ಮೊಬೈಲ್ ಸ್ಫೋಟಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟ ವೃದ್ಧ

ಮಧ್ಯಪ್ರದೇಶ: ಮೊಬೈಲ್ ಚಾರ್ಜ್ಗೆ ಹಾಕಿ ಮಾತನಾಡುತ್ತಿರುವಾಗ ಸ್ಫೋಟಗೊಂಡು ಸ್ಥಳದಲ್ಲೇ ವೃದ್ಧನೊಬ್ಬ ಸಾವನ್ನಪ್ಪಿದ ಘಟನೆ ಉಜ್ಜಯಿನಿಯಿಂದ 40 ಕಿಮೀ ದೂರದಲ್ಲಿರುವ ಬದ್‌ನಗರದಲ್ಲಿ ನಡೆದಿದೆ.
ದಯಾರಾಮ್ ಬಾರೋಡ (68) ಮೃತ ವೃದ್ಧ. ದಯಾರಾಮ್ ಬರೋದ್ ಅವರು ಮನೆಯಲ್ಲಿ ಚಾರ್ಜ್ ಆಗುತ್ತಿದ್ದ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮೊಬೈಲ್ ಚಾರ್ಜ್ ಹಾಕಿರುವುದರಿಂದ ಸ್ಫೋಟವಾಗಿದೆ. ಈ ಪರಿಣಾಮ ದಯಾರಾಮ್ ಅವರ ತಲೆಯಿಂದ ಎದೆವರೆಗೆ ದೇಹ ಸಂಪೂರ್ಣ ತುಂಡು ತುಂಡಾಗಿದೆ.
ಪವರ್ ಪಾಯಿಂಟ್ ಕೂಡ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಿಂದ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಒಂದು ಫೋನ್ ಮಾತ್ರ ಕೆಟ್ಟದಾಗಿ ಹಾಳಾಗಿರುವುದು ಕಂಡುಬಂದಿದೆ. ಪೊಲೀಸರು ಮೊಬೈಲ್‌ನ ತುಣುಕುಗಳನ್ನು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ. ಚಾರ್ಜಿಂಗ್‌ನಲ್ಲಿ ಮೊಬೈಲ್‌ನೊಂದಿಗೆ ಮಾತನಾಡುತ್ತಿದ್ದ ವೇಳೆ ಮೊಬೈಲ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.