Belagavi News In Kannada | News Belgaum

ತಳಸಮುದಾಯಗಳ ಕಲೆ‌ ಮುನ್ನೆಲೆಗೆ ತರಬೇಕು : ಜಿಪಂ ಸಿಇಓ ಹರ್ಷಲ್ ಭೋಯರ್

ಬೆಳಗಾವಿ : “ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಮಹತ್ವದ ಕಾರ್ಯ ಆರಂಭಿಸಿದೆ. ನಶಿಸಿ ಹೋಗುತ್ತಿರುವ ತಳಸಮುದಾಯಗಳ ಕಲೆ, ಸಂಸ್ಕೃತಿ ಅಭಿವೃದ್ಧಿಯಾಗಬೇಕು. ಅನೇಕ  ತಳ ಸಮುದಾಗಳ ಕಲೆಗಳು ಮುನ್ನಲೆಗೆ ಬರಬೇಕು ಮತ್ತು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಎಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗಬೇಕು” ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಹರ್ಷಲ್ ಭೋಯರ್ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ (ಮಾ.06) ಏರ್ಪಡಿಸಲಾಗಿದ್ದ ನಶಿಸಿ ಹೋಗುತ್ತಿರುವ ತಳ ಸಮುದಾಯಗಳನ್ನು ಮುನ್ನೆಲೆಗೆ ತರಲು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತರಬೇತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ತಂಡಗಳಿಗೆ ಶುಭ ಕೋರಿದ ಅವರು, ಹೀಗೇ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗೋಣ.  ಇಂತಹ ಇನ್ನೂ ಅನೇಕ ಗ್ರಾಮೀಣ ಕಲೆಗಳು ಬೆಳಕಿಗೆ ಬರಬೇಕು ಅವುಗಳು ನಮ್ಮ ನಾಡಿನ ಕಲೆ-ಸಂಸ್ಕೃತಿಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಬಿಂಬಿಸಬೇಕು ಎಂದರು.

ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಉತ್ತಮ ತರಬೇತಿ ನೀಡಿದೆ. ಇದರಿಂದ ಕಲಾವಿದರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕೊಂಡಾಡುವಂತಾಗಬೇಕು. ನಮ್ಮ ಕಲೆ, ಸಂಸ್ಕೃತಿ ದೇಶಕ್ಕೆ ತಲುಪುವಂತಾಗಬೇಕು ಎಂದು ಹೇಳಿದ ತರಬೇತಿದರಾದ ಗೂಳಪ್ಪ ವಿಜಯನಗರ ಅವರು, ಇದಕ್ಕೆ ಸರಕಾರ 2 ಲಕ್ಷ ರೂ ಅನುದಾನ ಕೊಡಬೇಕು ಎಂದು ಅವರು ಹೇಳಿದರು.

ನಶಿಸಿ ಹೋಗುತ್ತಿರುವ ವಿಶಿಷ್ಟ ಕಲೆಗಳ ತರಬೇತಿಯಲ್ಲಿ 5 ತಂಡಗಳು ಭಾಗವಹಿಸಿದ್ದು, ಅವುಗಳಲ್ಲಿ ಎರಡು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತವೆ.

ಭಾಗವಹಿಸಿದ ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದು, ಸೋಲು-ಗೆಲುವು ಸಹಜ. ಮುಂದೆಯು ಕೂಡಾ  ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ತರಬೇತಿ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಮಂಜುನಾಥ್ ಪಮ್ಮಾರ ಅವರು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ, ಜಿನೇಶ್ವರ ಪಡನಾಡ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಕೆಂಪವ್ವ ಸೊಂಟನವರ, ವಾಸುದೇವ ರಾಠೋಡ, ಶಿವನಪ್ಪ ಚಂದರಗಿ ಮೈಲಾರಪ್ಪ ಮಾದರ ಕರೆಪ್ಪ ಜಿನ್ನವಗೋಳ ಮುಂತಾದವರು ಉಪಸ್ಥಿತರಿದ್ದರು.//////