ವಿದ್ಯಾರ್ಥಿಗಳು ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಉತ್ತಮ ಭವಿಷ್ಯ. : ಶಾಸಕ ಮಹಾಂತೇಶ ದೊಡ್ಡಗೌಡರ .

ನೇಸರಗಿ- ವಿದ್ಯಾರ್ಥಿಗಳು ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸಮೀಪದ ವಣ್ಣೂರ ಗ್ರಾಮದ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ೭ ನೇ ತರಗತಿ ವಿದ್ಯಾರ್ಥಿಗಳ ಬೀಳ್ಗೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸತತ ಅದ್ಯಯನದಿಂದ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸಮರ್ಥ ವಾಗಿ ಎದುರಿಸಿ ಉತ್ತಮಅಂಕ ಗಳಿಸಬೇಕೆಂದರು.
ಬೈಲಹೊಂಗಲ ಬಿಇಓ ಎ.ಎನ್.ಪ್ಯಾಟಿ ಮಾತನಾಡಿ, ಪರೀಕ್ಷೆಗಳು ಸಮೀಪಿಸುತ್ತಿರುವದರಿಂದ ಶ್ರದ್ದೆ ಛಲದಿಂದ ಅದ್ಯಯನ ಮಾಡಬೇಕು.ಕಲಿಸಲು ಪ್ರಯತ್ನಿಸುತ್ತಿರುವ ತಂದೆ ತಾಯಿ ಶ್ರಮದಾಯಕ ಜೀವನವನ್ನು ಅರ್ಥ ಮಾಡಿಕೊಂಡು ಓದಿನಲ್ಲಿ ಹೆಚ್ಚಿನ ವೇಳೆ ತೊಡಗಬೇಕೆಂದರು.
ಎಸ್.ಡಿ.ಎಂಸಿ ಅಧ್ಯಕ್ಷ ರವಿಗೌಡ್ರ ಪಾಟೀಲ, ಗ್ರಾ.ಪಂ ಅದ್ಯಕ್ಷ ಅಣ್ಣಾಸಾಹೇಬ ದೇಸಾಯಿ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ, ಸರಕಾರಿ ಪ.ಪೂ ಮಹಾವಿದ್ಯಾಲಯ ಪ್ರಾಚಾರ್ಯ ಆರ್.ಎಸ್.ಬಸನ್ನವರ, ಮುಖ್ಯೋಪಾಧ್ಯಾಯರಾದ ಆರ್.ಎಫ್.ಜುಂಜನ್ನವರ, ಅರ್ಜುನ ಕಡೆಟ್ಟಿ,ಡಿಎಸ್‌ಎಸ್ ಮುಖಂಡ ಮನೋಜ ಕೆಳಗೇರಿ, ಮಲ್ಲಯ್ಯ ಯರಗಟ್ಟಿಮಠ, ಬಸನಿಂಗಪ್ಪ ಬಶೆಟ್ಟಿ, ಬಾಬು ಶೇಬನ್ನವರ, ಸತ್ಯನಾಯ್ಕ ನಾಯ್ಕ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಬಿ.ಸಂಗನಗೌಡರ, ರಾಮಪ್ಪ ಕೊಳವಿ, ಲಕ್ಷ್ಮಣ ಮಕ್ಕಳಗೇರಿ,ಮಾರುತಿ ಕೆಳಗೇರಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ನೀಲಮ್ಮಾ ಅರಬಳ್ಳಿ,ಶರೀಪ ಲಕ್ಕುಂಡಿ, ಕುಭೇಂದ್ರ ದಳವಾಯಿ, ಮಾರುತಿ ನಾಯ್ಕ,ಎಸ್.ಐ.ಮಿರ್ಜನ್ನವರ, ಸಿ.ಐ.ಪಾಟೀಲ , ಶಿಕ್ಷಕ ಪತ್ತಾರ ಸ್ವಾಗತಿಸಿದರು. ಎಸ್.ಬಿ.ಹುದ್ದಾರ ನಿರೂಪಿಸಿ, ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.