Belagavi News In Kannada | News Belgaum

ಮಾರ್ಚ ೫ ರಂದು ಪ್ರಾಚರ‍್ಯ ಬಿ.ಎಸ್.ಗವಿಮಠ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆ

ಮಾರ್ಚ ೫ ರಂದು ಪ್ರಾಚರ‍್ಯ ಬಿ.ಎಸ್.ಗವಿಮಠ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆ
ರವಿವಾರ ೫ ಮಾರ್ಚ ೨೦೨೩ ರಂದು ಮುಂ. ೧೧ ಗಂಟೆಗೆ ಪ್ರಾ. ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆಯು ನೆಹರು ನಗರದ ನೂತನ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ನಿಡಸೋಸಿ ದುರದುಂಡೇಶ್ವರ ಶ್ರೀಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಹಾಗೂ ಬೆಳಗಾವಿ ಕಾರಂಜಿಮಠದ ಪೂಜ್ಯ
ಗುರುಸಿದ್ಧೇಶ್ವರ ಸ್ವಾಮಿಗಳು ವಹಿಸಲಿದ್ದು ಅಧ್ಯಕ್ಷತೆಯನ್ನು ಕೆ.ಎಲ್.ಇ. ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ. ಸೋಮಶೇಖರ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಾದೇಶಿಕ ಆಯುಕ್ತರಾದ ಮಹಾಂತೇಶ ಹಿರೇಮಠ ಅವರು ಆಗಮಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಡಾ. ಬಸವರಾಜ ಜಗಜಂಪಿ, ಡಾ. ಗುರುಪಾದ ಮರಿಗುದ್ದಿ ಅಗಮಿಸುತ್ತಿದ್ದಾರೆ. ಡಾ. ಎಚ್.ಬಿ.ರಾಜಶೇಖರ, ಡಾ. ಎಫ್.ವಿ. ಮಾನ್ವಿ, ಪ್ರೊ. ಎಂ.ಎಸ್. ಇಂಚಲ, ಸುಭಾಷÀ ಏಣಗಿ, ಡಾ. ಸರಜೂ ಕಾಟಕರ, ಅಶೋಕ ಚಂದರಗಿ, ಯ.ರು. ಪಾಟೀಲ,
ಡಾ. ಗುರುದೇವಿ ಹುಲೆಪ್ಪನವರಮಠ, ಡಾ. ಮಹೇಶ ಗುರನಗೌಡರ, ಶಿರೀಷ ಜೋಶಿ ಹಾಗೂ ಲೇಖಕಿಯರ ಸಂಘದ ಸರ್ವಸದಸ್ಯರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ರಂಗತಜ್ಞ ಡಾ. ರಾಮಕೃಷ್ಣ ಮರಾಠೆ ಹಾಗೂ ಮರುಳುಶಂಕರ ದೇವರು ಮಹಾಕಾದಂಬರಿ ರಚಿಸಿದ ಡಾ.ದಯಾನಂದ ನೂಲಿ, ಸಾಹಿತಿ ಬಸವರಾಜ ಗಾರ್ಗಿ ಅವರಿಗೆ ಪ್ರತಿಷ್ಠಾನದ ಪರವಾಗಿ ಸನ್ಮಾನಿಸಲಾಗುವುದು.
ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಎಲ್.ವಿ. ಪಾಟೀಲ ಹಾಗೂ ಕರ‍್ಯದರ್ಶಿ ಅಕಬರ ಸನದಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.