Belagavi News In Kannada | News Belgaum

ಹುಕ್ಕೇರಿ ,ವಿದ್ಯುತ್ ಸಹಕಾರಿ ಸಂಘದಿಂದ ಅತ್ಯುತ್ತಮ ಕಾರ್ಯ ದರ ಪರಿಷ್ಕರಣೆ ಸಭೆಯಲ್ಲಿ ಕೆಇಆರ್‍ಸಿ ಅಧ್ಯಕ್ಷ ಪಿ.ರವಿಕುಮಾರ ಅಭಿಪ್ರಾಯ

 

ಹುಕ್ಕೇರಿ   : ಸಹಕಾರಿ ತತ್ವದಡಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿರುವ ದೇಶದ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವು ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍ಸಿ) ದ ಅಧ್ಯಕ್ಷ ಪಿ.ರವಿಕುಮಾರ ಹೇಳಿದರು.
ಪಟ್ಟಣದ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ 2024ರ ವಿದ್ಯುತ್ ದರ ಪರಿಷ್ಕರಣೆ ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಘದ ಸದಸ್ಯರು, ಗ್ರಾಹಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳ ಅಭಿಪ್ರಾಯ ಮತ್ತು ಚಿಂತನೆ ಆಲಿಸಿದ ಬಳಿಕ ಸಂಘದ ಕಾರ್ಯ ವೈಖರಿ ಮೆಚ್ಚುಗೆಯಾಗಿದೆ ಎಂದರು.
ವಿದ್ಯುತ್ ಉತ್ಪಾದನೆಯಲ್ಲಿ ಯಾವ ಕೊರತೆ ಕಾಡುತ್ತಿಲ್ಲ. ಆದರೆ, ಉತ್ಪಾದಿಸಿದ ವಿದ್ಯುತ್ ಸಂಪೂರ್ಣವಾಗಿ ಬಳಸಲು ಬೇಕಾದ ಸರಬರಾಜು ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಅವರು ಹೇಳಿದರು.
ಆಯೋಗದ ಸದಸ್ಯ ಎಂ.ಡಿ.ರವಿ ಮಾತನಾಡಿ, ಗುಣಮಟ್ಟದ ವಿದ್ಯುತ್ ಸರಬರಾಜು ಪೂರೈಸಲು ಆಗಾಗ್ಗೆ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ, ಗ್ರಾಹಕರ ಹಾಗೂ ಸದಸ್ಯರ ಅಭಿಪ್ರಾಯ ಕೇಳಿ ತಿಳಿದುಕೊಂಡು ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.
ರೈತರಿಗೆ ನಿರಂತರ ವಿದ್ಯುತ ಸರಬರಾಜು ಮಾಡಿದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗುವುದಿಲ್ಲ. ಕಾರಣ ರಾತ್ರಿ ಬದಲಾಗಿ ಹಗಲು ಹೊತ್ತಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ರೈತರು ಹಾಗೂ ವಿದ್ಯುತ್ ಸಹಕಾರಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಈ ವೇಳೆ ಸಹಕಾರಿ ಸಂಘದ ನಿರ್ದೇಶಕರಾದ ಪೃಥ್ವಿ ಕತ್ತಿ, ಅಶೋಕ ಚಂದಪ್ಪಗೋಳ ಮಾತನಾಡಿ, ವಿದ್ಯುತ್ ಸರಬರಾಜು ಅಥವಾ ಯಾವುದೇ ಯೋಜನೆ ಜಾರಿಗೊಳಿಸಲು ಸರಕಾರ ಮುಂದಾದಲ್ಲಿ ಪ್ರಾಯೋಗಿಕವಾಗಿ ಅದನ್ನು ನಮ್ಮ ಸಂಘದಲ್ಲಿ ಅನುμÁ್ಠನಗೊಳಿಸುವಂತೆ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕರಾದ ಶಶಿರಾಜ ಪಾಟಿಲ, ಕೆ.ಕೆ.ಬೆನಚನಮರಡಿ, ಕುನಾಲಗೌಡ ಪಾಟಿಲ, ಬಸಪ್ಪಾ ಪಟೋಳಿ, ರವೀಂದ್ರ ಅಸೂದೆ, ಐ.ಆರ್.ಬಂಜಿರಾಮ, ರವೀಂದ್ರ ಹಿಡಕಲ್, ರಮೇಶ ಕುಲಕರ್ಣಿ, ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂಘದ ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪೂರೆ ಮಾತನಾಡಿ ಸಂಘದ ಆಡಳಿತ ಮತ್ತು ವ್ಯವಹಾರದ ಬಗ್ಗೆ ವಿವರಿಸಿದರು. ಮ್ಯಾನೇಜರ ದುರದುಂಡಿ ನಾಯಿಕ ವಂದಿಸಿದರು.