Belagavi News In Kannada | News Belgaum

ಕುಖ್ಯಾತ ಅಂತರರಾಜ್ಯ ವಂಚಕರನ್ನು ನಗರದ ಎಪಿಎಂಸಿ ಪೊಲೀಸ್‌ರು ಬಂಧಿಸಿದ್ದಾರೆ

ಬೆಳಗಾವಿ:  ಕುಖ್ಯಾತ ಅಂತರರಾಜ್ಯ ವಂಚಕರನ್ನು ನಗರದ ಎಪಿಎಂಸಿ ಪೊಲೀಸ್‌ರು ಬಂಧಿಸಿ ಇವರಿಂದ ಒಟ್ಟು 6,09,000 ರೂ. ಮೌಲ್ಯದ ಬಂಗಾರ , ನಗದು, ಮೋಟರ್‌ ಸೈಕಲ್‌ಗಳ ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಳ್ಳತನ ಹಾಗೂ ಮೋಸ ಪ್ರಕರಣದಲ್ಲಿ ಅಮೋಲ್ ಭಗವನ್ ಶೆಂಡೆ ಸಾ : ನೇಸರಿ ಹಾಗೂ ಶ್ರವಣ ಸತೀಶ ಮಿನಜಗಿ (ಸಾ : ಕೇದಾರನಾಥ ನಗರ ಇವರನ್ನು ಬಂಧಿಸಲಾಗಿದೆ.
ನಗರದ ಎಪಿಎಂಸಿ ಪೊಲೀಸ್ ಠಾಣೆಯ ಹದ್ದಿಯ ಮುರಳೀಧರ ಕಾಲನಿಯ ಸೋಮಲಿಂಗ ಅಮ್ಮಣಗಿ ಅವರ ಎಟಿಎಮ್ ಕಾರ್ಡನ್ನು ಬದಲಾಯಸಿಕೊಂಡು ಅವರ ಎಟಿಎಮ್ ಕಾರ್ಡದಿಂದ 4,03,789ರೂ.ಗಳನ್ನು ವಿಡ್ರಾಲ್ ಮಾಡಿಕೊಂಡ ಮೋಸ ಮಾಡಿರುವ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಅದರಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಹಾಗೂ ಎಸಿಪಿ ಮಾರ್ಕೆಟ್ ಉಪವಿಭಾಗ ಬೆಳಗಾವಿ ಇವರ ಮಾರ್ಗದರ್ಶದಲ್ಲಿ ಹಾಗೂ ಪಿಐ ರಮೇಶ ಸಿ ಅವಜಿ  ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಗುರುವಾರ ದಿ. 9ರಂದು ಇಬ್ಬರು ಆರೋಪಿತರ ಪತ್ತೆ ಮಾಡಿದ್ದಾರೆ. ಬಂಧಿತರಿಂದ 1,10,00 ರೂ. ಮೌಲ್ಯದ 20 ಗ್ರಾಂ ಬಂಗಾರದ ಆಭರಣಗಳು, 1.39,000 ನಗದು ಹಣ, ಒಟ್ಟು ರೂ .3.60.000 ಮೌಲ್ಯದ 02 ಮೋಟಾರು ಸೈಕಲ್‌ ಹೀಗೆ ಒಟ್ಟು 6,09,000 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರ ವಿರುದ್ಧ ಕ್ರಮ ಕೈಗೊಂಡಿದ್ದು , ತನಿಖೆ ಮುಂದುವರೆದಿದೆ.
ಈ ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರನ್ನು ಬಂಧಿಸುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಸಿಬ್ಬಂದಿಯವರ ತಂಡಕ್ಕೆ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯಾ ಹಾಗೂ ಡಿಸಿಪಿಗಳಾದ ಶೇಖರ ಟಕ್ಕನವರ, ಸ್ನೇಹಾ ಪಿ,ವ್ಹಿ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.