Belagavi News In Kannada | News Belgaum

ಶಿಸ್ತು ಮತ್ತು ಆತ್ಮೀಯತೆಯಿಂದ ಕೆಲಸ ಮಾಡುತ್ತಿದ್ದರು ಎಂದು ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಓಂಪ್ರಕಾಶ ಶ್ಲಾಘಿಸಿದರು.

ಬೆಳಗಾವಿ: ಮಾರ್ಚ 1  ಶಿವಾನಂದ ಮಗದುಮ್ಮ ಓರ್ವ ಅಜಾತಶತ್ರು, ಎಲ್ಲರ ಜತೆಗೂ ಅತ್ಯಂತ ಅವಿನಾಭಾವ ಸಂಬಂಧ ಹೊಂದಿದ್ದರು. ಶಿಸ್ತು ಮತ್ತು ಆತ್ಮೀಯತೆಯಿಂದ ಕೆಲಸ ಮಾಡುತ್ತಿದ್ದರು ಎಂದು ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಓಂಪ್ರಕಾಶ ಶ್ಲಾಘಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಸಿಬ್ಬಂದಿ, ಜಿಲ್ಲಾ ಮೋಟಾರು ವಾಹನ ತರಬೇತಿ ಶಾಲೆಗಳ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಆಟೋ ಮೋಬೈಲ್ ಡೀಲರ್ಸ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಮಂಗಳವಾರ ನಗರದ ಕೆಎಲ್‍ಇ ಜೆಎನ್‍ಎಂಸಿಯ ಡಾ. ವಿ. ಡಿ. ಪಾಟೀಲ ಸಭಾಂಗಣದಲ್ಲಿ ಆಯೋಜಿಸಿದ್ದ ಸೇವಾ ನಿವೃತ್ತಿ ಹೊಂದಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಶಿವಾನಂದರ ಕಾರ್ಯವೈಖರಿ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ. ಕೆಲಸ ಸಮಯದಲ್ಲಿ ಶಿಸ್ತಿನ ಸಿಪಾಯಿ ಆಗಿರುತ್ತಿದ್ದ ಅವರು, ಉಳಿದ ಸಮಯದಲ್ಲಿ ತಮ್ಮ ಸಿಬ್ಬಂದಿಗಳನ್ನು ಸಹೋದರರಂತೆ ನೋಡುತ್ತಿದ್ದರು. ಅವರ ನಿವೃತ್ತಿ ಬಹಳಷ್ಟು ಜನರ ಮನಸ್ಸಿಗೆ ನೋವು ತಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಟಿ ಸಾರಿಗೆ ಆಯುಕ್ತೆ ಡಾ. ಎಂ. ಶೋಭ ಮಾತನಾಡಿ, ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ರೀತಿಯಲ್ಲಿ ಶಿವಾನಂದ ಮಗದುಮ್ಮ ಕೆಲಸ ಮಾಡಿದ್ದರು. ಅವರ ಉದಾತ್ತ ವಿಚಾರಗಳಿಂದ ಜೀವನದಲ್ಲಿ ಉನ್ನತ ಸ್ಥಾನ ಪಡೆದುಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಅಧಿಕಾರ ಇದ್ದಾಗ ಯಾವ ರೀತಿ ಜನೋಪಕಾರಿಯಾಗಿ ಕೆಲಸ ಮಾಡಬೇಕೆಂಬುದನ್ನು ಶಿವಾನಂದರನ್ನು ನೋಡಿ ಕಲಿಬೇಕು. ಈಗಾಗಲೇ ತಮ್ಮನ್ನು ಸಾಮಾಜಿಕ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯ ನಿರಂತರವಾಗಿ ಹೀಗೆ ಮುಂದುವರಿಯಲಿ. ಬಡವರು, ದೀನ ದಲಿತರ ಪರವಾಗಿ ಕೆಲಸ ಮಾಡಿರಿ ಎಂದು ಹಾರೈಸಿದರು.

ಇದೇ ವೇಳೆ ಶಿವಾನಂದ ಮತ್ತು ಗೀತಾ ಮಗದುಮ್ಮ ದಂಪತಿಗಳಿಗೆ ಸತ್ಕರಿಸಿ ಗೌರವಿಸಲಾಯಿತು. ಅವರ ವೃತ್ತಿ ಜೀವನದ ಸಾಧನೆ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

ಮುಕ್ತಿಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮುನವಳ್ಳಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಮುನವಳ್ಳಿಯ ಶಿವಪುತ್ರ ಸ್ವಾಮೀಜಿ, ಕಡೋಲಿಯ ಗುರುಬಸವಲಿಂಗ ಸ್ವಾಮೀಜಿ, ಶರಣಪ್ಪ ಹುಗ್ಗಿ, ಜೆ.ಬಿ.ನರಸಣ್ಣವರ, ಪ್ರಶಾಂತ ಮರಲಿಂಗನವರ, ರವಿರಾಜ ಪವಾರ, ಐ.ಎಸ್. ರಾಮಣ್ಣವರ, ಡಿ.ವಿ.ಕುಲಕರ್ಣಿ, ಸುನೀತಕುಮಾರ ಉಮರಾಣಿ, ಆನಂದ ಗಾಮನಗಟ್ಟಿ, ಶೀತಲ ಕುಲಕರ್ಣಿ, ವೈಶಾಲಿ ಗೌಡರ, ರವಿಕುಮಾರ, ಬಾಲಾಜಿ, ನಿರಂಜನ ಮಣ್ಣಿಕೇರಿ, ಬಸವರಾಜ ಕಡ್ಲಿ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಮೋಟಾರು ವಾಹನ ನಿರೀಕ್ಷಕ ಓಂಪ್ರಕಾಶ ಆಡಿನ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜೇಶ್ವರಿ ಖಣಗಣ್ಣಿ ನಿರೂಪಿಸಿದರು. ಸುಜಯ ಕುಲಕರ್ಣಿ ವಂದಿಸಿದರು. ಶ್ರೀಶಕ್ತಿ ಅಶೋಕ ಮೇತ್ರಿ ಭರತ ನಾಟ್ಯ ಮಾಡಿದರು.