Belagavi News In Kannada | News Belgaum

ಪ್ರಾಣ ಪಕ್ಷಿಗಳ ಜೀವನ ನಡುವಳಿಕೆಗಳ ಸಂಸ್ಕøತಿ ಮಾನವ ಜಗತ್ತಿಗೆ ಪ್ರೇರಣೆ: ಪ್ರೊ. ಎಂ. ರಾಮಚಂದ್ರಗೌಡ


ಬೆಳಗಾವಿ, ಮಾ.10 : ಮಾನವನ ಬದುಕು ಪ್ರಾಣ ಪಕ್ಷಿಗಳಿಲ್ಲದೆ ಪರಿಪೂರ್ಣವಲ್ಲ ಹಾಗೂ ಅವುಗಳ ಸಂಸ್ಕøತಿ ಮಾನವ ಜಗತ್ತಿಗೆ ಪ್ರೇರಣಾದಾಯಕವಾಗಿದೆ ಎಂದು ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಹೇಳಿದರು.
ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ಸ್ನಾತಕೋತ್ತರ ಕೇಂದ್ರ ವಿಜಯಪುರ, ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಅಖಿಲ ಭಾರತ ಸಂಶೋಧಕರ ಸಂಘ(ರಿ) (ಂIಖಂ) ಮೈಸೂರು ಇವರುಗಳ ಸಹಯೋಗದಲ್ಲಿ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮೂಹ ಕೇಂದ್ರಿತ ಚರ್ಚೆಯಲ್ಲಿ (ಈಉಆ) “ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರಾಣ ಪಕ್ಷಿಗಳ ಸಂಸ್ಕøತಿ” ಕಾರ್ಯಕ್ರಮವನ್ನು ಸಸಿಗೆ ನಿರುಣ ಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಪರಿಸರ ಪ್ರಜ್ಞೆಯನ್ನು ಹೊಂದಬೇಕಾಗಿರುವುದು ತೀರಾ ಅವಶ್ಯಕವಾಗಿದೆ. ಕಾರಣ ಸುತ್ತಮುತ್ತಲಿನ ವಾತಾವರಣದಲ್ಲಿ ಗಿಡ, ಮರ, ಹೂ, ಬಳ್ಳಿ ಬೆಳೆಯಬೇಕು ಆ ಮೂಲಕ ಪ್ರಾಣ ಹಾಗೂ ಪಕ್ಷಿಗಳು ಆ ವಾತಾವರಣದಲ್ಲಿ ಸ್ವಚ್ಛಂದವಾಗಿ ಬದುಕಲು ಅವಕಾಶ ಮಾಡಿಕೊಟ್ಟಾಗ ಮಾತ್ರ ನಮ್ಮ ಬದುಕು ಪರಿಪೂರ್ಣವೆಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ದೆಹಲಿ ವಿಶ್ವವಿದ್ಯಾಲಯದ ಭಾಷಾ ಸಾಹಿತ್ಯ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಟಿ. ಎಸ್. ಸತ್ಯನಾಥ, ಅವರು ಮಾತನಾಡಿ ಮಾನವನಿಗೆ ಸಂಸ್ಕøತಿ ಎಂಬ ಪದದ ಬಳಕೆ ಕೇವಲ ಒಂದು ಶತಮಾನದ ಇತಿಹಾಸ ಹೊಂದಿದ್ದು, ಆದರ ಪ್ರಾಣ ಗಳ ಸಂಸ್ಕøತಿಗೆ ಹಲವಾರು ಶತಮಾನಗಳ ಇತಿಹಾಸ ಇರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಮಾತನಾಡಿ ಸಾಹಿತ್ಯ ರಚನೆಯ ಆದಿಯಿಂದಲೂ ಪ್ರಾಣ ಪಕ್ಷಿಗಳ ಸಂಸ್ಕøತಿಯನ್ನು ಸಾಹಿತ್ಯವನ್ನು ವಿಶ್ಲೇಷಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಯಾದ ಡಾ. ಕುಶಾಲ ಬರಗೂರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಶೋಧನೆಗಳು ಏಕಶಿಸ್ತೀಯ, ಬಹುಶಿಸ್ತೀಯ ಸಂಶೋಧನೆಗಳಾಗಿ ರೂಪುಗೊಳ್ಳಬೇಕು. ಸಾಹಿತ್ಯ ಬಹುಶಿಸ್ತೀಯ ಜ್ಞಾನದ ಕಣಜವಾಗಿದೆ. ಅದರಲ್ಲಿ ವಿಜ್ಞಾನವಿದೆ ಅದನ್ನು ಸಂಶೋಧಕರು ಬಳಸಿಕೊಳ್ಳಬೇಕು ಎಂಬ ಮಾದರಿಗೆ ಈ ಸಮೂಹ ಕೇಂದ್ರಿತ ಚರ್ಚೆಯನ್ನು ಆಯೋಜಿಸಲಾಗಿದೆ ಎಂದರು.
ಈ ಗೋಷ್ಠಿಗಳಲ್ಲಿ ಮೊದಲಿಗೆ ಡಾ. ಕುಶಾಲ ಬರಗೂರ ಅವರ ಸಂಶೋಧನಾ ವೈಜ್ಞಾನಿಕ ಮಾದರಿಯನ್ನು ಅಣುಸಿದ್ಧಾಂತದ ನೆಲೆಯಲ್ಲಿ ಸಾಹಿತ್ಯ ಮತ್ತು ವಿಜ್ಞಾನದ ಮಾದರಿ ಸಬಂಧ ಜ್ಞಾನವನ್ನು ಪರಿಚಯಿಸಿದರು.
ಎರಡನೆಯ ಗೋಷ್ಠಿಯಲ್ಲಿ ಪ್ರೊ. ಟಿ. ಎಸ್. ಸತ್ಯನಾಥ ಅವರು ಸಾಹಿತ್ಯದಲ್ಲಿ ಪ್ರಾಣ ಗಳ ಪ್ರಾತಿನಿಧಿಕರಣ ಎಂಬ ವಿಷಯ ಮೇಲೆ ಮಾತನಾಡಿ ಸಾಹಿತ್ಯ, ಪುರಾಣ, ಜನಪದ ಸಾಹಿತ್ಯ ಕತೆಗಳಲ್ಲಿ ಬಳಕೆಯಾಗಿರುವ ಮಾನವ ಕೇಂದ್ರಿತ ಪ್ರತಿನಿಧಿ ಪಾತ್ರಗಳಾಗಿ ಬಳಕೆಯಾಗಿರುವುದನ್ನು ಪರಿಚಯಿಸಿದರು.
ನಂತರ ಮೂರನೆಯ ಗೋಷ್ಠಿಯಲ್ಲಿ ಪ್ರೊ. ಎಸ್. ಎನ್. ಹೆಗಡೆ ಅವರು ಪ್ರಾಣ ಶಾಸ್ತ್ರದ ಸಂಶೋಧನಾ ಮಾದರಿಗಳನ್ನು ಬಿಚ್ಚಿಟ್ಟು ಅವುಗಳ ಸಾಂಘಿಕ ಮತ್ತು ಸಾಂಸ್ಕøತಿಕ ಜೀವನ ಪದ್ಧತಿಯ ನಡುವಳಿಕೆಗಳು ಸ್ವಾಭಾವಿಕವಾಗಿವೆ ಎಂಬುವುದನ್ನು ಅವರ ಸಂಶೋಧನಾ ಪ್ರಬಂಧಗಳ ಮೂಲಕ ಗೋಷ್ಠಿಯಲ್ಲಿ ಪರಿಚಯಿಸಿದರು. ಈ ಮೂರು ಗೋಷ್ಠಿಗಳ ಸಂವಾದದಲ್ಲಿ ಭಾಗವಹಿಸಿ ಚರ್ಚಿಸಿದ ವಿಚಾರ ಚಿಂತನೆಗಳ ಮೂಲಕ ಮಾನವ ಕೇಂದ್ರಿತ ಸಂಸ್ಕøತಿಯನ್ನು ವರ್ತಮಾನಕ್ಕೆ ಪರಿಶೀಲಿಸಿ, ಪರಿಸರ ಸಂರಕ್ಷಣೆಗೆ ಜೀವಿಗಳ ಸಂಸ್ಕøತಿಯ ಮೌಲ್ಯಮಾಪಿತ ಚಿಂತನೆಗಳ ಅಗತ್ಯವಾಗಿದೆ. ಇಂದು ವಿಶ್ವವಿದ್ಯಾಲಯಗಳ ಕೇಂದ್ರದಲ್ಲಿ ಹೊಸ ಶಿಕ್ಷಣ ನೀತಿ (ಎನ್.ಇ.ಪಿ) ಅನುಗುಣವಾಗಿ ಬಹುಶಿಸ್ತೀಯ ಸಂಶೋಧನಾ ಮಾದರಿಗಳು ಜಗತ್ತಿನಾದ್ಯಂತ ಬೆಳೆಯಬೇಕಾಗಿದೆ ಎಂದು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪ್ರೊ. ಗುಂಡಣ್ಣ ಕಲಬುರ್ಗಿ, ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ, ಡಾ. ಸಿದ್ದಲಿಂಗೇಶ್ವರ ಬಿದರಳ್ಳಿ, ಡಾ. ಸಂತೋಷ ಪಾಟೀಲ ಹಾಗೂ ಸಂಶೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಗಜಾನನ ನಾಯ್ಕ ಸ್ವಾಗತಿಸಿದರು, ಪ್ರೊ. ಅಶೋಕ ಡೀಸೋಜಾ ವಂದಿಸಿದರು. ಡಾ. ಚಿದಾನಂದ ಢವಳೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.