Belagavi News In Kannada | News Belgaum

ಮಕ್ಕಳಿಗೆ ಅದ್ಯಯನಶೀಲರಾಗಲು ಸುಸಜ್ಜಿತ ಗ್ರಂಥಾಲಯಗಳು ನೆರವಾಗುತ್ತವೆ ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ ಹೇಳಿದರು.

ಹುಕ್ಕೇರಿ: ಮಕ್ಕಳಿಗೆ ಅದ್ಯಯನಶೀಲರಾಗಲು ಸುಸಜ್ಜಿತ ಗ್ರಂಥಾಲಯಗಳು ನೆರವಾಗುತ್ತವೆ ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಿಖಿಲ್ ಕತ್ತಿ ಹೇಳಿದರು.


ಅವರು ತಾಲೂಕಿನ ಬೆಳವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆಶ್ರಯದಲ್ಲಿ ನಿರ್ಮಿಸಿದ ನೂತನ ಡಿಜಿಟಲ್‌ ಗ್ರಂಥಾಲಯದ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದರು. ಇಂದು ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರುವದು.ಕಳವಕರ ಸಂಗತಿ.ಹಿರಿಯರು ಮಕ್ಕಳಿಗೆ ಗ್ರಂಥಾಲಯದ ಕಡೆ ರೂಡಿ ಮಾಡಿಸುವದು ಜವಾಬ್ದಾರಿ, ಪ್ರತಿಗ್ರಾಮಗಳಲ್ಲಿ ಗ್ರಂಥಾಲಯಗಳು ಉತ್ತಮ ಪರಿಸರದಲ್ಲಿ ನಿರ್ಮಾಣವಾಗಬೇಕು ಎಂದರು.
ತಾಲುಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮಾತನಾಡಿ ತಾಲೂಕಿನ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳಿಗೆ ತಾಲೂಕಾ ಪಂಚಾಯತಿಯಿಂದ ಸಾವಿರ ಪುಸ್ತಕಗಳನ್ನು ನೀಡಿ ಹೈಟೆಕ್ ಸ್ಪರ್ಶನೀಡಲಾಗಿದೆ ಎಂದರು
ತಾಲುಕಾ ಪಂಚಾಯತಿ ಮಾಜಿ ಅಧ್ಯಕ್ಷ ಸತ್ಯಪ್ಪಾ ನಾಯಿಕ ಮಾತನಾಡಿ ಗ್ರಂಥಾಲಯದ ಜೊತೆಗೆ ಗ್ರಾಮದಲ್ಲಿ ಜಲಜೀವನ ಕುಡಿಯುವ ನೀರಿನ ಕಾಮಗಾರಿ ಗೆ ಚಾಲನೆ ನೀಡಲಾಗಿದೆ.ಪ್ರತಿ ಮನೆ ಮನೆಗೆ ನಳ ಜೋಡಣೆಯಾಗಲಿದೆ.ಎಂದರು.
ಪಿಕಾರ್ಡ ಬ್ಯಾಂಕಿನ ನಿರ್ದೇಶಕ ರಮೇಶ ಕುಲಕರ್ಣಿ ಮಾತನಾಡಿ ಕಳೆದ ಎರಡು ವರ್ಷಗಳಲ್ಲಿ ಶಾಸಕ ದಿ ಉಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಬೆಳವಿ ಗ್ರಾಮದಲ್ಲಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಂದರು.
ಪಿಡಿಓ ಶೀಲಾ ತಳವಾರ ಗ್ರಾಮ ಪಂಚಾಯತಿಯಿಂದ ನರೇಗಾದಡಿ ವಿವಿಧ ಅಭಿವೃದ್ಧಿ ಪೂರಕವಾದ ಕೆಲಸಗಳು ನಡೆಯುತ್ತಿವೆಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಜಯಶ್ರೀ ಸತ್ಯಾಯಿಗೋಳ, ಉಪಾಧ್ಯಕ್ಷ ಶೋಭಾ ಮಗದುಮ್ಮ ಸದಸ್ಯ ರಾದ ,ಚನಮಲ್ಲ ನಾಯಿಕ, ವಿಠಲ ಅವುಬಾಯಿಗೋಳ,ಶೋಭಾ ಘಸ್ಸ್ತಿ,ಪಾರ್ವತಿ ಚಿಕ್ಕಣಗಿ,ಜಯಶ್ರೀ ಪಾಟೀಲ. ನಜೀರ ಮುಲ್ತಾನಿ, ಹಿರಾಶುಗರ ನಿರ್ದೇಶಕರಾದ ಅಶೊಕ ಪಟ್ಟಣಶೆಟ್ಟಿ, ಬಸವರಾಜ ಮರಡಿ,ಸುರೇಶ ದೊಡಲಿಂಗನ್ನವರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಬಾಳಾಸಾಹೇಬ ನಾಯಿಕ,ಗೋಪಾಲ ಕುಲಕರ್ಣಿ,ಅಜೀತ ನಾಯಿಕ,ಬಿ.ಎಲ್ ನಾಯಿಕ,ಬಾಬು ನಾಗನೂರಿ. ಪುಂಡಲೀಕ ಪಾಟೀಲ,ತಾ.ಪಂ ಮಾಜಿ ಸದಸ್ಯ ಅಶೋಕ ಘಸ್ತಿ,ಬಾಪು ಚಿಕ್ಕಣಗಿ,ಗೋಪಾಲ ಮಗದುಮ್ಮ,ಸುಭಾಷ ಘಸ್ತಿ,,ಗ್ರಂಥಾಲಯ ಮೇಲ್ವಿಚಾರಕ ನಾಗಪ್ಪ ಅವುಬಾಯಿಗೋಳ,ರಮಜಾನ ಮಕಾನದಾರ, ಭರತೇಶ ನಾಯಿಕ,ಭೀಮಪ್ಪ ಖೇಮಾಳಿ ಮತ್ತಿತರರು. ಉಪಸ್ಥಿತರಿದ್ದರು.