮೂಹ, ಜನಪ್ರತಿನಿಧಿಗಳು ಹಾಗೂ ಸಮಾಜದ ಎಲ್ಲಾ ವರ್ಗದವರು ಮಠ ಮಮದಿರಗಳ ಜೊತೆ ಕಯಜೋಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಶಸ್ತಿ ಪುರಸ್ಕೃತರು ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತವೃಂದದವರು ಹಾಜರಿದ್ದರು.