Belagavi News In Kannada | News Belgaum

ಕೋಲ್ಹಾಪುರ-ಬೆಳಗಾವಿ ತಡೆರಹಿತ ಹೆಚ್ಚಿನ ಸಾರಿಗೆ ಸೌಲಭ್ಯ :ಪ್ರಕಟಣೆ

ಕೋಲ್ಹಾಪುರ-ಬೆಳಗಾವಿ ತಡೆರಹಿತ ಹೆಚ್ಚಿನ ಸಾರಿಗೆ ಸೌಲಭ್ಯ

ಬೆಳಗಾವಿ, ಮಾ.08: ಚಿಕ್ಕೋಡಿ ಹಾಗೂ ಬೆಳಗಾವಿ ವಿಭಾಗಗಳಿಂದ, ಕೋಲ್ಹಾಪುರ ಬೆಳಗಾವಿ ಮಾರ್ಗದಲ್ಲಿ ಮಾ.09 ರಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6.30 ರವರೆಗೆ ಪ್ರತಿ ಅರ್ಧ ಗಂಟೆಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲಾಗಿದೆ.

ಅಂತರ ರಾಜ್ಯದ ಜಿಲ್ಲಾ ಸ್ಥಳಕ್ಕೆ ನೇರವಾಗಿ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ತಡೆರಹಿತ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರು ತಡೆರಹಿತ ಸಾರಿಗೆಗಳ ಪ್ರಯೋಜನ ಪಡೆಯಬಹುದು ಎಂದು ಚಿಕ್ಕೋಡಿ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ವಿಕಲಚೇತ ಕ್ರೀಡಾಪಟುಗಳಿಗೆ ಸನ್ಮಾನ

 

ಬೆಳಗಾವಿ, ಮಾ.08 : ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘದ 3 ನೇ ವಾರ್ಷಿಕೋತ್ಸವದ ಅಂಗವಾಗಿ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಧನೆಗೈದ ವಿಕಲಚೇತನರ ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಗುರುವಾರ (ಮಾ.9) ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಾದೇಶಿಕ ಆಯುಕ್ತರಾದ ಎಂ.ಜಿ ಹಿರೇಮಠ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿಗಳಾದ ನಿತೇಶ ಪಾಟೀಲ ಅವರು ಗೌರವಾನ್ವಿತ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಬೆಳಗಾವಿಯ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘದ ಅಧ್ಯಕ್ಷರಾದ ಮಹಾಂತೇಶ ಹೊಂಗಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಬೋಯಲ್ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಮನೀಷಾ ಹೊಂಗಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ : ವಿವಿಧ ಕ್ರೀಡಾ ಸ್ಪರ್ಧೆಗಳು

 

ಬೆಳಗಾವಿ, ಮಾ.08: ಚಿಕ್ಕೋಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕತಣ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ. 14, 2023 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ವಿವಿಧ ಕ್ರೀಡಾ ಸ್ಪರ್ಧೆಗಳು:

ಕಬಡ್ಡಿ (ಗುಂಪು), ಖೋಖೋ (ಗುಂಪು), ವಾಲಿಬಾಲ್ (ಗುಂಪು), ಥ್ರೋಬಾಲ್ (ಗುಂಪು), 100ಮೀ ಓಟ, ಶಾಟ್‍ಪುಟ್, ಡಿಸ್ಕಸ್‍ಥೋ, 100ಮೀ ಓಟ, ಶಾಟ್‍ಪುಟ್, ಡಿಸ್ಕಸ್‍ಥೋ, ಹಗ್ಗ ಜಗ್ಗಾಟ (ಗುಂಪು), ಗೋಣಿಚೀಲ ಓಟ, ನಿಂಬು ಚಮಚ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ನಡೆಯಲಿವೆ.
ಆಸಕ್ತ ಮಹಿಳೆಯರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಪ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ. 0831-2950306 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ: ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ಮಾರ್ಚ್ 12. ರಂದು

 

ಬೆಳಗಾವಿ, ಮಾ.08 : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಉಪಕುಲಸಚಿವರು, ಸಹಾಯಕ ಕುಲಸಚಿವರು ಮತ್ತು ಕಚೇರಿ ಅಧೀಕ್ಷಕರ ಬೋಧಕೇತರ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಮಾರ್ಚ್ 12.2023 ರಂದು ಬೆಳಗಾವಿಯ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 10 ರಿಂದ 11:30 ಗಂಟೆಗೆ ಹಾಗೂ ಮಧ್ಯಾಹ್ನ 12 ರಿಂದ 1.30 ರವರೆಗೆ ಎರಡು ಅವಧಿಗಳ ಪರೀಕ್ಷೆಗಳನ್ನು ನಡೆಸಲಾಗುವುದು.
ಸದರಿ ದಿನದಂದು ಅರ್ಹ ಅಭ್ಯರ್ಥಿಗಳು ಹಾಜರಿರಲು ಸೂಚಿಸಲಾಗಿದೆ, ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳ ಪಟ್ಟಿ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್ ಸೈಟ್ ತಿತಿತಿ.ಡಿಛಿub.ಚಿಛಿ.iಟಿ ಅನ್ನು ಪರೀಕ್ಷಿಸಬಹುದು ಎಂದು ಕುಲಸಚಿವರಾದ ರಾಜೇಶ್ರೀ ಜೈನಾಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ , ಎಸ್.ಪಿ. ಭೇಟಿ: ಮೂಲಸೌಕರ್ಯ ಪರಿಶೀಲನೆ

ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸಲು ಸೂಚನೆ

ಬೆಳಗಾವಿ, ಮಾ.08 : ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಕನಿಷ್ಟ ಮೂಲಸೌಕರ್ಯವನ್ನು ಖಚಿತಪಡಿಸುವುದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರಿಂದಿಗೆ ಬುಧವಾರ (ಮಾ.8) ವಿವಿಧ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡಿ, ಮೂಲಸೌಕರ್ಯ ಪರಿಶೀಲಿಸಿದರು.

ಯರಗಟ್ಟಿ, ಕೌಜಲಗಿ, ಮೂಡಲಗಿ, ಘಟಪ್ರಭಾ, ಶಿಂಧಿಕುರಬೇಟ, ಗೋಕಾಕ, ಬೆಲ್ಲದ ಬಾಗೇವಾಡಿ, ಉಳ್ಳಾಗಡ್ಡಿ ಖಾನಾಪುರ ಮತ್ತಿತರ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿದರು.

ಮತಗಟ್ಟೆಗಳಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿ ಜತೆ ಚರ್ಚೆ ನಡೆಸಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯವನ್ನು ಕಡ್ಡಾಯವಾಗಿ ಒದಗಿಸಬೇಕು.

ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಬೇಕು. ಇದಲ್ಲದೇ ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು. ವಿಕಲಚೇತನ ಮತದಾರರಿಗೆ ಅನುಕೂಲವಾಗುವಂತೆ ರ್ಯಾಂಪ್, ಗಾಲಿ ಕುರ್ಚಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇದೇ ಸಂದರ್ಭದಲ್ಲಿ ಭದ್ರತೆ ಮತ್ತು ಪೆÇಲೀಸ್ ಸಿಬ್ಬಂದಿ ನಿಯೋಜನೆ ಕುರಿತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಪರಿಶೀಲಿಸಿದರು.
ಸ್ಥಳೀಯ ತಹಶೀಲ್ದಾರರು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.////

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಯ ನಾಲ್ಕನೇ ತ್ರೈಮಾಸಿಕ ಸಭೆ

 

ಬೆಳಗಾವಿ, ಮಾ.08: 2022-23 ನೇ ಸಾಲಿನ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ನಾಲ್ಕನೇ ತ್ರೈಮಾಸಿಕ ಸಭೆಯು ಮಾರ್ಚ.3 2023 ರಂದು ಮುಂಜಾನೆ 11 ಗಂಟೆಗೆ ಬೆಳಗಾವಿಯ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಲೋಕಸಭಾ ಸದಸ್ಯರಾದ ಮಂಗಲ ಸುರೇಶ ಅಂಗಡಿ ಹಾಗೂ ಬೆಳಗಾವಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಯುಗಾದಿ ಮಹೋತ್ಸವ: ಶ್ರೀ ಸ್ವಾಮಿಯವರ ಸ್ಪರ್ಶ ದರ್ಶನ ಸ್ಥಗಿತ

 

ಬೆಳಗಾವಿ, ಮಾ.08: ಶ್ರೀಶೈಲ ಮಹಾ ಕ್ಷೇತ್ರದಲ್ಲಿ ಮಾ. 19, 2023 ರಿಂದ ಮಾ.23, 2023 ರ ವರೆಗೆ ಯುಗಾದಿ ಮಹೋತ್ಸವಗಳು ನಡೆಯುತ್ತವೆ. ಈ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಶ್ರೀ ಸ್ವಾಮಿಯವರ ಸ್ಪರ್ಶ ದರ್ಶನ ಸ್ಥಗಿತಗೊಳಿಸಲಾಗಿರುತ್ತದೆ.
ಐದು ದಿವಸಗಳ ಪರ್ಯಂತ ನಡೆಯುವ ಈ ಉತ್ಸವಗಳ ಸಂದರ್ಭದಲ್ಲಿ 16 ಲಕ್ಷಕ್ಕೂ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ. ಉತ್ಸವಗಳ ಪ್ರಾರಂಭಕ್ಕಿಂತಲೂ ಒಂದು ವಾರು ಮುಂಚಿನಿಂದ ಅಂದರೆ ಮಾರ್ಚ.12 2023 ರಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸುತ್ತಾರೆ.
ಈ ಉತ್ಸವಗಳ ಅಂಗವಾಗಿ ಕರ್ನಾಟಕ ರಾಜ್ಯದಿಂದ ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿರುವ ಸೋಲಾಪುರ, ಸಾಂಗ್ಲಿ ಮುಂತಾದ ಪ್ರಾಂತ್ಯಗಳಿಂದ ಭಕ್ತರು ಬರುತ್ತಾರೆ, ಇವರಲ್ಲಿ ಅನೇಕ ಭಕ್ತರು ಪಾದಯಾತ್ರೆಯಲ್ಲಿ ಶ್ರೀ ಶೈಲಕ್ಕೆ ಬರುವುದು ವಿಶೇಷ.
ಆದರೆ ಭಕ್ತರಿಗೆಲ್ಲರಿಗೂ ಸೌಕರ್ಯಯುತ ದರ್ಶನವನ್ನು ಕಲ್ಪಿಸಬೇಕೆಂದು ಯುಗಾದಿ ಮಹೋತ್ಸವಗಳಲ್ಲಿ ಅಂದರೆ ಮಾ. 19. 2023 ರಿಂದ ಮಾ. 23. 2023 ರ ವರೆಗೆ ಭಕ್ತರೆಲ್ಲರಿಗೂ ಸ್ವಾಮಿಯವರ ಅಲಂಕಾರ ದರ್ಶನ ಮಾತ್ರ ಕಲ್ಪಿಸಲಾಗುತ್ತದೆ.
ಉತ್ಸವ ದಿನಗಳಲ್ಲಿ ಸ್ವಾಮಿಯವರ ಸ್ಪರ್ಶ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಭಕ್ತರಲ್ಲರಿಗೂ ಸ್ಪರ್ಶದರ್ಶನ ಕಲ್ಪಿಸಬಹುದಾದರೆ ದಿನಕ್ಕೆ ಗರಿಷ್ಠ 15 ಸಾವಿರ ಭಕ್ತರಿಗೆ ಮಾತ್ರ ದರ್ಶನ ಭಾಗ್ಯ ಸಿಗಬಹುದು, ಆದರೆ ಉತ್ಸವ ದಿನಗಳಲ್ಲಿ ದಿನಕ್ಕೆ ಸುಮಾರು 60, ಸಾವಿರ ರಿಂದ 70, ವರೆಗೆ ಭಕ್ತರು ಸಂದರ್ಶಿಸುವ ಸಂಭವವಿದೆ.
ಭಕ್ತರೆಲ್ಲರಿಗೂ ಸೌಕರ್ಯಯುತ ದರ್ಶನ ಕಲ್ಪಿಸಲಾಗುತ್ತದೆ. ಆದ್ದರಿಂದ ಈ ದಿನಗಳಲ್ಲಿ ಕೇವಲ ಶ್ರೀ ಸ್ವಾಮಿಯವರ ಅಲಂಕಾರ ದರ್ಶನಕ್ಕೆ ಹಾಗೂ ಲಘುದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಉತ್ಸವ ಅವಧಿಯ ಹತ್ತು ದಿನಗಳ ಮುಂಚೆ ಅಂದರೆ ಮಾ. 09. 2023 ರಿಂದ ಮಾ. 18. 2023 ರ ವರೆಗೆ ನಿರ್ದಿಷ್ಟ ನಾಲ್ಕು ಹಂತಗಳಲ್ಲಿ ಭಕ್ತರಿಗೆ ಶ್ರೀ ಸ್ವಾಮಿಯವರ ಸ್ಪರ್ಶ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಈ ಸ್ಪರ್ಶ ದರ್ಶನದ ಟಿಕೆಟ್ ಬೆಲೆ 500 ರೂ ನಿಗದಿಪಡಿಸಲಾಗಿದೆ ಒಂದು ಹಂತದಲ್ಲಿ 1500 ಟಿಕೆಟ್ ಗಳನ್ನು ಮಾತ್ರ ವಿತರಿಸಲಾಗುವುದು ಭಕ್ತಾದಿಗಳು ಈ ಬದಲಾವಣೆ ಗಮನಿಸಬೇಕು.
ಈ ವಿಷಯದ ಮೇಲೆ ಈಗಾಗಲೇ ಬಾಗಲಕೋಟೆ ಜಿಲ್ಲೆಯ ರಬ್ಬಲಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಲವು ಭಕ್ತ ಸಂಘಗಳು, ಪಾದಯಾತ್ರೆ ವೃಂದಗಳು ಸ್ವಚ್ಚಂದ ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಂದ ದೇವಸ್ಥಾನ ಸಮನ್ವಯ ಸಮಾವೇಶ ಏರ್ಪಾಡು ಮಾಡಲಾಗಿದೆ.
ಈ ಸಮಾವೇಶದಲ್ಲಿ ಭಕ್ತ ವೃಂದ ಪ್ರವಿಧಿಗಳಿಗೆ ಉತ್ಸವ ದಿನಗಳಲ್ಲಿ ಭಕ್ತರೆಲ್ಲರಿಗೂ ದರ್ಶನದ ಅವಕಾಶ ಕಲ್ಪಿಸಲು, ದರ್ಶನ ಸಂಬಂಧ ಏರ್ಪಾಡುಗಳ ಬಗ್ಗೆ ವಿವರಿಸಲಾಗಿದೆ. ಶ್ರೀಶೈಲ ಜಗದ್ಗುರು ಪೀಠಾಧಿಪತಿಗಳಾದ ಶ್ರೀ ಚನ್ನ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿಗಳು ಕಂಡ ಈ ಸಮಾವೇಶಕ್ಕೆ ಆಗಮಿಸಿ ತಮ್ಮ ಅನುಗ್ರಹ ಸಂಭಾಷಣೆ ನೀಡಿದ್ದಾರೆ ಆದ್ದರಿಂದ ಭಕ್ತರೆಲ್ಲರೂ ಈ ವಿಷಯವನ್ನು ಗಮನಿಸಿ ದೇವಸ್ಥಾನಕ್ಕೆ ಸಹಕರಿಸಬೇಕು.
ಈ ಸಂದರ್ಭವಾಗಿ ಭಕ್ತರೆಲ್ಲರಿಗೂ ಶ್ರೀ ಭ್ರಮರಾಂಬೆ ಮತ್ತು ಶ್ರೀಮಲ್ಲಿಕಾರ್ಜುನ ಸ್ವಾಮಿಯವರ ಆಶೀರ್ವಾದಗಳು ಲಭಿಸಬೇಕೆಂದು ಆಕಾಂಕ್ಷಿಸುತ್ತೇವೆ.
ಸಶ್ರೀ ಸ್ವಾಮಿ ಅಮ್ಮನವರ ಸೇವೆಯಲ್ಲಿ ಡಿಪ್ಯೂಟಿ ಕಲೆಕ್ಟರ್ ಮತ್ತು ಕಾರ್ಯನಿರ್ವಹಣಾಧಿಕಾರಿಗಳಾದ ಸಂ. ಎಸ್. ಲವನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಖಾಸಗಿ ಕಂಪನಿ ವಿರುದ್ಧ ಪ್ರಕರಣ ದಾಖಲು: ಸೂಕ್ತ ದಾಖಲೆ ಸಲ್ಲಿಸಲು ಹಣ ಹೂಡಿಕೆದಾರಿಗೆ ಸೂಚನೆ

 

ಬೆಳಗಾವಿ, ಮಾ.08 : ಶ್ರೀಶೈಲ ಎಸ್ ಎಸ್ ಗೋಲ್ಡನ್ ಲೈಪ್ ಪ್ರವೇಟ್ ಲಿ. ಕಂಪನಿಗೆ ಹಣ ಹೂಡಿಕೆ ಮಾಡಿ ಮೊಸಹೋಗಿರುವ ಬಗ್ಗೆ ರಾಯಬಾಗ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ರೀತ್ಯಾ ಕಂಪನಿಯ ಚೇರಮನ್ ಮತ್ತು ಡೈರೆಕ್ಟಗಳಾದ ಮಹಾವೀರ ನೆಮನ್ನ ಐತವಾಡೆ ಸುನಿತಾ ಭರತ್ ಕುಮಾರ್ ಐತವಾಡೆ, ವಿದ್ಯಾಸಾಗರ ಐತವಾಡೆ, ಅನಿಲ ವಿಲಾಸ ಕಾಕಡೆ, ಸಂತೋಷ್ ಬಾಳಸೋ ಶಗನೆ, ಶಿವಾನಂದ ನೀಲೇಶ ಕುಂಬಾರ, ತಾತ್ಯಾಸಾಬು ಕಲ್ಲಪ್ಪ ಖೋತ್, ರವರುಗಳ ವಿರುದ್ಧ ಪ್ರಕರಣ ದಾಖಲಾಗುರುತ್ತದೆ.
ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿಗೆ ಸಿಐಯು ದಾವಣಗೆರೆ ಘಟಕ್ಕೆ ವರ್ಗಾಯಿಸಿದ್ದು, ಎಸ್ ಎಸ್ ಗೋಲ್ಡನ್ ಲೈಪ್ ಪ್ರವೇಟ್ ಲಿ. ಕಂಪನಿಗೆ ಹಣ ಹೂಡಿಕೆ ಮಾಡಿ ಮೊಸಹೋಗಿರುವ ಹೂಡಿಕೆದಾರರು ಮಾರ್ಚ. 20, 2023 ರ ರೋಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಪೆÇಲೀಸ್ ನಿರೀಕ್ಷಕರು (ತನಿಖಾಧಿಕಾರಿ) ಸಿಐಡಿ ಸಿಐಯು ಘಟಕ, ದಾವಣಗೆರೆ ಅವರನ್ನು ಭೇಟಿ ಮಾಡಿ ಎಂದು ಸೈಯದ್ ದಾದಾ ನೂರ್ ಅಹಮ್ಮದ್ ಪೆÇಲೀಸ್ ನಿರೀಕ್ಷಕರು (ತನಿಖಾಧಿಕಾರಿ) ಸಿಐಡಿ ಸಿಐಯು ಘಟಕ, ದಾವಣಗೆರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///