ಪೊಲೀಸರ ಸಖತ್ ಪ್ಲಾನ್ ಗೆ ಕಳೆದು ಹೋಗಿದ್ದ30 ಮೊಬೈಲ್‌ಗಳು ಪತ್ತೆ

ಹುಬ್ಬಳ್ಳಿ: ಸಾರ್ವಜನಿಕರ ಕಳೆದ ಹಾಗೂ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಪತ್ತೆ ಹಚ್ಚಲು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆರಂಭಿಸಿದ ಇ-ಪೋರ್ಟಲ್ ಎಂಬ ನೂತನ ಪ್ರಯೋಗದಿಂದ ವಾರದಲ್ಲಿ ಮೂರು ಲಕ್ಷ ರೂ. ಮೌಲ್ಯದ 30ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಬೈಲ್ ಕಳೆದವರು ಅನವಶ್ಯಕವಾಗಿ ಪೊಲೀಸ್ ಠಾಣೆಯ ಮಟ್ಟಿಲೇರಿ ದೂರ ನೀಡಬೇಕಿತ್ತು. ಇದರಿಂದ ಅವರ ಸಮಯ ವ್ಯರ್ಥವಾಗುತ್ತಿತ್ತು. ಪೊಲೀಸರ ಬೇರೆ ಕೆಲಸದ ಒತ್ತಡದಲ್ಲಿ ಯಾವುದೇ ಕಳೆದು ಹೋದ ಮೊಬೈಲ್‌ಗಳು ಸಿಗುತ್ತಿದಿಲ್ಲ. ಈ ನಿಟ್ಟಿನಲ್ಲಿ ಈಗ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವಿನೂತನ ಪ್ರಯೋಗದ ಮೂಲಕ ಮೊಬೈಲ್ ಕಾರ್ಯಾಚರಣೆ ನಡೆಸುತ್ತಿದೆ.
ಸದ್ಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಒಂದು ತಾಂತ್ರಿಕ ಕೊಠಡಿ ಆರಂಭಿಸಿದ್ದು, ಡಿಸಿಪಿ ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ನಾಲ್ಕು ಜನರು ತಂಡ ಕಾರ್ಯನಿರ್ವಹಿಸುತ್ತಿದೆ. 2022 ವರ್ಷದ ಇತ್ತಿಚೀನ ಕಳೆದು ಹೋದ ಮೊಬೈಲ್ ಪತ್ತೆ ಹಚ್ಚಲಾಗುತ್ತಿದೆ. ಮರಳಿ ಮೊಬೈಲ್ ನೀಡಿದ ಬಹುತೇಕರು ಬೇರೆಯವರಿಂದ ಮೊಬೈಲ್ ತೆಗೆದುಕೊಂಡವರಾಗಿದ್ದಾರೆ. ಪೊಲೀಸ್ ಸಿಬ್ಬಂದಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ವತಃ ಪೋಸ್ಟ್ ಮೂಲಕ ಕಚೇರಿಗೆ ಕಳಹಿಸಿಕೊಡುತ್ತಿದ್ದಾರೆ. ಆದರೆ ಮೊಬೈಲ್ ಕಳ್ಳತನ ಮಾಡುವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಸದ್ಯ ನಮ್ಮ ಆದ್ಯತೆ ಮೊಬೈಲ್ ಕಳೆದುಕೊಂಡವರಿಗೆ ಹುಡುಕಿ ಕೊಡುವುದಾಗಿದೆ ಎಂದು ಆಯುಕ್ತರು ತಿಳಿಸಿದರು.
ಒಟ್ಟಿನಲ್ಲಿ ನಗರ ಪೊಲೀಸರು ಇ-ಪೋರ್ಟ್‌ಲ್ ಆರಂಭಿಸಿದ್ದಾರೆ. ಅವರು ನೀಡಿದ ದೂರವಾಣಿ ಸಂಖ್ಯೆ ಮೊಬೈಲ್ ಕಳೆದುಕೊಂಡವರು ಹಾಯ್.. ಎಂದು ಸಂದೇಶ ಕಳುಹಿಸಿದರೆ ಅವರಿಗೆ ಮರಳಿ ಒಂದು ವೆಬ್‌ಸೈಟ್ ಲಿಂಕ್ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ವೆಬ್‌ಸೈಟ್ ಓಪನ್‌ಆಗಿ ಮೊಬೈಲ್ ಬಗ್ಗೆ ಮಾಹಿತಿಯ ಹಲವು ಪ್ರಶ್ನೆಗಳು ಬರುತ್ತವೆ. ಅಲ್ಲಿ ಎಲ್ಲದಕ್ಕೂ ಸೂಕ್ತವಾಗಿ ಉತ್ತರಿಸಬೇಕು. ಬಳಿಕ ಪೊಲೀಸರ ಈ ಮಾಹಿತಿಯ ಸಹಾಯದಿಂದ ಮೊಬೈಲ್ ಪತ್ತೆ ಹಚ್ಚಲು ಪ್ರಯತ್ನಿಸುತ್ತಾರೆ. ಮೊಬೈಲ್ ಸಿಕ್ಕರೆ ತಕ್ಷಣ ನಿಮ್ಮ ದೂರವಾಣಿಗೆ ಕರೆ ಮಾಡಿ ನೀಡುತ್ತಾರೆ.
ಸದ್ಯ ಧಾರವಾಡ-ಹುಬ್ಬಳ್ಳಿ ಪೊಲೀಸರು ಬರೋಬ್ಬರು ಮೂರು ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಪೋನ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನು ಮೊಬೈಲ್ ಖದೀಮರ ಪಾಲಾಯ್ತು ಎಂದು ಕೊಂಡಿದ್ದವರು ತಮ್ಮ ಮೊಬೈಲ್ ಮರಳಿ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ.//////