ಯುವತಿ ನಾಪತ್ತೆ

ಬೆಳಗಾವಿ, ಮಾ.03: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಗ್ರಾಮದ ಯುವತಿ ಮನಿಷಾ ಅಶೋಕ ಸರಿಕರ (19) ಇವರು ಫೆ..20, 2023 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮರಳಿ ಮನೆಗೆ ಬರದೇ ಕಾಣೆಯಾಗಿದ್ದಾಳೆ ಎಂದು ಇವರ ತಂದೆ ಅಶೋಕ ಸರಿಕರ ಇವರು ್ಲ ಹಾರೂಗೇರಿ ಪೋಲಿಸ್ ಠಾಣೆಯಲ್ಲಿ ದುರೂ ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆಪಟ್ಟಿ: ಎತ್ತರ 5 ಫೂಟ, ಸಾಧಾರಣ ಮೈ ಕಟ್ಟು, ಗೋದಿಗೆಂಪು ಮೈ ಬಣ್ಣ, ಕೋಲು ಮುಖ, ಉದ್ದನೆಯ ಕಪ್ಪು ಕೂದಲು ಇದ್ದು, ಗುಲಾಬಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾಳೆ.
ಸದರಿ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಾರೂಗೇರಿ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಠಾಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.