Belagavi News In Kannada | News Belgaum

ರಂಗು ರಂಗಿನ ಹೋಳಿ ಹಬ್ಬಕ್ಕೆ ಬೆಳಗಾವಿ ಸಜ್ಜು

 ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಹೋಳಿ ಹಬ್ಬದ ವಾತಾವರಣ ಕಳೆ ಕಟ್ಟಿದ್ದು, ಪರಸ್ಪರ ರಂಗು ಎರಚುತ್ತ ಕುಣಿದಾಡಲು ಯುವಪಡೆ ಸಜ್ಜಾಗಿದೆ.
ಮಾ. 7ರಂದು ಹೋಳಿ ಹಬ್ಬಆಚರಣೆಗೆ ಬೆಳಗಾವಿ ಸಜ್ಜಾಗಿದೆ. ಹಲಗೆ, ತಮಟೆ ಸದ್ದು ನಗರದಲ್ಲಿ ಅನುರಣಿಸುತ್ತಿದೆ. ಗ್ರಾಮೀಣ ಭಾಗದಲ್ಲಂತೂ ಇನ್ನೂ ವಿಶಿಷ್ಟವಾಗಿದೆ.ಚಳಿ ತೆರೆಗೆ ಸರಿದು ಬಿಸಿಲು ಚುರುಕುಗೊಳ್ಳುತ್ತಿದ್ದಂತೆಯೇ  ರತಿ-ಮನ್ಮಥರ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗಿದೆ. ಮುಂಬೈ ಕರ್ನಾಟಕ ಭಾಗದ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಹೋಳಿ ಹ್ಬದ ಆಚರಣೆಗೆ ಬೆಳಗಾವಿ ವಿಭಿನ್ನ ಹಾಗೂ ವಿಶಿಷ್ಟ್ಯ.

 

 

ಕಳೆಗಟ್ಟಲಿದೆ ಓಕುಳಿ ಆಟ: ಹೋಳಿಹಬ್ಬದ ದಿನ ಹಿರಿಯರು-ಕಿರಿಯರು, ಹೆಣ್ಣು ಗಂಡು ಎಂಬ ಭೇದವಿಲ್ಲದೇ ಎಲ್ಲರೂ ಬಣ್ಣದ ಓಕುಳಿ ಆಟದಲ್ಲಿ ಮೈ ಮರೆಯುವುದನ್ನು ಕಾಣಬಹುದಾಗಿದೆ. ಓಕುಳಿ ಆಟಕ್ಕೆ ನೃತ್ಯ, ಡಿಜೆ ಸಂಗೀತದ ಅಬ್ಬರ, ಗುಲಾಲ್ ಎರಚಾಟ, ಪಟಾಕಿಯ ಅಬ್ಬರ , ಸಿಹಿ ಹಂಚಿಕೆ ಕಳೆಗಟ್ಟಿದರೆ ಕೆಲವು ಭಾಗಗಳಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಬಣ್ಣದ ನೀರಿನ ಸಿಂಚನದ ನಡುವೆ ನೃತ್ಯದ ಸೊಬಗನ್ನು ನೋಡಬಹುದಾಗಿದೆ. ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ಆಯೋಜಿಸುವ ಹಬ್ಬದಲ್ಲಿ ಸಂಗೀತದ ಅಬ್ಬರ, ಬಣ್ಣಗಳ ಎರಚಾಟದ ನಡುವೆ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.
ಕಾಮಣ್ಣನ ಮಕ್ಕಳು ಏನೇನು ಕದ್ದರು ಕುಳ್ಳು ಕಟ್ಟಿಗೆ ಕದ್ದರೋ ! ಎಂದು ಕೂಗಿ ಬೊಬ್ಬೆ ಹೊಡೆಯುತ್ತ ರಂಗಿನಾಟ ಆಡುತ್ತಿದ್ದ ಕಾಲ ಈಗ ಬರ ಬರುತ್ತಾ ಮಾಯವಾಗುತ್ತಿದೆ. ರಣಹಲಗೆ, ಹಲಗೆಯ ನಾದವೀಗ ಮೂಲೆ ಗುಂಪಾಗಿ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಡ್ರಮ್ ಸೆಟ್ ಡಿಜೆ ಸೆಟ್‌ಗಳನ್ನೇ ಬಾರಿಸಿ ನಾಮಕಾವಾಸ್ತೆ ಹೋಳಿ ಹಬ್ಬವನ್ನಾಚರಿಸುವ ಪದ್ಧತಿ ಆರಂಭಗೊಂಡಿದೆ. ಕತ್ತಲಾಗುತ್ತಿದ್ದಂತೆ ಆರಂಭವಾಗುತ್ತಿದ್ದ ಹಲಗೆಯ ಶಬ್ದಕ್ಕೆ ಹೋಳಿ ಹಬ್ಬ ಬಂತು ಎಂದು ಕೈಯಲ್ಲಿದ್ದ ಪೆನ್ನು ಪುಸ್ತಕಗಳನ್ನು ಬ್ಯಾಗಿಗೆ ತುರುಕಿ ಹಲಗೆಯ ನಾದಕ್ಕೆ ಕುಣಿದು ನಾವು ಖುಷಿ ಪಡುತ್ತಿದ್ದ ಸಂದರ್ಭ ಈಗಿಲ್ಲ. ಸಾಮಾನ್ಯವಾಗಿ ಪರೀಕ್ಷೆಯ ಸಮಯದಲ್ಲೇ ಬರುವ ಹೋಳಿ ಹಬ್ಬದಲ್ಲಿ ಓದು ಓದು ಎನ್ನುವ ತಾಯಂದಿರ ಕಿರಿಕಿರಿಯನ್ನು ಮೀರಿ ರಾತ್ರಿಯೆಲ್ಲ ಗುಂಪಾಗಿ ಬೊಬ್ಬೆ ಹಾಕುವ ಹುಡುಗರು ಆಚರಣೆ ಈಗೇನಿದ್ದರೂ ಬರಿ ನೆನಪು ಮಾತ್ರ.

ಹಳ್ಳಿಗಳಲ್ಲಿ ಹೇಗೆ?: ಗ್ರಾಮೀಣ ಪ್ರದೇಶದಲ್ಲಿ ಮುಂಗಾರು-ಹಿಂಗಾರು ಪೈರುಗಳು ಕಟಾವಿಗೆ ಬರುವ ಹೊತ್ತಿನಲ್ಲಿ ಬರುವ ಹೋಳಿ ಹ್ಣುಮೆಯ ಒಂದು ವಿಶೇಷ ಹಬ್ಬವಾಗಿದೆ.ಹೋಳಿ ಹ್ಣುಮೆ ಬಂತೆಂದರೆ ಗ್ರಾಮದ ಪ್ರತಿ ಮನೆ ಎದುರು ಕಾಂಣ್ಣ ಗುಂಡಿ ತೋಡುತ್ತಾರೆ. ಆ ಗುಂಡಿ ಸುತ್ತ ಸಾರಿಸಿ ಸುಣ್ಣ ಕ್ಯಾವಿಗಳ ಪಟ್ಟಿ ಎಳೆಯುತ್ತಾರೆ. ಅದರ ತಳಭಾಗದಲ್ಲಿ ಬೆಣಚುಗಲ್ಲು ಇಟ್ಟು ಬೆನಕನೆಂದು ಪೂಜಿಸುವ ಪದ್ಧತಿ ಇದೆ.ಕಾಮದಹನದ ಬೆಂಕಿ ತಂದು ಕಾಂಣ್ಣ ಗುಡಿಯಲ್ಲಿರಿಸಿ ನೈವೇದ್ಯ ಮಾಡಿ ಬಾಯಿ ಬಾಯಿ ಬಡಿದುಕೊಳ್ಳುತ್ತ ಗುಂಡಿಯನ್ನು ಮಣ್ಣಿನಿಂದ ಮುಚ್ಚುತ್ತಾರೆ.
ರಂಗಪಂಚಮಿಯ ಮಜಾ ಕಳೆದುಹೋಗಲು ಹಲವಾರು ವಿಷಯಗಳಿದ್ದು ಅವುಗಳಲ್ಲಿ ಪ್ರಮುಖ ಪರೀಕ್ಷೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದೊಂದು ಅಂಕಕ್ಕಾಗಿ ಪರಿತಪಿಸುವ ವಿದ್ಯಾರ್ಥಿಗಳು ಹಬ್ಬದಿಂದ ದೂರ ಉಳಿಯುತ್ತಿದ್ದಾರೆ. ಸುಗ್ಗಿ ಮುಗಿದ ನಂತರ ಬರುವ ಮೊದಲ ಹಬ್ಬ ಈ ಹೋಳಿ ಹ್ಣುಮೆ. ವರ್ಷವಿಡೀ ದುಡಿದ ಜೀವಗಳು ಫಸಲಿನ ಪ್ರತಿಫಲ ಕಂಡು ಸಿಹಿ ಉ್ಣಸೋ ಸುದಿನವಿದು.

ಜನಪದಹಿನ್ನೆಲೆ: ಜನಪದ ಕಥೆ ಪ್ರಕಾರ ಪ್ರೇಮಮಯರಾದ ಕಾಂ ರತಿಯರು ಕಾಲ ವೇಳೆ ನೋಡದೇ ಪ್ರೇಮಾಲಾಪದಲ್ಲಿ ಮುಳುಗಿದ್ದಾರೆ. ಒಮ್ಮೆ ಒಬ್ಬ ಋಷಿ ಇವರ ಅಕಾಲ ಸಂಯೋಗ ಕಂಡು ಕೆರಳಿ ಶಾಪಕೊಟ್ಟ ಪರಿಣಾಮ ಕಾಮ ಭೂಲೋಕದ ಒಬ್ಬ ಬ್ರಾಹ್ಮಣ ಕುಮಾರನಾಗಿ ರತಿ ಕನ್ಯೆಯಾಗಿ ಜನಿಸಿದಳು. ಒಂದು ದಿನ ರಸ್ತೆಯಲ್ಲಿ ಕಸಗುಡಿಸುತ್ತಿರುವ ರತಿಯನ್ನು ಕಂಡು ಕಾಮ ಪೂರ್ವಜನ್ಮ ಸಂಸ್ಕಾರದಿಂದ ಅನುರಕ್ತನಾದ. ತಂದೆ ಪ್ರತಿಭಟಿಸಿದಾ ಮನೆ  ಬಿಟ್ಟು ಅವಳ ಮನೆಯಲ್ಲಿಯೇ ವಾಸ ಮಾಡಿದ. ಅಲ್ಲಿ ನಿತ್ಯ ಏಕಾದಶಿ. ಹಸಿವಿನ ವೇದನೆ ಯಡೆಯಲಾರದೆ ಕಾಮ ಅವಳ ಮನೆಯಲ್ಲೇ ಸತ್ತ. ಅವನ ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಕೊಳ್ಳಲುವ ಸ್ಥಿತಿ ಇರಲಿಲ್ಲ. ಆಗ ಕಾಮನ ಗೆಳೆಯರು ಕಟ್ಟಿಗೆ ಬೆರಣಿ ಸೇರಿಸಿ ರತಿಯ ಮನೆಯ ಬೆಂಕಿ ತಂದು ಅಗ್ನಿ ಸಂಸ್ಕಾರ ಮಾಡಿದರೆಂಬ ಜನಪದ ಕಥೆಯಿದೆ.
ಮದ್ಯ ಮಾರಾಟ ನಿಷೇಧ: ಬೆಳಗಾವಿ ಜಿಲ್ಲೆಯಲ್ಲಿ ಮಾ. 7 ರಂದು ರಾತ್ರಿ ಕಾಮದಹನ ಹಾಗೂ ಮಾ. 8 ರಂದು ಹೋಳಿ ಹಬ್ಬದ ಅಚರಣೆ ನಿಮಿತ್ತ ಬೆಳಗಾವಿ ನಗರ ಮತ್ತು ಬೆಳಗಾವಿ ತಾಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ ಅವರು ಆದೇಶ ಹೊರಡಿಸಿದ್ದಾರೆ.