Belagavi News In Kannada | News Belgaum

ರಾಮಕೃಷ್ಣ ಮರಾಠೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಬೆಳಗಾವಿ, ಮಾ.5: 2022ನೇ ಸಾಲಿನ  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಬೆಳಗಾವಿಯ ಸಾಹಿತಿ ರಾಮಕೃಷ್ಣ ಮರಾಠೆ ಅವರಿಗೆ  ಹನುಮಾನ ನಗರದಲ್ಲಿರುವ ಅವರ ನಿವಾಸದಲ್ಲಿ ಭಾನವಾರ(ಮಾ.5) ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರಾಮಕೃಷ್ಣ ಮರಾಠೆ ಅವರಿಗೆ ಅನಿವಾರ್ಯ ಕಾರಣಗಳಿಂದಾಗಿ ರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಸರಕಾರದ‌ ಪರವಾಗಿ ಇಂದು ಅವರ ನಿವಾಸಕ್ಕೆ ಆಗಮಿಸಿ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಲಾಯಿತು.
ಶಾಸಕರಾದ ಅನಿಲ ಬೆನಕೆ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್, ಹುಕ್ಕೇರಿ ಮಠದ ಚಂದ್ರಶೇಖರ ಸ್ವಾಮೀಜಿಯವರು, ಹಿರಿಯ ಸಾಹಿತಿಗಳಾದ ಡಾ.ಸರಜೂ ಕಾಟ್ಕರ್, ಡಾ.ಎ‌.ಬಿ.ಘಾಟಗೆ , ಮರಾಠೆ ಅವರ ಧರ್ಮಪತ್ನಿ ಮೀರಾ ಮರಾಠೆ, ಡಾ. ಪಿ.ಜಿ.ಕೆಂಪಣ್ಣವರ, ರಂಗಾಯಣ ಧಾರವಾಡದ ಅಧ್ಯಕ್ಷರಾದ ರಮೇಶ ಪರವಿನಾಯ್ಕರ, ಕನ್ನಡ ಹೋರಾಟಗಾರ ಅನಂತಕುಮಾರ ಬ್ಯಾಕೂಡ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೆಶಕರಾದ ಅಶೋಕ ಚಲವಾದಿ, ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.