Belagavi News In Kannada | News Belgaum

ಸಮಾಜಮುಖಿ ಮಾತೋಶ್ರೀ ಸುಕನ್ಯಾ ಹಿರೇಮಠ! ಮಾರ್ಚ್ 08 ಮಹಿಳಾ ದಿನ

ಸಮಾಜಮುಖಿ ಮಾತೋಶ್ರೀ ಸುಕನ್ಯಾ ಹಿರೇಮಠ! ಮಾರ್ಚ್ 08 ಮಹಿಳಾ ದಿನ

ಶ್ರೀಮತಿ ಸುಕನ್ಯಾ ಬಸಲಿಂಗಯ್ಯ ಹಿರೇಮಠ ಅಪರೂಪದ ಸಮಾಜಮುಖಿ ಶರಣಜೀವಿ. ಅವರ ಸಮಾಜಮುಖಿಯ ಸೇವೆ ನಮಗೆ ಅಭಿಮಾನವನ್ನು ಉಂಟುಮಾಡುತ್ತದೆ. ಧನ್ಯತೆಯ ಭಾವ ವ್ಯಕ್ತವಾಗುತ್ತದೆ.
ಸಮಾಜಸೇವೆ, ಧಾರ್ಮಿಕತ್ವದ ಮೂಲಕ ತಮ್ಮದೆಯಾದಂತ ಮಹೋನ್ನತ ಛಾಪು ಮೂಡಿಸಿ ಎಲ್ಲರನ್ನು ಅಪ್ಪಿ-ಒಪ್ಪಿಕೊಳ್ಳುವ ಮಾತೋಶ್ರೀ ಸುಕನ್ಯ ಹಿರೇಮಠ ಸಾಹಸಿಗರು. ಇಂತಹದ್ದೊಂದು ಸಾಹಸಿಗರಿಗೆ ಹೆಗಲಿಗೆ ಹೆಗಲಾದವರು ಪತಿ ಬಸಲಿಂಗಯ್ಯ ಹಿರೇಮಠ. ಅನೇಕರಿಗೆ ನೆರವಾದವರು, ಪ್ರೀತಿಗೆ ಭಾಜನರಾದಂತವರು. ಗುರುವರ್ಯರಲ್ಲಿ, ಮಹಾತ್ಮರಲ್ಲಿ ಭಕ್ತಿಯಿಂದ ನಡೆಯುತ್ತಿರುವ
ಹಿರೇಮಠ ದಂಪತಿ. ಅವರ ಸಮಾಜಮುಖಿ ಸಂಘಟನೆ, ಹೋರಾಟದ ತುಂಬೆಲ್ಲಾ ಎದ್ದು ಕಾಣುವದು ಗುರು. ಅಷ್ಟರ ಮಟ್ಟಿಗೆ ಅವರ ಧರ್ಮದ ಸೇವೆಯಿದೆ.
ಚಿಕ್ಕವಯಸ್ಸಿನವರಾಗಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡರು. ಅತ್ಯಲ್ಪ ಸಮಯದಲ್ಲಿ ಅಪಾರ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ.
ಮೂಲತ: ಗದಗ ಜಿಲ್ಲೆಯವರು. ಸುಸಂಸ್ಕೃತ ಮನೆತನದಲ್ಲಿ ಜನಿಸಿದವರು. ಒಳ್ಳೆಯ ಕೆಲಸ ಮಾಡಬೇಕು, ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ನನ್ನ ಕೈಲಾದಷ್ಟು ಒಳ್ಳೆಯದು ಮಾಡಬೇಕು ಎಂದು ಸುಕನ್ಯಾ ಅವರು ಸಮಾಜಸೇವೆಯಲ್ಲಿ ಗುರುತಿಸಿಕೊಂಡರು.
ಸುಕನ್ಯಾ ಹಿರೇಮಠರದ್ದು ಸಮಾಜಮುಖಿಯಾದಂತಹ ಬಹುದೊಡ್ಡ ವ್ಯಕ್ತಿತ್ವ. ಸುಸ್ವಭಾವದ ಸುಸಂಸ್ಕ್ರತ ಮನಸ್ಸಿನ ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ. ಸೇವಾ ಮನೋಭಾವ ಮೃದು ಮಧುರ ನುಡಿ, ಸ್ನೇಹಭಾವ, ಕ್ರಿಯಾಶೀಲತೆ ಪ್ರಯತ್ನಶೀಲತೆ ಇವರ ವ್ಯಕ್ತಿತ್ವದ ವಿಶೇಷತೆಗಳು. ಧರ್ಮ ಹಾಗೂ ಸಮಾಜಮುಖಿ ಅವರ ವಿಶಿಷ್ಠಗುಣ. ಸಮಾಜದಲ್ಲಿ ಕಾಯಕ ಪರಿಣಾಮಗಳಾಗಿ ಸಮಾಜದ ಸ್ವಾಸ್ಥಕ್ಕೆ ದುಡಿಯಬಲ್ಲ ಜನಪರ ಕಾಳಜಿಯು ಅವರಲ್ಲಿದೆ. ವೈಚಾರಿಕ ನೆಲೆಯಲ್ಲಿ ಎಳೆಯ ವಯಸ್ಸಿನಿಂದಲೂ ಗಮನಾರ್ಹ ಕೊಡುಗೆಗಳನ್ನು ಕೊಡುತ್ತ ಬರುತಿದ್ದಾರೆ. ಸಮಾಜದ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವುಗಳಿಗೆ ಉತ್ತಮ ನೆಲೆಯನ್ನು ಒದಗಿಸಿಕೊಡಲು ಅವಿರತ ಶ್ರಮಿಸುತಿದ್ದಾರೆ.
ತಾಯಿಯು ಕೇವಲ ತನ್ನ ಮಕ್ಕಳಿಗೆ ಜನ್ಮ ನೀಡುವುದಲ್ಲ, ಅವರ ಮನಸ್ಸು, ಅವರ ವ್ಯಕ್ತಿತ್ವ ಮತ್ತು ಅವರ ಆತ್ಮವಿಶ್ವಾಸವನ್ನು ರೂಪಿಸುತ್ತಾಳೆ. ಆದ್ದರಿಂದ, ತಾಯಂದಿರು ನಿಸ್ವಾರ್ಥವಾಗಿ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ತ್ಯಾಗ ಮಾಡುತ್ತಾರೆ. ಹಾಗೇ ಬಾಳ ಬಾಳುತ್ತಿರುವ ಸುಕನ್ಯಾ ರವರು ಪತಿ ಡಾ. ಬಸಲಿಂಗಯ್ಯರ ಪ್ರತಿ ಕಾಯಕದಲ್ಲೂ ಜತೆ ಇದ್ದಾರೆ. ಸುಕನ್ಯಾ ಅನಾಥಾಶ್ರಮ ಮತ್ತು ವೃದ್ಧಾಶ್ರಮವೊಂದು ಅಥಣಿಯ ಭರಮಖೋಡಿಯಲ್ಲಿ ತಲೆಎತ್ತಿದೆ. ನೊಂದವರ ಧ್ವನಿಯಾಗಿ ಅದು ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ.
ಸಮಾಜ ಸೇವಾ ಕಾರ್ಯವನ್ನು ತನ್ನ ಅವಿಭಾಜ್ಯ ಅಂಗವೆಂದೇ ತಿಳಿದು ಮುನ್ನಡೆ ಹೆಜ್ಜೆಯನಿಟ್ಟು ಬೆಳೆಯುತ್ತಿರುವ ಪ್ರತಿಭಾನ್ವಿತರು. ಸಂಘಶಕ್ತಿ ದೈವ ಶಕ್ತಿಯನ್ನು ಮೀರಿಸಬಹುದು. ಸಂಘಟನೆಯ ಹಿಂದೆ ಸಹಕಾರವಿದೆ. ಸಹಕಾರ ಮತ್ತು ಸಮೃದ್ಧಿ ತತ್ವವನ್ನು ಬಹುವಾಗಿ ತಿಳಿದುಕೊಂಡಿದ್ದಾರೆ. ಪ್ರಾಮಾಣಿಕತೆ, ವಿಶ್ವಾಸ, ನಿಸ್ವಾರ್ಥ ದುಡಿಮೆ ಅವರನ್ನು ಗುರುತಿಸುವಂತೆ ಮಾಡುತ್ತಿದೆ. ಅಂತೆಯೇ ಅವರ ಸಂಘಟನೆಯ ಸೇವೆಗೆ ಸಂದ ಗೌರವ ಆದರಗಳು ಅನೇಕ. ಹಾಗೇ ಅವರನ್ನು ಎತ್ತರಕ್ಕೆ ಎರಿಸುತ್ತಿದೆ.
ಆ ನಿಟ್ಟಿನಲ್ಲಿ ಮಾತೋಶ್ರೀ ಸುಕನ್ಯ ಹಿರೇಮಠ ಅವರಿಗೆ ಅನೇಕ ಗೌರವ ಸನ್ಮಾನಗಳು ಸಿಗಲಿ, ಸಂಘಟನೆ, ಸಹಕಾರ, ಹೋರಾಟದ ಮೂಲಕ ನೊಂದವರ, ಬೆಂದವರ ಗಟ್ಟಿ ದ್ವನಿಯಾಗಿ ನಿಲ್ಲಲಿ ಎಂಬ ಬಯಕೆ.

ಸಂಘಶಕ್ತಿ ದೈವ ಶಕ್ತಿಯನ್ನು ಮೀರಿಸಬಹುದು. ಸಂಘಟನೆಯ ಹಿಂದೆ ಸಹಕಾರವಿದೆ. ಸಹಕಾರ ಮತ್ತು ಸಮೃದ್ಧಿ ತತ್ವವನ್ನು ಬಹುವಾಗಿ ತಿಳಿದುಕೊಂಡಿದ್ದಾರೆ. ಪ್ರಾಮಾಣಿಕತೆ, ವಿಶ್ವಾಸ, ನಿಸ್ವಾರ್ಥ ದುಡಿಮೆ ಮಾತೋಶ್ರೀ ಸುಕನ್ಯ ಅವರನ್ನು ಗುರುತಿಸುವಂತೆ ಮಾಡುತ್ತಿದೆ.