ಹುಕ್ಕೇರಿ ಪಟ್ಟಣದಲ್ಲಿ ಕಣ್ಣು ತಪಾಸಣೆ ಹಾಗೂ ಪೆÇರೆ ಚಿಕಿತ್ಸೆಯಲ್ಲಿ 550 ಜನರು ಪಾಲ್ಗೊಂಡು 220 ಜನರು ಉಚಿತ ನೇತ್ರ ಚಿಕಿತ್ಸೆ ಮಾಡಿಕೊಂಡು ಶಿಬಿರದ ಸದುಪಯೋಗ ಮಾಡಿಕೊಂಡಿದ್ದು ಶಿಬಿರವನ್ನು ಯಶಸ್ವಿಗೊಳಿಸಿದ ವೈದ್ಯ

ಹುಕ್ಕೇರಿ: ಹುಕ್ಕೇರಿ ಪಟ್ಟಣದಲ್ಲಿ ಕಣ್ಣು ತಪಾಸಣೆ ಹಾಗೂ ಪೆÇರೆ ಚಿಕಿತ್ಸೆಯಲ್ಲಿ 550 ಜನರು ಪಾಲ್ಗೊಂಡು 220 ಜನರು ಉಚಿತ ನೇತ್ರ ಚಿಕಿತ್ಸೆ ಮಾಡಿಕೊಂಡು ಶಿಬಿರದ ಸದುಪಯೋಗ ಮಾಡಿಕೊಂಡಿದ್ದು ಶಿಬಿರವನ್ನು ಯಶಸ್ವಿಗೊಳಿಸಿದ ವೈದ್ಯರಿಗೆ ಕೃತಜ್ಞತೆಗಳು ಎಂದು ಹಿರಾಶುಗರ ಚೇರಮನ್
ನಿಖಿಲ್ ಕತ್ತಿ ಸಲ್ಲಿಸಿದರು.
ಸ್ಥಳಿಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಾಗೂ ವಿಶ್ವರಾಜ ಟ್ರಷ್ಟ ಆಶ್ರಯದಲ್ಲಿ ಮೂರು ದಿನಗಳವರೆಗೆ ಕ್ಷೇತ್ರದ ಶಾಸಕ ದಿ ಉಮೇಶ ಕತ್ತಿ ಅವರ ಹುಟ್ಟು ಹಬ್ಬದ ನಿಮಿತ್ಯ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆ ಮಾಡಿಕೊಂಡವರಿಗೆ ಕನ್ನಡಕ ವಿತರಣೆಯ ಸಮಾರೋಪದಲ್ಲಿ ಮಾತನಾಡಿದರು.
ವಿಶ್ವರಾಜ ಟ್ರಷ್ಟ ಮೂಲಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸ್ ಘಟಕ ಪ್ರಾರಂಬಿಸಲಾಗಿದೆ.ಜೊತೆಗೆ ಡಯಾಲಿಸಿಸ ,ದಂತ,ಹಾಗೂ ಹೃದಯ ಸಂಬಂಧಿ ಕಾಯಿಲೆ ಶಿಬಿರಗಳನ್ನು ಹಮ್ಮಿಕೊಂಡ ಸಮಾಜಪೂರಕ ಕಾರ್ಯಕ್ರಮ ಗಳನ್ನು ಏರ್ಪಡಿಸಲಾಗುವದು.
ಮಾಜಿ.ಪಂ ಸದಸ್ಯ ಪವನ ಕತ್ತಿ ಮಾತನಾಡಿ ನಾಲ್ಕು ದಶಕಗಳ ಕಾಲ ಕ್ಷೇತ್ರದ ಸೇವೆ ಸಲ್ಲಿಸಿದ ದಿ ಉಮೇಶ ಕತ್ತಿ ಅವರ ಹುಟ್ಟು 63ನೇ ಹುಟ್ಟು ಹಬ್ಬದ ನಿಮಿತ್ಯ ಜನತೆಗೆ ಅನುಕೂಲವಾಗುವ ದಿಶೆಯಲ್ಲಿಕಣ್ಣು ಪರೀಕ್ಷೆ ಹಾಗೂ ಚಿಕಿತ್ಸೆಯಲ್ಲಿ ನಿರೀಕ್ಷೆಗೆ ಮೀರಿ ಜನರು ಪಾಲ್ಗೋಂಡಿದ್ದರು. ಅವರಿಗೆ ಊಟದ ವ್ಯವಸ್ಥೆಯನ್ನು ಕೂಡ ಟ್ರಸ್ಟ್ ಮೂಲಕ ಮಾಡಿದ್ದೇವೆ ಎಂದರು. ಕತ್ತಿ ಕುಟುಂಭದ ಮೇಲಿರುವ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ತಾಲೂಕಾ ಆರೋಗ್ಯಧಿಕಾರಿ ಡಾ. ಉದಯ ಕುಡಚಿ, ಮಾತನಾಡಿ ಆರೋಗ್ಯ ಇಲಾಖೆಯ ಮುಖಾಂತರ ಕ್ಷೇತ್ರದ ಜನತೆಗೆ ವಿಶ್ವರಾಜ ಟ್ರಸ್ಟದ ಕೊಡುಗೆ ಅಪಾರವಿದೆ ಎಂದರು.ಸರಕಾರದ ನಿರ್ದೇಶನ ಮೇರೆಗೆ ಪಟ್ಟಣದಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗುವದು.
ಮುಖ್ಯ ವೈಧ್ದರಾದ ಡಾ ಮಹಾಂತೇಶ ನರಸನ್ನವರ, ನೇತ್ರ ತಜ್ಞರಾದ ಡಾ.ಸಮೀರ ಕಿತ್ತೂರಕರ,ಡಾ. ಪ್ರಗತಿ ಬೋರಗಾವಿ, ಡಾ.ವಿಶಾಲ ಹಡಪದ,ವರ್ಧಮಾನ ಬದನೆಕಾಯಿ. ಸಂಸುದ್ದಿ ಸೇರಿದಂತೆ ಎಂಟು ಜನ ನುರಿತ ವೈದ್ಯರು,ತಪಾಸಣೆ ಮಾಡಿದರು.
ಹಿರಾ ಶುಗರ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಸುರೇಶ ದೊಡಲಿಂಗನ್ನವರ,ಬಸವರಾಜ ಮರಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಜ್ವಲ ನಿಲಜಗಿ ಮಹಾವೀರ ನಿಲಜಗಿ , ಪುರಸಬೆ ಸದಸ್ಯ ರಾಜು ಮುನ್ನೋಳಿ ,ಮಿರ್ಜಾ ಮೋಮಿನ, ಶಹಜಾನ ಬಡಗಾವಿ, ಮುಖಂಡರು ಪಾಲ್ಗೊಂಡಿದ್ದರು.