ಜನರಿಗೆ ನೀಡಿದ ಭರವಸೆ ಪ್ರಧಾನಿ ಮೋದಿ ಈಡೇರಿಸಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಮೋದಿ ಜನರ ಕೆಲಸ ಮಾಡಿಲ್ಲ. ಅವರು ಸುಳ್ಳು ಹೇಳುತ್ತಾರೆ. ನೀಡಿದ ಭರವಸೆ ಈಡೇರಿಸಿಲ್ಲ ಅಂತಾ ನಾವು ಹೇಳಿದ್ದೇವೆ. ಪ್ರಧಾನಿ ಮೋದಿ ಯವರು ಪಾಪ ಇನ್ನೂ ಬದುಕಿರಲಿ, ಅವರ ಆರೋಗ್ಯ ಚೆನ್ನಾಗಿರಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ನನ್ನ ಸಾವು ಜಪಿಸುತ್ತಿದೆ ಕಾಂಗ್ರೆಸ್ ಎಂಬ ಪ್ರಧಾನಿ ಮೋದಿ ಹೇಳಿಕೆ ವಿಚಾರಕ್ಕೆ ಯಾರಾದರೂ ಆ ತರಹ ಹೇಳಿದ್ದಾರಾ? ಹೇಳಿದವರ ಹೆಸರೇಳಿ ನೋಡೋಣ. ಅವರೇ ಸೃಷ್ಟಿ ಮಾಡಿಕೊಂಡು ಹೇಳುತ್ತಿದ್ದಾರೆ. ಇದು ನರೇಂದ್ರ ಮೋದಿಯವರ ಮತ್ತೊಂದು ಸುಳ್ಳಾಗಿದೆ. ಮುಗಿಸಿ ಬಿಡಿ ಸಿದ್ದರಾಮಯ್ಯರನ್ನ ಅಂತಾ ಅಶ್ವಥ್ ನಾರಾಯಣ್ ಹೇಳಿದ್ದರು. ಆ ತರಹ ಯಾರಾದರೂ ಹೇಳಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿಯವರು ಪಾಪ ಬದುಕಿರಲಿ, ಅವರ ಆರೋಗ್ಯ ಚೆನ್ನಾಗಿರಲಿ. ಜನರ ಕೆಲಸ ಮಾಡಿಲ್ಲ ಅಂತಾ ನಾವು ಅಷ್ಟೇ ಹೇಳಿದ್ದೇವೆ. ಅವರು ಸುಳ್ಳು ಹೇಳ್ತಾರೆ, ನೀಡಿದ ಭರವಸೆ ಈಡೇರಿಸಿಲ್ಲ ಅಂತಾ ಅಷ್ಟೇ ಹೇಳಿದ್ದೇವೆ. ದೇಶದ ಪ್ರಧಾನಮಂತ್ರಿಗಳು ಆರೋಗ್ಯವಾಗಿರಲಿ ಎಂದು ಹಾರೈಸಿದರು.//////